ಈ ಪ್ರಾಣಿಗಳು ನಿಮ್ಮ ಮನೆಗೆ ಬಂದರೆ ಏನರ್ಥ ಗೊತ್ತಾ? – ಯಾವುದೇ ಕಾರಣಕ್ಕೂ ಇವುಗಳನ್ನ ಓಡಿಸೋಕೆ ಹೋಗಬೇಡಿ

ದೇವರು ತನ್ನ ಸಂದೇಶಗಳನ್ನು ನೀಡಲು ಅಥವಾ ನಮ್ಮ ಅದೃಷ್ಟದ ಬಾಗಿಲು ತೆರೆಯಲು ಮೂಖ ಪ್ರಾಣಿಗಳನ್ನು ದೂತರನ್ನಾಗಿ ನಮ್ಮ ಮನೆಗೆ ಕಳುಹಿಸುತ್ತಾನಂತೆ. ಹೀಗಾಗಿ ನಿಮ್ಮ ಮನೆಯ ಬಾಗಿಲಿಗೆ ಬಂದ ಪ್ರಾಣಿಗಳನ್ನು ನಿರ್ಲಕ್ಷಿಸಬೇಡಿ; ಅದು ಯಾವುದಾದರು ಒಂದು ವಿಷಯದ ಸಂಕೇತವಾಗಿರಬಹುದು. ಇದೀಗ ಮನೆ ಬಾಗಿಲಿಗೆ ಯಾವ ಪ್ರಾಣಿ ಬಂದರೆ ಏನರ್ಥ ಎಂದು ತಿಳಿಯೋಣ ಬನ್ನಿ.
ಹಸು
ಹಸು ಬಂದು ನಿಮ್ಮ ಬಾಗಿಲಲ್ಲಿ ಅಂಬ ಎಂದು ಕೂಗಿದರೆ, ಸಾಕ್ಷಾತ್ ಲಕ್ಷ್ಮಿಯೇ ಒಳ ಬರಲು ಅನುಮತಿ ಕೇಳುತ್ತಿದ್ದಾಳೆ ಎಂದರ್ಥ. ಹಸು ಶುಕ್ರ ಗ್ರಹದ ಸಂಕೇತವಾಗಿದ್ದು, ಸುಖ-ಭೋಗಗಳನ್ನು ತರುತ್ತದೆ.
ನಾಯಿ
ಪರಿಚಯವಿಲ್ಲದ ನಾಯಿ ನಿಮ್ಮನ್ನು ಹಿಂಬಾಲಿಸಿದರೆ ಅಥವಾ ಬಾಗಿಲ ಬಳಿ ಕುಳಿತರೆ, ಅದು ನಿಮ್ಮ ಮನೆಗೆ ಬರಲಿದ್ದ ದುಷ್ಟ ಶಕ್ತಿ ಅಥವಾ ಕಾಯಿಲೆಗಳನ್ನು ತಡೆಯಲು ಸಾಕ್ಷಾತ್ ಭೈರವನೇ ಬಂದಿದ್ದಾನೆ ಎಂದರ್ಥ.
ಕಾಗೆ (ಪಿತೃಗಳ ಸ್ವರೂಪ)
ಕಾಗೆ ಮಹಡಿಯ ಮೇಲೆ ಕೂಗಿದರೆ ಅನಿರೀಕ್ಷಿತ ಸಹಾಯ ಅಥವಾ ಸುದ್ದಿ ಸಿಗಲಿದೆ ಎಂದರ್ಥ. ಆದರೆ ಅದು ಆಹಾರ ಮುಟ್ಟದೆ ಹೋದರೆ ಪಿತೃದೋಷದ ಲಕ್ಷಣ.
ಗುಬ್ಬಚ್ಚಿ ಗೂಡು
ಯಾವ ಮನೆಯಲ್ಲಿ ಪಕ್ಷಿಗಳು ನಿರ್ಭಯವಾಗಿ ಗೂಡು ಕಟ್ಟುತ್ತವೆಯೋ ಅಲ್ಲಿ ಗೃಹಲಕ್ಷ್ಮಿ ನೆಲೆಸುತ್ತಾಳೆ ಮತ್ತು ವಾಸ್ತುದೋಷಗಳು ನಿವಾರಣೆಯಾಗುತ್ತವೆ ಎಂದು ಸನಾತನ ಮಾರ್ಗ ಯೂಟ್ಯೂಬ್ ಚಾನೆಲ್ ವರದಿ ಮಾಡಿದೆ.
ಚಿಟ್ಟೆ ಮತ್ತು ಹಾವು
ಬಣ್ಣದ ಚಿಟ್ಟೆ ಮನೆಗೆ ಬಂದರೆ ಕಷ್ಟದ ದಿನಗಳು ಕಳೆದು ಹೊಸ ಜೀವನ ಆರಂಭವಾಗಲಿದೆ ಎಂದರ್ಥ. ಹಾವು ಕಾಣಿಸಿಕೊಂಡರೆ ಅಥವಾ ಕನಸಿನಲ್ಲಿ ಬಂದರೆ ಅದು ಕುಲದೇವತೆಯ ಅನುಗ್ರಹ ಮತ್ತು ಭೂಮಿಯ ಲಾಭದ ಸಂಕೇತ.
ಹಲ್ಲಿ (ಗೌಳಿ ಶಾಸ್ತ್ರ)
ನೀವು ಯಾವುದೋ ಮುಖ್ಯ ಕೆಲಸದ ಬಗ್ಗೆ ಯೋಚಿಸುವಾಗ ಹಲ್ಲಿ ಶಬ್ದ ಮಾಡಿದರೆ, ಆ ಕೆಲಸ ಯಶಸ್ವಿಯಾಗುತ್ತದೆ ಎಂದರ್ಥ.
ಕಪ್ಪು ಇರುವೆಗಳು
ಅಕ್ಕಿ ಅಥವಾ ಸಕ್ಕರೆ ಡಬ್ಬದ ಹತ್ತಿರ ಇರುವೆಗಳ ಸಾಲು ಕಂಡರೆ ಅದು ಆರ್ಥಿಕ ಅಭಿವೃದ್ಧಿಯ ಸಂಕೇತ. ಕೆಂಪು ಇರುವೆಗಳು ಜಗಳದ ಸಂಕೇತ.

ನೋಡಿರಿ

