ಬರಪೀಡಿತ ತಾಲೂಕುಗಳಲ್ಲಿ 5ಕೆ.ಜಿ ಅಕ್ಕಿ ಬದಲು 10 ಕೆ.ಜಿ ಅಕ್ಕಿ ವಿತರಣೆ – ಸರ್ಕಾರದಿಂದ ಘೋಷಣೆ

ಬರಪೀಡಿತ ತಾಲೂಕುಗಳಲ್ಲಿ 5ಕೆ.ಜಿ ಅಕ್ಕಿ ಬದಲು 10 ಕೆ.ಜಿ ಅಕ್ಕಿ ವಿತರಣೆ – ಸರ್ಕಾರದಿಂದ ಘೋಷಣೆ

ರಾಜ್ಯದಲ್ಲಿ ಮಳೆಯ ಕೊರತೆ ಎದುರಾಗಿದೆ. ನೀರಿಲ್ಲದೆ ಬರ ಆವರಿಸಿದೆ. ಬೆಳೆ ಬೆಳೆಯಲಾಗದೇ ರೈತರು ಕಂಗಾಲಾಗಿದ್ದಾರೆ. ರಾಜ್ಯದ 114 ತಾಲೂಕುಗಳಲ್ಲಿ ಈಗಾಗಲೇ ಬರದ ಪರಿಸ್ಥಿತಿ ಇದ್ದು, ಸರ್ಕಾರದಿಂದ ಬರ ಪೀಡಿತ ತಾಲೂಕುಗಳ ಘೋಷಣೆಯೊಂದೇ ಬಾಕಿಯಿದೆ. ಇದೀಗ ಬರಪೀಡಿತ ತಾಲೂಕುಗಳ ಬವಣೆ ನೀಗಲು ಸರ್ಕಾರ ಮುಂದಾಗಿದೆ. ರಾಜ್ಯದ ಬರಪೀಡಿತ ತಾಲೂಕುಗಳಿಗೆ ಹಣದ ಬದಲು 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಆಹಾರ ಸಚಿವ ಕೆ ಎಚ್ ಮುನಿಯಪ್ಪ ಹೇಳಿದ್ದಾರೆ.

ಇದನ್ನೂ ಓದಿ: 4 ಗ್ಯಾರಂಟಿಗಳ ಜಾರಿ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಗೆ ರಾಜ್ಯ ಸರ್ಕಾರದಿಂದ ಪ್ಲಾನ್! – ಏನಿದು ಗೃಹ ಆರೋಗ್ಯ ಯೋಜನೆ?

ರಾಜ್ಯದ 114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಈ ತಾಲೂಕುಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರದಿಂದ ಸಿದ್ದತೆ ನಡೆಸಲಾಗುತ್ತಿದೆ ಎಂದು ಆಹಾರ ಸಚಿವರು ತಿಳಿಸಿದರು. ಅಕ್ಕಿ ಖರೀದಿ ವಿಚಾರವಾಗಿ ಮಾತನಾಡಿದ ಸಚಿವ ಕೆ ಎಚ್ ಮುನಿಯಪ್ಪ ಅವರು, ಮುಂದಿನ ಒಂದು ವಾರದಲ್ಲಿ ಅಕ್ಕಿ ಖರೀದಿ ಪೈನಲ್ ಆಗಲಿದೆ. ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಡ ಸರ್ಕಾರ ಅಕ್ಕಿ ನೀಡಲು ಮುಂದೆ ಬಂದಿವೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬೆಲೆ ನಿಗದಿ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಹತ್ತು ಕೆಜಿ ಅಕ್ಕಿ ಕೋಡುವ ಕೆಲಸ ಮಾಡುತ್ತೇವೆ ಎಂದರು.

ಇನ್ನು ಆಗಸ್ಟ್  ತಿಂಗಳಿನಲ್ಲಿ ಉತ್ತಮ ಮಳೆಯಾಗುತ್ತೆ ಎಂದು ರಾಜ್ಯದ ಜನತೆ ಕಾಯುತ್ತಿದ್ದರು. ಆದರೆ, ಅಂದುಕೊಂಡಂತೆ ಮಳೆಯಾಗಿಲ್ಲ. ಮಳೆ ಅಭಾವದಿಂದ ರಾಜ್ಯದ ರೈತರು ಕಂಗಾಲಾಗಿದ್ದಾರೆ.

suddiyaana