ಮಗನನ್ನು ಕೊಲ್ಲಲು ಸುಪಾರಿ ಕೊಟ್ಟ ತಾಯಿಯೇ ಬಲಿಯಾದ್ಲು! – ಅಂದು ನಡೆದಿದ್ದೇನು ಗೊತ್ತಾ?

ಮಗನನ್ನು ಕೊಲ್ಲಲು ಸುಪಾರಿ ಕೊಟ್ಟ ತಾಯಿಯೇ ಬಲಿಯಾದ್ಲು! – ಅಂದು ನಡೆದಿದ್ದೇನು ಗೊತ್ತಾ?

ಹೆತ್ತಮ್ಮನಿಗೆ ಹೆಗ್ಗಣ ಮುದ್ದು ಎಂಬ ಮಾತನ್ನ ನಾವು ಕೇಳಿದ್ದೇವೆ. ಮಕ್ಕಳಿಗಾಗಿ ತಾಯಿ ಏನು ಬೇಕಾದ್ರೂ ಮಾಡೋದಿಕ್ಕೆ ರೆಡಿ ಇರುತ್ತಾರೆ. ಆದ್ರೆ ಇಲ್ಲೊಂದು ಕಡೆ ತಾಯಿಯೇ ಮಗನನ್ನು ಕೊಲ್ಲಲು ಸುಪಾರಿಕೊಟ್ಟಿದ್ದು, ಇದು ಆಕೆಗೆ ಮುಳುವಾಗಿದೆ. ಸುಪಾರಿ ತೆಗೆದುಕೊಂಡವ ಹಣದ ಆಸೆಗೆ ಆಕೆಯನ್ನೇ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: RCB ಫ್ಯಾನ್ಸ್‌ಗೆ ಬಿಗ್‌ ಶಾಕ್!‌ – RCB Vs SRH ಮ್ಯಾಚ್‌ ಟಿಕೆಟ್‌ ದರ ಜಸ್ಟ್‌ 47,000 ರೂಪಾಯಿ!

ಈ ಘಟನೆ ಅಹಮದಾಬಾದ್ನ ನರೋಡಾ ಎಂಬಲ್ಲಿ ನಡೆದಿದೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ 2021 ರಲ್ಲಿ ನಡೆದ ಕೊಲೆ ಮತ್ತು ದರೋಡೆ ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿ ಅಜಯ್ ಮಿಶ್ರಾ ಎಂಬಾತನನ್ನು ಅಹಮದಾಬಾದ್ ಅಪರಾಧ ವಿಭಾಗವು ನರೋಡಾ ಪ್ರದೇಶದಲ್ಲಿ ಬಂಧಿಸಿದ್ದಾರೆ.

ಏನಿದು ಘಟನೆ?

ಶಕುಂತಲಾ ಯಾದವ್ ಮತ್ತು ಅವರ ಕಿರಿಯ ಮಗ ಅಮಿತ್ ಯಾದವ್, ತಮ್ಮ ಹಿರಿಯ ಮಗನನ್ನು ಕೊಲ್ಲಲು ಪ್ಲ್ಯಾನ್‌ ಮಾಡಿದ್ರು. ಇದಕ್ಕಾಗಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅಜಯ್ ಮಿಶ್ರಾ ಎಂಬಾತನಿಗೆ ಸುಪಾರಿ ಕೊಟ್ಟಿದ್ರು. ಶಕುಂತಲಾ ಹಿರಿಮಗನನ್ನು ಕೊಲ್ಲಲು 4 ಲಕ್ಷ ರೂ. ಒಪ್ಪಂದ ಮಾಡಿಕೊಳ್ಳಲಾಗಿತ್ತು, ಅದರಲ್ಲಿ 1 ಲಕ್ಷ ರೂ. ಮುಂಗಡವಾಗಿ ನೀಡಲಾಗಿತ್ತು. ಆದ್ರೆ ಶಕುಂತಲಾ ಪ್ಲ್ಯಾನ್‌ ಆಕೆಗೆ ಉಲ್ಟಾ ಹೊಡೆದಿದೆ.  ಅಮಿತ್‌ ಮಿಶ್ರಾ ಶಕುಂತಲಾ ಬಳಿ ಹಣ ಪಡೆದು ತನ್ನ ಹಳ್ಳಿಗೆ ಓಡಿಹೋಗಿದ್ದ. ಶಕುಂತಲಾ ಮತ್ತು ಅಮಿತ್ ಅವನನ್ನು ಪತ್ತೆಹಚ್ಚಿ ತಮ್ಮ ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸಿದಾಗ, ಅವನು ಅದನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದ. ಆದ್ರೆ ಆತ ಹಣವನ್ನು ವಾಪಸ್ ಕೊಟ್ಟಿರಲಿಲ್ಲ. ಬಳಿಕ ಅಮಿತ್‌ ಮಿಶ್ರಾ ತನ್ನ ಸಹಚರ ಕೇತನ್ ತಿವಾರಿ ಜೊತೆ ರಾಯ್‌ಪುರದಲ್ಲಿರುವ ಶಕುಂತಲಾ ಇದ್ದ ಆಕೆಯ ಮನೆಗೆ ಹೋಗಿದ್ದ. ಆ ಮಹಿಳೆಯನ್ನೇ ಕೊಂದಿದ್ದಾನೆ. ಹಗ್ಗದಿಂದ ಕತ್ತು ಹಿಸುಕಿ ಕೊಂದು ಸುಮಾರು 10 ಲಕ್ಷ ರೂ. ನಗದು ಮತ್ತು ಸುಮಾರು 350-450 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಕದ್ದ ಚಿನ್ನವನ್ನು ನಂತರ ಮಾರಾಟ ಮಾಡಿದ್ದ ಎನ್ನಲಾಗ್ತಿದೆ.

ಇನ್ನು ಬಂಧನದಿಂದ ತಪ್ಪಿಸಿಕೊಳ್ಳಲು, ಮಿಶ್ರಾ ತನ್ನ ಮೊಬೈಲ್ ಫೋನ್ ಬಿಟ್ಟು, ಪ್ಯಾನ್ ಮತ್ತು ಆಧಾರ್‌ನಂತಹ ಗುರುತಿನ ದಾಖಲೆಗಳನ್ನು ಬಳಸುವುದನ್ನು ತಪ್ಪಿಸಿದ್ದ, 2022 ರಲ್ಲಿ ಅಹಮದಾಬಾದ್‌ನ ನರೋಡಾ ಪ್ರದೇಶಕ್ಕೆ ಹೋಗುವ ಮೊದಲು ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತಲೇ ಇದ್ದ, ಆದರೆ ಅದು ಯಾರ ಗಮನಕ್ಕೂ ಬಂದಿರಲಿಲ್ಲ. ಇದೀಗ ಈ ಪ್ರಕರಣದ ನಡೆದು ಐದು ವರ್ಷಗಳ  ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Shwetha M