ಟಾರ್ಗೆಟ್‌ ರೀಚ್‌ ಆಗಿಲ್ಲ ಎಂದು ಕೆಲಸದಿಂದ ವಜಾ! – ಸಿಟ್ಟಿಗೆದ್ದ ಉದ್ಯೋಗಿಗಳು ಮಾಡಿದ್ದೇನು ಗೊತ್ತಾ?

ಟಾರ್ಗೆಟ್‌ ರೀಚ್‌ ಆಗಿಲ್ಲ ಎಂದು ಕೆಲಸದಿಂದ ವಜಾ! – ಸಿಟ್ಟಿಗೆದ್ದ ಉದ್ಯೋಗಿಗಳು ಮಾಡಿದ್ದೇನು ಗೊತ್ತಾ?

ಕಂಪನಿಯಲ್ಲಿ ಕೆಲ ಉದ್ಯೋಗಿಗಳ ಕೆಲಸ ಇಷ್ಟ ಆಗಿಲ್ಲ ಅಥವಾ ಕೆಲ ಕಾರಣಗಳಿಂದ ಕೆಲಸದಿಂದ ವಜಾ ಮಾಡಲಾಗುತ್ತದೆ. ಕೆಲಸ ಹೋದಾಗ ಉದ್ಯೋಗಿಗಳಿಗೆ ಬೇಜಾರು ಆಗೋಗು, ಸಿಟ್ಟು ಬರೋದು ಕಾಮನ್‌. ಬಳಿಕ ಆ ಕೆಟ್ಟ ಘಟನೆಯಿಂದ ಹೊರ ಬಂದು ಬೇರೆ ಕಂಪನಿಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಆದ್ರೆ ಇಲ್ಲಿಬ್ಬರನ್ನು ಬಾಸ್‌ ಕೆಲಸದಿಂದ ವಜಾ ಮಾಡಿದ್ದಕ್ಕೆ ಕಂಪನಿ ಮೇಲೆ ಸೇಡು ತೀರಿಸಿಕೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಸಿಲಿಕಾನ್‌ ಬೆಂಗಳೂರಿನಲ್ಲಿ ಈ ಘಟನೆ ನಡೆದಿದೆ. ಪೃಥ್ವಿ ಪಾರ್ಕ್‌ ಸ್ಟೇ ರಿಯಲ್‌ ಎಸ್ಟೇಲ್‌ ಕಂಪನಿಯಲ್ಲಿ ರಾಹುಲ್ ಪೂಜಾರಿ ಹಾಗೂ ಪೀಟರ್ ಜಾನ್ ಎಂಬುವರು ಕೆಲಸ ಮಾಡುತ್ತಿದ್ದರು. ಈ ಇಬ್ಬರು ಉದ್ಯೋಗಿಗಳನ್ನು ಕಂಪನಿ ಕೆಲಸದಿಂದ ವಜಾ ಮಾಡಿದೆ. ಬಾಸ್‌ ಕೆಲಸದಿಂದ ತೆಗೆದಿದ್ದಕ್ಕೆ ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟಿನಲ್ಲಿ ಆ ಉದ್ಯೋಗಿಗಳು ಕಚೇರಿಗೆ ಬಂದು ಯಾರೂ ಇಲ್ಲದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಬರೋಬ್ಬರಿ 11 ಲಕ್ಷ ಮೌಲ್ಯದ ಪೀಠೋಪಕರಣಗಳು ಭಸ್ಮವಾಗಿವೆ. ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಫ್ರಿಡ್ಜ್ ಬಳಕದಾರರೇ ಈ ತಪ್ಪುಗಳನ್ನ ಮಾಡಬೇಡಿ – ಕಂಪ್ರೆಸರ್ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಸಾವು!

ಕೆಲಸ ಕಳೆದುಕೊಳ್ಳಲು ಏನು ಕಾರಣ?

‘ರಾಹುಲ್ ಹಾಗೂ ಜಾನ್ ಅವರು ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಕಂಪನಿ ಇಂತಿಷ್ಟು ಟಾರ್ಗೆಟ್‌ ಕಂಪ್ಲೀಟ್‌ ಮಾಡಬೇಕು ಅಂತಾ ಹೇಳಿತ್ತು. ಆದರೆ ಅವರಿಗೆ ನೀಡಿದ್ದ ಟಾರ್ಗೆಟ್ ತಲುಪದ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಅವರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಅದಾದ ಮೇಲೆ ಸಂಬಳ ಪಾವತಿಸುವಂತೆ ಬೆದರಿಕೆ ಹಾಕಿದ್ದರು. ನಂತರ, ಬಂದು ಬೆಂಕಿ ಹಾಕಿದ್ದಾರೆ. ಇದರಿಂದ ಸ್ವಿಚ್ ಬೋರ್ಡ್ ಹಾಗೂ ಪೀಠೋಪಕರಣಗಳು ಭಸ್ಮವಾಗಿವೆ’ ಎಂದು ಕಂಪನಿ ಮಾಲೀಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು

ಕಂಪನಿಗೆ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳು ಈಗ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪುಟ್ಟೇನಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Shwetha M