ಗ್ರಾಹಕರಿಗೆ ಮತ್ತಷ್ಟು`ಖಾರʼವಾದ ಒಣ ಮೆಣಸಿನಕಾಯಿ – ಕೆಜಿಗೆ ಎಷ್ಟು ರೂಪಾಯಿ ಗೊತ್ತಾ?

ಮೆಣಸಿನಕಾಯಿಯನ್ನು ಬಹುತೇಕ ಖಾದ್ಯಗಳಲ್ಲಿ ಬಳಲಾಗುತ್ತದೆ. ಆದರೆ ಅಡುಗೆಗೆ ಅಗತ್ಯವಾಗಿ ಬೇಕಾಗಿರುವ ಮೆಣಸಿನಕಾಯಿ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಗ್ರಾಹಕರ ಪಾಲಿಗೆ ಖಾರವಾಗಿ ಪರಿಣಮಿಸಿದೆ.
ಮೆಣಸಿನಕಾಯಿ ಬೆಲೆ ಗಣನೀಯವಾಗಿ ಏರಿಕೆ ಕಂಡಿದ್ದು, ಕೇವಲ ಎರಡು ತಿಂಗಳ ಅಂತರದಲ್ಲಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ಬೆಲೆ ಏರಿಕೆಯ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.ಇದರಿಂದಾಗಿ ಗ್ರಾಹಕರಿಗೆ ಕಣ್ಣೀರು ಬರುವಂತೆ ಮಾಡಿದೆ.
ಇದನ್ನೂ ಓದಿ: 81 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ – 5 ವರ್ಷದ ಬಳಿಕ ಶತಮಾನದ ಹಿಂದಿನ ದೇವಾಲಯ ಗೋಚರ
ಬ್ಯಾಡಗಿ ಮೆಣಸಿನಕಾಯಿಯಲ್ಲಿಯೇ ಹತ್ತಾರು ನಮೂನೆಗಳು ಇವೆ. 450 ರೂ. ರಿಂದ ಆರಂಭವಾಗಿದ್ದು, ಉತ್ತಮ ಗುಣಮಟ್ಟದ ಮೆಣಸಿನಕಾಯಿ 850 ರೂ.ದರವಿದೆ. ಅದೇ ರೀತಿಯಾಗಿ ಬಳ್ಳಾರಿ ಬ್ಯಾಡಗಿಯ ಮೆನಸಿನಕಾಯಿ 350 ರೂ. ನಿಂದ 400 ರೂ.ವರೆಗೆ ದೊರೆಯುತ್ತಿದೆ. ಇನ್ನೂ ಗುಂಟೂರ ಮೆನಸಿನಕಾಯಿ 200 ರಿಂದ 350 ರೂ.ವರೆಗೆ ಮಾರಾಟವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಅರ್ಧದಷ್ಟು ಇರಬೇಕಾಗಿತ್ತು. ಆದರೆ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿರುವುದರಿಂದ ಗ್ರಾಹಕರು ಕೂಡಾ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೆನಸಿನಕಾಯಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.
ಎರಡು ದಶಕಗಳಲ್ಲಿ ಬೆಲೆಯಲ್ಲಿ ಇಷ್ಟೊಂದು ಏರು ಪೇರುಗಳಾಗಿರಲಿಲ್ಲ. ಉತ್ತಮ ಗುಣಮಟ್ಟದ ಬ್ಯಾಡಗಿ ಮೆನಸಿಕಾಯಿಯನ್ನು ಮೊದಲು ಹತ್ತಾರು ಚೀಲದಷ್ಟು ಖರೀದಿ ಮಾಡುತ್ತಿದ್ದೇವು. ಈಗ ಬೆಲೆ ಹೆಚ್ಚಾಗಿರುವುದರಿಂದ ಮತ್ತು ಮುಂದಿನ ದಿನಗಳಲ್ಲಿ ಬೆಲೆಯ ಅನಿಶ್ಚಿತತೆಯಿಂದಾಗಿ ಕೇವಲ ಒಂದು ಚೀಲ ಮಾತ್ರ ಖರೀದಿ ಮಾಡಿದ್ದೇವೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.