ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್? – ಕೈಯಲ್ಲಿನ ಟ್ಯಾಟೂ ಮೀನಿಂಗ್‌ ಏನು?

ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್? – ಕೈಯಲ್ಲಿನ ಟ್ಯಾಟೂ ಮೀನಿಂಗ್‌ ಏನು?

ಬಾಲಿವುಡ್‌ ಬ್ಯೂಟಿ ದಿಶಾ ಪಟಾನಿ.. ತನ್ನ ಸೌಂದರ್ಯ ಹಾಗೂ ನಟನೆಯಿಂದಲೇ ಸಿನಿಪ್ರಿಯರ ಮನಗೆದ್ದಿದ್ದಾರೆ. ಸಿನಿಮಾ ಹೊರತಾಗಿ ದಿಶಾ ಪಟಾಣಿ ತಮ್ಮ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ.. ಬಾಲಿವುಡ್‌ ಬ್ಯೂಟಿ ಹೆಸರಿನೊಂದಿಗೆ ಸದಾ ಒಂದಲ್ಲ ಒಂದು ಹೆಸರು ತಳುಕು ಹಾಕಿಕೊಳ್ಳುತ್ತಲೇ ಇದೆ.. ಇದೀಗ ದಿಶಾ ಪಟಾನಿ ನಟ ಪ್ರಭಾಸ್‌ ಜೊತೆ ಡೇಟಿಂಗ್‌ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಎದುರಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಫೋಟೋವೊಂದು ವೈರಲ್‌ ಆಗುತ್ತಿದೆ.  ಅಷ್ಟಕ್ಕೂ ಈ ಚರ್ಚೆ ಹುಟ್ಟಿಕೊಳ್ಳಲು ಏನ್‌ ಕಾರಣ? ವೈರಲ್‌ ಆದ ಫೋಟೋದಲ್ಲಿ ಏನಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವಿಶ್ವ ಗೆದ್ದ ಪಾಂಡ್ಯಗೆ ನಂ.1 ಗಿಫ್ಟ್ – ಸವಾಲು ಮೆಟ್ಟಿ ಹಾರ್ದಿಕ್ ಸಾಧಿಸಿದ್ದೆಷ್ಟು?

ಬಾಲಿವುಡ್‌ ಸೂಪರ್‌ಸ್ಟಾರ್‌ಗಳ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಂಡಿರುವ ದಿಶಾ ಪಟಾನಿ ಬಗ್ಗೆ ನಿಮ್ಗೆ ಗೊತ್ತೇ ಇದೆ.. ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬಾಲಿವುಡ್‍ನ ಲವ್ ಬರ್ಡ್ಸ್ ಎಂದೇ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಹೆಸರು ವಾಸಿಯಾಗಿದ್ದರು. ಟೈಗರ್ ಶ್ರಾಫ್ ಮತ್ತು ದಿಶಾ ಸಾಕಷ್ಟು ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದರು. ಆದರೆ ಏಕಾಏಕಿ ಇಬ್ಬರ ನಡುವೆ ಅದೇನು ಆಯ್ತೋ ಗೊತ್ತಿಲ್ಲ. ತಮ್ಮ ಪ್ರೀತಿಗೆ ಗುಡ್ ಬೈ ಹೇಳಿದ್ದರು. ಟೈಗರ್ ಶ್ರಾಫ್ ಅವರೊಂದಿಗಿನ ಬ್ರೇಕಪ್ ನಂತರ, ದಿಶಾ ಪಟಾನಿ ಅವರ ಡೇಟಿಂಗ್ ಜೀವನದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವಿದೆ. ಟೈಗರ್ ಶ್ರಾಫ್ ಜೊತೆಗಿನ ಬ್ರೇಕಪ್ ನಂತರ ನಟಿ ದಿಶಾ, ಮಾಡೆಲ್ ಕಮ್ ಆಕ್ಟರ್ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.. ಅವರ ಜೊತೆ ಮುಂಬೈ ಸುತ್ತುತ್ತಿದ್ದಾರೆ ಎಂದು ಹೇಳಲಾಗ್ತಿತ್ತು.. ಆದ್ರೆ ಪಾಂಡ್ಯ ಪತ್ನಿ ನತಾಶ ಜೊತೆ ಅಲೆಕ್ಸಾಂಡರ್ ಕಾಣಿಸಿಕೊಂಡಿದ್ರು., ಹೀಗಾಗಿ ಇವರಿಬ್ಬರ ಮಧ್ಯೆ ಏನು ಇಲ್ಲ ಅಂತಾ ಫ್ಯಾನ್ಸ್‌ ಮಾತಾಡಿಕೊಂಡ್ರು.. ಇದೀಗ ದಿಶಾ ಜೊತೆ ನಟ ಪ್ರಭಾಸ್‌ ಹೆಸರು ತಳುಕು ಹಾಕಿಕೊಂಡಿದೆ..

ಹೌದು, ದಿಶಾ ಪಟಾನಿ ಇತ್ತೀಚೆಗೆ ರಿಲೀಸ್‌ ಆದ ‘ಕಲ್ಕಿ 2898AD’ ಸಿನಿಮಾದಲ್ಲಿ ನಟಿಸಿದ್ರು.. ಇದ್ರಲ್ಲಿ ದಿಶಾ ಪಟಾನಿ ಪ್ರಭಾಸ್ ಪ್ರೇಯಸಿಯಾಗಿ ನಟಿಸಿದ್ದಾರೆ. ಇಬ್ಬರ ಕಾಂಬಿನೇಶನ್‌ ಸ್ಕ್ರೀನ್‌ ಮೇಲೆ ಚೆನ್ನಾಗಿ ಮೂಡಿಬಂದಿದೆ. ಈ ಬೆನ್ನಲ್ಲೇ ದಿಶಾ ಪಟಾನಿ ಅವರಿಗೆ ಪ್ರಭಾಸ್​ ಮೇಲೆ ಪ್ರೀತಿ ಚಿಗುರಿದೆಯಾ ಎಂಬ ಅನುಮಾನ ಮೂಡಿದೆ. ಅದಕ್ಕೆ ಕಾರಣ ನಟಿಯ ಹೊಸ ಟ್ಯಾಟೂ.

ಹೌದು.. ‘ಕಲ್ಕಿ 2898AD’ ರಿಲೀಸ್ ಬಳಿಕ ದಿಶಾ ಕೈ ಮೇಲಿರುವ ಟ್ಯಾಟೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಶುರುಮಾಡಿದೆ. ದಿಶಾ ಪಟಾನಿ ಇತ್ತೀಚೆಗೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು. ಈ ವೇಳೆ ಆಕೆಯ ಎಡಗೈನಲ್ಲಿರುವ ಟ್ಯಾಟೂ ಕ್ಯಾಮರಾದಲ್ಲಿ ಸೆರೆಯಾಗಿತ್ತು. ದಿಶಾ ಪಟಾನಿ ಎಡಗೈನಲ್ಲಿ ‘PD’ ಅನ್ನೋ ಟ್ಯಾಟೂ ಕಂಡಿದ್ದೇ ತಡ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಈ ಟ್ಯಾಟೂ ಮ್ಯಾಟರ್ ಈಗ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದೆ. ನೆಟ್ಟಿಗರು ದಿಢೀರನೇ ಈ ಟ್ಯಾಟೂವನ್ನು ಡಿಕೋಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.   ಕೆಲವರು ಪ್ರಭಾಸ್ ಜೊತೆ ದಿಶಾ ಪಟಾನಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇತ್ತ ಸಿನಿಮಾ ನೋಡಿದವರಿಗೆ ಈ ಮ್ಯಾಟರ್ ನಿಜವಿದ್ದರೂ ಇರಬಹುದೇನೋ ಅಂತ ಅನಿಸುವುದಕ್ಕೆ ಶುರುವಾಗಿದೆ. ‘ಕಲ್ಕಿ 2898AD’ಸಿನಿಮಾದಲ್ಲಿ ಇಬ್ಬರ ನಡುವಿನ ಕೆಮಿಸ್ಟ್ರಿ ಅಷ್ಟು ಚೆನ್ನಾಗಿ ವರ್ಕ್‌ಔಟ್ ಆಗಿದೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ದಿಶಾ ಪಟಾಣಿ ಟ್ಯಾಟೂ ನೋಡಿದವರಿಗೆ ಈ ಅನುಮಾನ ಸಹಜವಾಗಿ ಮೂಡಿದೆ. “P ಅಂದ್ರೆ ಪ್ರಭಾಸ್, D ಅಂದ್ರೆ ದಿಶಾ” ಎಂದು ಕಾಮೆಂಟ್ ಮಾಡುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ. ಮತ್ತೆ ಕೆಲವರಂತೂ ದಿಶಾ ಪಟಾನಿಗೆ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್‌ ಮೇಲೆ ಲವ್ ಆಗಿದೆ ಅಂತಲೇ ನಂಬಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ತನ್ನ ಟ್ಯಾಟೂ ಫೋಟೊ ವೈರಲ್ ಆಗುತ್ತಿದ್ದಂತೆ ದಿಶಾ ಪಟಾನಿ ಇನ್‌ಸ್ಟಾಗ್ರಾಂನಲ್ಲಿ ಅದೇ ಫೋಟೊವನ್ನು ಮತ್ತೆ ಶೇರ್ ಮಾಡಿಕೊಂಡಿದ್ದಾರೆ. ಬಳಿಕ “ನನ್ನ ಟ್ಯಾಟೂ ಬಗ್ಗೆ ಇಷ್ಟು ಕುತೂಹಲ ಹುಟ್ಟುಕೊಂಡಿರುವುದನ್ನು ನೋಡಿ ಅಚ್ಚರಿಯಾಗಿದೆ. ಈ ಖುಷಿಗೆ ಏನು ಕಾರಣ ಅನ್ನೋದನ್ನು ಹುಡುಕಿ” ಎಂದು #cloudnine ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನೆಟ್ಟಿಗರನ್ನು ಮತ್ತಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಅದ್ಯಾಕೆ ಈ ಟ್ಯಾಟೂ ಹಾಕಿಕೊಂಡಿದ್ದಾರೋ ಸತ್ಯ ಇನ್ನೂ ಹೊರಬಿದ್ದಿಲ್ಲ. ಆದರೆ, ನೆಟ್ಟಿಗರು ಮಾತ್ರ ಚಿತ್ರ ವಿಚಿತ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. “P ಅಂದ್ರೆ ಪ್ರಭಾಸ್, D ಅಂದ್ರೆ ಡಾರ್ಲಿಂಗ್” ಅಂತಾನೇ ಚರ್ಚೆಯಾಗ್ತಿದೆ. ಒಟ್ನಲ್ಲಿ ದಿಶಾ ಪಟಾನಿಯ ಒಂದು ಟ್ಯಾಟೂ ಸದ್ಯಕ್ಕೀಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

Shwetha M

Leave a Reply

Your email address will not be published. Required fields are marked *