ಸಿಎಂ ಬದಲಾವಣೆಯ ಬಗ್ಗೆ ಕೈ ಪಾಳಯದಲ್ಲಿ ಗುಸು ಗುಸು ಚರ್ಚೆ – ಮುಂದಿನ ಸಿಎಂ ಯಾರು ಆಗ್ತಾರೆ?

ರಾಜ್ಯದಲ್ಲಿ ಮುಡಾ ಪ್ರಕರಣದಲ್ಲಿ ಕಾಂಗ್ರೆಸ್ ಗೆ ದೊಡ್ಡ ಕಂಟಕವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊರಳಿಗೆ ಮುಡಾ ಸುತ್ತಿಕೊಂಡಿದೆ. ಮುಡಾ ಪ್ರಕರಣದಿಂದಾಗಿ ಸಿಎಂ ಬದಲಾವಣೆಯ ಬಗ್ಗೆ ಕೈ ಪಾಳಯದಲ್ಲಿ ಗುಸು ಗುಸು ಚರ್ಚೆ ಜೋರಾಗಿದ್ದು, ಇತ್ತ ವಿಪಕ್ಷಗಳು ಸಹ ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಿದ್ದಾರೆ. ಮುಡಾ ಹಗರಣದ ಕುರಿತು ಸಿದ್ದರಾಮಯ್ಯ ಅವರು ರಾಜೀನಾಮೆಯನ್ನ ನೀಡಲ್ಲ. ಅವರ ಬೆನ್ನಿಗೆ ಶಾಸಕರು ಹಾಗೂ ಸಚಿವರು ನಿಂತಿದ್ದೇವೆ ಎಂದು ಹೇಳಿಕೊಂಡ್ರು ಕೂಡ, ಒಳಗೊಳಗೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಕೆಳಗಿದ್ರೆ ನಾನೂ ಕೂಡ ಸಿಎಂ ಆಗಬೇಕು ಅನ್ನೋ ಲೆಕ್ಕಾಚಾರ ನಡೆಯುತ್ತಿದೆ .
ಇದನ್ನೂ ಓದಿ: ಚನ್ನಪಟ್ಟಣ ಬೈ ಎಲೆಕ್ಷನ್ ಗೆ ಕೌಂಟ್ ಡೌನ್ – ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ?
ಸಿಎಂ ಬದಲಾವಣೆಯ ಚರ್ಚೆ ಮುನ್ನಲೆಗೆ ಬಂದಾಗ ಪ್ರಮುಖವಾಗಿ ಸತೀಶ್ ಜಾರಕಿಹೊಳಿ ಹೆಸರು ಪಕ್ಷದ ವಲಯದಲ್ಲಿ ಓಡಾಡುತ್ತಿತ್ತು. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆಯನ್ನ ನೀಡಲ್ಲ ಎಂದು ಕೈ ನಾಯಕರು ಹೇಳಿದರು ಸಹ, ಮುಡಾದಲ್ಲಿ ಕಾನೂನಿನ ಕುಣಿಕೆ ಬಿಗಿಯಾದ್ರೆ, ರಾಜೀನಾಮೆ ಕೊಡೋ ಪ್ರಸಂಗ ಬಂದ್ರೆ, ಮುಂದೆ ಯಾರನ್ನ ಸಿಎಂ ಕುರ್ಚಿ ಮೇಲೆ ಕೂರಿಸೋದು ಅನ್ನೋ ಚರ್ಚೆ ನಡೆಯುತ್ತಿದೆ ಮುಂದಿನ ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಜೊಳಿ ಹೆಸರು ಮುನ್ನೆಲೆಗೆ ಬಂದಿದೆ. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆ ಅವರನ್ನ ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಭೇಟಿಯಾಗಿದ್ದು, ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಮೊದಲಿನಿಂದಲೂ ಸಹ ಸಿಎಂ ಕುರ್ಚಿಯ ಮೇಲೆ ಸತೀಶ್ ಜಾರಕಿಹೊಳಿ ಅವರು ಕಣ್ಣೀಟ್ಟಿದ್ದು, ಸಿಎಂ ರೇಸ್‌ನಲ್ಲಿರುವ ನಾಯಕರಾದ ಡಿಕೆ ಶಿವಕುಮಾರ್, ಪರಮೇಶ್ವರ್ ಕೂಡ ಸತೀಶ್ ಜಾರಕಿಹೊಳಿಯನ್ನು ಭೇಟಿಯಾಗಿ ಮಾತನಾಡುತ್ತಿರವುದು ಹಲವು ಅನುಮಾನಗಳಿಗೆ ಕಾರಣವಾಗಿದೆ
ಮುಂದಿನ ಸಿಎಂ ಯಾರು ಆಗ್ತಾರೆ?
ದೆಹಲಿಯಲ್ಲಿ ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ್ ಖರ್ಗೆ ಅವರನ್ನ ಮಾತ್ರವಲ್ಲದೇ ಕಳೆದ ವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಕೂಡ ಭೇಟಿ ಮಾಡಿದ್ದರು. ಇದು ಕೈ ಪಾಳಯದಲ್ಲಿ ಗುಸು ಗುಸು ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ಸಿಎಂ ಕುರ್ಚಿಯಿಂದ ಸಿದ್ದರಾಮಯ್ಯನವರು ಕೆಳಗಿಳಿದರೆ ಅವರ ಸ್ಥಾನಕ್ಕೆ ದಲಿತ ನಾಯಕರೊಬ್ಬರನ್ನು ತರಬೇಕೆಂಬ ಆಗ್ರಹ ಜೋರಾಗಿ ಕೇಳುತ್ತಿದೆ. ಕಾಂಗ್ರೆಸ್ ಅಷ್ಟೇ ಅಲ್ಲ, ಅತ್ತ ಬಿಜೆಪಿಯಿಂದಲೂ ಅದೇ ರೀತಿಯ ಮಾತುಗಳು ಕೇಳಿಬರುತ್ತಿವೆ. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ನಾನೇ ಐದು ವರ್ಷವೂ ಸಿಎಂ, ನಾನು ಯಾರಿಗೂ ಹೆದರಲ್ಲ, ನಾನು ತಪ್ಪು ಮಾಡಿಲ್ಲ ಅಂತ ಬಹಿರಂಗವಾಗಿಯೇ ವಿಪಕ್ಷಗಳಿಗೂ ಹಾಗೂ ಸ್ವಪಕ್ಷದ ಸಿಎಂ ಆಕಾಂಕ್ಷಿಗಳಿಗೆ ಸಂದೇಶ ರವಾನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನ ಕೆಳಗಿಳಿಸುವುದಕ್ಕೆ ಹೈಕಮಾಂಡ್ ಮುಂದಾಗುವುದಿಲ್ಲ ಅನ್ನೋ ಮಾತು ಕೇಳಿ ಬರ್ತಿದೆ..ಒಂದು ವೇಳೆ ಕಳಗಿಳಿದ್ರೆ ಆ ಸ್ಥಾನಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಮೂಡಿಸಿದೆ. ಅದರಲ್ಲೂ ಖರ್ಗೆ ಭೇಟಿ ಬೆನ್ನಲ್ಲೇ ಸತೀಶ್ ಜಾರಕಿಹೊಳಿ ಗೃಹ ಸಚಿವ ಪರಮೇಶ್ವರ್‌ನನ್ನ ಭೇಟಿ ಮಾಡಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೇ ಇವತ್ತು ಬಿಜೆಪಿ ನಾಯಕರು ಕೂಡ ಸತೀಶ್ ಜಾರಕಿಹೊಳಿಯನ್ನ ಭೇಟಿ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಕಮಲ ನಾಯಕರು ಸತೀಶ್ ಜಾರಕಿಹೊಳಿಯನ್ನ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹಾಗೇ ಸತೀಶ್ ಜಾರಕಿಹೊಳಿ ಸದ್ದು ಮಾಡ್ತಾ ಇರೋದು ಸಿಎಂ ರೇಸ್‌ನಲ್ಲಿರೋ ಡಿಕೆ ಶಿವಕುಮಾರ್ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸತೀಶ್ ಜಾರಕಿಹೊಳಿಯನ್ನ ಡಿಕೆ ಸುರೇಶ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹೀಗೆ ಸತೀಶ್ ಜಾರಕಿಹೊಳಿ ಸರಣಿ ಸಭೆ ನಡೆಸುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.