ಸಿಎಂ ಸಿದ್ದರಾಮಯ್ಯ ಪುತ್ರ ಪ್ರೇಮಕ್ಕೆ ಕಾಂಗ್ರೆಸ್ ನಾಯಕರು ಗರಂ – ಪಕ್ಷಕ್ಕೆ ದುಡಿದ ನಾಯಕರಿಗೆ ಬೆಲೆಯಿಲ್ಲ ಎಂದು ಅಸಮಾಧಾನ

ಸಿಎಂ ಸಿದ್ದರಾಮಯ್ಯ ಪುತ್ರ ಪ್ರೇಮಕ್ಕೆ ಕಾಂಗ್ರೆಸ್ ನಾಯಕರು ಗರಂ – ಪಕ್ಷಕ್ಕೆ ದುಡಿದ ನಾಯಕರಿಗೆ ಬೆಲೆಯಿಲ್ಲ ಎಂದು ಅಸಮಾಧಾನ

ಯತೀಂದ್ರ ಸಿದ್ದರಾಮಯ್ಯ ಅವರನ್ನು ವರುಣ ಕ್ಷೇತ್ರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಡೆಗೆ ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದು ಪುತ್ರ ವ್ಯಾಮೋಹಕ್ಕೆ ಬಿಜೆಪಿಯವರು ಟ್ವೀಟ್ ಮೂಲಕ ಟೀಕೆ ಮಾಡಿದರೆ, ಸ್ವಪಕ್ಷದವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:  ಕುಡಿದು ಸತ್ತರೂ ಪರಿಹಾರದ ಆಸೆಗೆ ರೈತರ ಆತ್ಮಹತ್ಯೆ ಅಂತಾರೆ – ಸಚಿವರ ಬೇಜವಾಬ್ದಾರಿ ಹೇಳಿಕೆಗೆ ರೈತರ ಆಕ್ರೋಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್‌ಸಿ ಮಹದೇವಪ್ಪ ಅವರ ಪುತ್ರ ವ್ಯಾಮೋಹಕ್ಕೆ ಕಾಂಗ್ರೆಸ್‌ನ ಕೆಲ ನಾಯಕರು ಅಸಮಧಾನ ವ್ಯಕ್ತಪಡಿಸಿದ್ದಾರೆ. ಈ ಇಬ್ಬರೂ ನಾಯಕರು ತಮ್ಮ ಪುತ್ರರಿಗೆ ಸದ್ದಿಲ್ಲದೇ ಸಾಂವಿಧಾನಿಕ ಹುದ್ದೆ ನೀಡಿದ್ದರಿಂದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿಧಾನಪರಿಷತ್‌ಗೆ ನಾಮನಿರ್ದೇಶನ ವಿಚಾರಕ್ಕೆ ಸಿದ್ದರಾಮಯ್ಯ ತೀರ್ಮಾನಕ್ಕೆ ಕಾಂಗ್ರೆಸ್ ಕೆಲ ನಾಯಕರಿಂದ ಆಕ್ಷೇಪಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಇದೀಗ ಪುತ್ರ ಯತೀಂದ್ರ ಸಿದ್ದರಾಮಯ್ಯನವರಿಗೆ ಸಾಂವಿಧಾನಿಕ ಹುದ್ದೆ ನೀಡಿರುವುದು ಕಾಂಗ್ರೆಸ್ ಪಾಳಯದಲ್ಲೇ ಆಕ್ರೋಶವ್ಯಕ್ತವಾಗಿದೆ. ಯತೀಂದ್ರ ಸಿದ್ದರಾಮಯ್ಯ ಅವರನ್ನು ವರುಣ ಕ್ಷೇತ್ರ ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೇ ಮಾದರಿಯಲ್ಲೇ ಉಳಿದ ನಾಯಕರಿಗೂ ಅಕವಕಾಶ ನೀಡಿ ಎನ್ನುವ ಆಗ್ರಹ ಕೇಳಿಬಂದಿದೆ. ಯತೀಂದ್ರಗೆ ನೀಡಿದ ಹಾಗೇ ನಮಗೂ ಅವಕಾಶ ನೀಡಿ. ಯತೀಂದ್ರಗೆ ಇರುವ ಅವಕಾಶ ನಮಗ್ಯಾಕೆ ಇಲ್ಲ. ಪಕ್ಷಕ್ಕೆ ದುಡಿದ ನಾಯಕರಿಗೆ ಸಾಂವಿಧಾನಿಕ ಹುದ್ದೆ ತಕ್ಷಣವೇ ನೀಡಿ ಎನ್ನುವ ಕೂಗು ಕೇಳಿಬಂದಿವೆ. ಅತ್ತ ನಿಗಮ ಮಂಡಳಿಯನ್ನೂ ನೀಡುತ್ತಿಲ್ಲ. ಸಾಂವಿಧಾನಿಕ ಅವಕಾಶ ಕೂಡ ನೀಡುತ್ತಿಲ್ಲ. ಯತೀಂದ್ರಗೆ ಕೊಡಬಹುದಾದ ಅವಕಾಶ ನಮಗೂ ಕೊಡಿ ಎಂದು ಬಹಿರಂಗ ವೇದಿಕೆಗಳಲ್ಲೇ ಡಿಮ್ಯಾಂಡ್ ಇಟ್ಟಿದ್ದಾರೆ. ಸಿಎಂ ನಡೆ ಒಂದು ಕಡೆಯಾದರೆ, ಸಚಿವ ಮಹದೇವಪ್ಪ ಪುತ್ರನದ್ದು ಮತ್ತೊಂದು ಕಥೆಯಾಗಿದೆ. ಡಾ ಹೆಚ್ ಸಿ ಮಹಾದೇವಪ್ಪ ಅವರು ತಮ್ಮ ಪುತ್ರನಿಗೆ ಕೆಡಿಪಿ ಸದಸ್ಯ ಸ್ಥಾನ ಕರುಣಿಸಿದ್ದಾರೆ. ಪರಿಶಿಷ್ಟ ಜಾತಿ ಪ್ರವರ್ಗದಡಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಗೆ ಕೆಡಿಪಿ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ. ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕೆಡಿಸಿ ಸದಸ್ಯ ಸ್ಥಾನ ನೀಡಲಾಗಿದೆ. ಅಲ್ಲದೇ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಇದಕ್ಕೆ ಮುಖಂಡರು ಹಾಗೂ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಸಚಿವರ ಕ್ಷೇತ್ರಗಳಲ್ಲಿ ಪುತ್ರರ ಪಾರುಪತ್ಯಕ್ಕೆ ನೇರವಾಗಿ ಯಾಕೆ ಅವಕಾಶ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

suddiyaana