ತಾಂಡವ್ ಸಿಕ್ಕಿ ಬೀಳ್ತಾನೆ ಅಂತಾ ಕಾಯ್ತಾ ಇದ್ದವರಿಗೆ ನಿರಾಶೆ – ಅತ್ತೆ ಸುನಂದಾ ಬಾಯಿ ಮುಚ್ಚಿಸಿದ ತಾಂಡವ್ ತಂದೆ..!

ತಾಂಡವ್ ಸಿಕ್ಕಿ ಬೀಳ್ತಾನೆ ಅಂತಾ ಕಾಯ್ತಾ ಇದ್ದವರಿಗೆ ನಿರಾಶೆ – ಅತ್ತೆ ಸುನಂದಾ ಬಾಯಿ ಮುಚ್ಚಿಸಿದ ತಾಂಡವ್ ತಂದೆ..!

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ತಾಂಡವ್​ ಸಿಕ್ಕಿಬೀಳ್ತಾನೆ. ಅತ್ತೆ ಸುನಂದಾ ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾಳೆ ಎಂದು ವೀಕ್ಷಕರು ಖುಷಿಯಾಗಿದ್ದರು. ತಾಂಡವ್ ಗೆ ತಕ್ಕ ಶಾಸ್ತಿಯಾಯ್ತು. ಇನ್ನಾದರೂ ನೆಟ್ಟಗೆ ಪತ್ನಿ ಭಾಗ್ಯಾ ಜೊತೆ ಸಂಸಾರ ಮಾಡಿಕೊಂಡಿರಲಿ ಎಂದು ವೀಕ್ಷಕರು ಹಾರೈಸುತ್ತಿದ್ದರು. ಆದರೆ, ಈ ಬಾರಿ ತಾಂಡವ್ ರಕ್ಷಣೆಗೆ ಅಪ್ಪನೇ ಟೊಂಕಕಟ್ಟಿಕೊಂಡು ನಿಂತಿದ್ದಾರೆ.

ಇದನ್ನೂ ಓದಿ: ಗಂಡನ ವಿರುದ್ಧವೇ ತಿರುಗಿಬಿದ್ದ ಭಾಗ್ಯ – ಹೆಂಡತಿಯ ಮಾತಿನೇಟಿಗೆ ತಾಂಡವ್ ಗಡಗಡ..!

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಲವ್​ಲೆಟರ್​ ಜೊತೆ ತಾಂಡವ್ ಸಿಕ್ಕಿಬಿದ್ದಿದ್ದಾನೆ. ದಿನದಿನಕ್ಕೂ ಕುತೂಹಲ ಕೆರಳಿಸುತ್ತಿರುವ ಈ ಧಾರಾವಾಹಿ ಇನ್ನೇನು ಇಂಟರೆಸ್ಟಿಂಗ್​ ಘಟ್ಟಕ್ಕೆ ಬಂದು ನಿಂತಿತ್ತು. ಭಾಗ್ಯಳ ಅಮ್ಮ ಸುನಂದಾ ತನ್ನ ಅಳಿಯನ ಪ್ರೇಮ ಪತ್ರಗಳನ್ನು ನೋಡಿಬಿಟ್ಟಿದ್ದಾಳೆ. ನೋಡಿದಷ್ಟೇ ಅಲ್ಲ, ತಾಂಡವ್ ಗೆ ಸರಿಯಾಗಿಯೇ ಕ್ಲಾಸ್ ತಗೊಂಡಿದ್ದಾಳೆ. ಅತ್ತೆಯ ಮಾತಿನ ಏಟಿಗೆ ತಾಂಡವ್ ತತ್ತರಿಸಿಹೋಗಿದ್ದಾನೆ. ವೀಕ್ಷಕರು ಕೂಡಾ ಬಿಡಬೇಡ ಸುನಂದಾ, ತಾಂಡವ್ ಗೆ ಸರಿಯಾಗಿ ಪಾಠ ಕಲಿಸು. ಪತ್ನಿಗೆ ನಿಯತ್ತಾಗಿ ಇಲ್ಲದವನನ್ನು ಬಿಡಬೇಡ ಸುನಂದಾ ಎಂದೆಲ್ಲಾ ಮೆಸೇಜ್ ಮಾಡುತ್ತಿದ್ದರು. ಆದರೆ, ತಾಂಡವ್ ಅತ್ತೆ  ಲವ್​ ಲೆಟರ್​ ನೋಡಿದರೆಂದು ಎಲ್ಲಾ ಲವ್​ ಲೆಟರ್​ಗಳನ್ನು ತಾಂಡವ ಸುಟ್ಟುಹಾಕಿದ್ದ. ಆದರೆ, ಎರಡು ಲವ್ ಲೆಟರ್ ಸುನಂದಾ ಬ್ಯಾಗ್ ನಲ್ಲಿ ಉಳಿದುಕೊಂಡು ಬಿಟ್ಟಿದೆ. ಅದನ್ನು ತಾಂಡವ್ ಅಪ್ಪ ಅಮ್ಮನ ಎದುರು ಅತ್ತೆ ಸುನಂದಾ ತೋರಿಸಿದ್ದಾರೆ. ಇದನ್ನು ಸುಟ್ಟು ಹಾಕಿದರೂ ಹೇಗೆ ಉಳಿದುಕೊಳ್ತು ಎನ್ನೋ ಯೋಚನೆಯಲ್ಲಿ ತಾಂಡವ್​ ಇದ್ದರೆ ಅವನ ಬಂಡವಾಳವನ್ನು ಅತ್ತೆ ಬಯಲು ಮಾಡಿದ್ದಾರೆ. ಆಗ ರೇಗಾಡುವ ಅತ್ತೆ ಸುನಂದಾ, ನಿನ್ನೆನೇ ರೋಡ್​ನಲ್ಲಿ ಸುಟ್ಟುಹಾಕಿದ್ನಲ್ಲ, ಇದು ಹೇಗೆ ಉಳಿದುಕೊಳ್ತು ಅಂತ ಯೋಚ್ನೆ ಮಾಡ್ತಾ ಇದ್ದೀಯಾ, ನೀನು ಸುಟ್ಟು ಹಾಕಿದ ತಕ್ಷಣ ಪ್ರೇಮ ಪುರಾಣ ಮುಚ್ಚಿಹೋಗತ್ತೆ ಅಂದುಕೊಳ್ಳಬೇಡ, ದೇವರೆಲ್ಲಾ ನೋಡ್ತಾ ಇರುತ್ತಾನೆ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದನ್ನು ಕೇಳಿ ಭಾಗ್ಯ ಹಾಗೂ ತಾಂಡವ್​ ಮನೆಯವರಿಗೆ ಶಾಕ್​ ಆಗುತ್ತದೆ. ಭಾಗ್ಯಳ ಅಪ್ಪ ಕೂಡ, ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ, ತಪ್ಪಿತಸ್ಥರ ವಿರುದ್ಧ ಏನಾದರೂ ಸಾಕ್ಷಿ ಉಳಿಸಿರ್ತಾನೆ ಎನ್ನುತ್ತಾರೆ ಅಪ್ಪ. ಅತ್ತೆ ಸುನಂದಾ ತಾಂಡವ್ ಗೆ ಕ್ಲಾಸ್ ತಗೊಂಡ್ರೆ ಅಮ್ಮ ಕುಸುಮಾ ಮಗನ ಬಗ್ಗೆ ಮಾತಾಡುವಾಗ ಮಾತಿನ ಮೇಲೆ ನಿಗಾ ಇರಲಿ ಎಂದು ಸುನಂದಾಗೆ ಎಚ್ಚರಿಕೆ ನೀಡುತ್ತಿದ್ದಾಳೆ. ಆದರೆ, ಸಾಕ್ಷಿಯನ್ನು ಸುಟ್ಟುಹಾಕಿ ಗೆದ್ದೆ ಅಂತ ಮನೆಗೆ ಬಂದಿದ್ದಾನೆ, ಹೇಸಿಗೆ ಮನುಷ್ಯ. ನಿಮ್ಮ ಮಗನ ಪ್ರೇಮ ಪತ್ರ ಇವು, ಕಳ್ಳಾಟಕ್ಕೆ ಸಿಕ್ಕಿರೋ ಸಾಕ್ಷಿ ಇವು.  ಅವನ ಕಪಾಟಿನಲ್ಲಿಯೇ ಇತ್ತು. ಬೀಗ ಹಾಕಿ ಇಟ್ಟಿದ್ದ ಎಂದು ಹೇಳಿದಾಗ ಎಲ್ಲರೂ ಪುನಃ ಶಾಕ್​ಗೆ ಒಳಗಾಗುತ್ತಾರೆ. ಆದರೆ, ಇನ್ನೇನು ತಾಂಡವ್ ಮುಖವಾಡ ಬಯಲಾಗುತ್ತೆ ಅಂತಾ ಎಲ್ಲರೂ ಕಾಯುತ್ತಿದ್ದಾಗಲೇ ತಾಂಡವ್ ತಂದೆ ಮಗನ ಪರ ಮಾತನಾಡುತ್ತಾರೆ. ತಾಂಡವ್ ಮುಖದಲ್ಲಿ ಗೆದ್ದಿರುವ ಖುಷಿ ಇರುತ್ತದೆ. ಪಾಪ. ಸುನಂದಾ ಅಳಿಯನ ಹಳೇ ಸ್ಟೋರಿಯ ಕಥೆ ಕೇಳಬೇಕಾಗುತ್ತದೆ. ಆದರೆ, ತಾಂಡವ್ ಅಪ್ಪ ಅಮ್ಮನಿಗೆ ಒಳ್ಳೇ ಮಗ ಹೌದು. ಹೆಂಡತಿಗೆ ಮಾತ್ರ ನಿಯತ್ತಾಗಿಲ್ಲ ಅನ್ನೋದು ಕೂಡಾ ಸತ್ಯವೇ. ಇನ್ನಾದರೂ ತಾಂಡವ್ ಬದಲಾಗುತ್ತಾನಾ ಅನ್ನೋದೇ ವೀಕ್ಷಕರ ಪ್ರಶ್ನೆ.

suddiyaana