ತೆರೆ ಮೇಲೆ ಮ್ಯಾಜಿಕ್ ಮಾಡದ ‘ಸರ್ಕಸ್’- ರಣ್‌ವೀರ್ ಸಿಂಗ್ ಅಭಿಮಾನಿಗಳಿಗೆ ನಿರಾಶೆ

ತೆರೆ ಮೇಲೆ ಮ್ಯಾಜಿಕ್ ಮಾಡದ ‘ಸರ್ಕಸ್’- ರಣ್‌ವೀರ್ ಸಿಂಗ್ ಅಭಿಮಾನಿಗಳಿಗೆ ನಿರಾಶೆ

ಬಾಲಿವುಡ್ ನಟ ರಣ್‌ವೀರ್ ಸಿಂಗ್ ಅಭಿನಯದ ಸರ್ಕಸ್ ಸಿನಿಮಾ ಡಿಸೆಂಬರ್ 23ಕ್ಕೆ ರಿಲೀಸ್ ಆಗಿದೆ. ಚಿತ್ರ ನೋಡಿದ ಮೊದಲ ದಿನವೇ ಫ್ಯಾನ್ಸ್ ಫುಲ್ ನಿರಾಶೆಗೊಂಡಿದ್ದಾರೆ. ಇದೊಂದು ಕರಾಬಾಗಿರುವ ಚಿತ್ರ ಎಂದು ಅಭಿಮಾನಿಗಳು ಬೇಸರ ತೋಡಿಕೊಂಡಿದ್ದಾರೆ. ರಿಲೀಸ್ ಆದ ದಿನವೇ ಅಭಿಮಾನಿಗಳು ಖುಷಿಯಲ್ಲೇ ಥಿಯೇಟರ್ ಒಳಗೆ ಹೋಗಿದ್ದರು. ಬರುವಾಗ ಎಲ್ಲರೂ ಸೈಲೆಂಟ್ ಆಗಿ ಹೊರಬಂದಿದ್ದು ಅಲ್ಲದೇ, ಬಾಸು ಇದು ಬರೀ ಖರಾಬು ಅಂತಾ ಬೇಸರದಿಂದ ಹೇಳಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಕನ್ನಡ ಸೀಸನ್-9ರ ಫಿನಾಲೆಗೆ 10 ದಿನ ಬಾಕಿ – ಹೊಸವರ್ಷಕ್ಕೆ ಯಾರಿಗೆ ಸಿಗಲಿದೆ ಕಿರೀಟ?

ಬಾಲಿವುಡ್‌ನಲ್ಲಿ ರಣ್‌ವೀರ್ ಸಿಂಗ್‌ ಬೇಡಿಕೆಯ ನಟ. ರಣ್‌ವೀರ್ ಸಿಂಗ್ ಚಿತ್ರ ಅಂದ್ಮೇಲೆ ಅದರಲ್ಲಿ ಎಂಟರ್‌ಟೈನ್‌ಮೆಂಟ್ ಇದೆ. ಜೊತೆಗೆ ರಣ್‌ವೀರ್ ಸಿಂಗ್ ವಿಶಿಷ್ಟ ಮ್ಯಾನರಿಸಂ ಫ್ಯಾನ್ಸ್‌ ಗೂ ಇಷ್ಟ. ಹೀಗಾಗಿಯೇ ರಣ್‌ವೀರ್ ಸಿಂಗ್ ಸಿನಿಮಾ ಅಂದ್ರೆ ಏನೋ ವಿಶೇಷತೆ ಇರುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ. ಹೀಗಾಗಿ ಅಭಿಮಾನಿಗಳು ರಣ್‌ವೀರ್ ಸಿಂಗ್‌ ಸಿನಿಮಾ ಬಿಡುಗಡೆಗೆ ಕಾಯ್ತಾ ಇರ್ತಾರೆ. ಆದರೆ, ಇತ್ತೀಚೆಗೆ ಯಾಕೋ ರಣ್‌ವೀರ್ ಸಿಂಗ್ ಸಿನಿಮಾಗಳು ಬಾಕ್ಸ್ ಆಫೀಸ್‌ಲ್ಲಿ ಅಷ್ಟೇನೂ ಸದ್ದು ಮಾಡುತ್ತಿಲ್ಲ. ಹೀಗಾಗಿ ಡಿಸೆಂಬರ್ 23ರಂದು ರಿಲೀಸ್ ಆದ ‘ಸರ್ಕಸ್’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿತ್ತು. ‘ಸರ್ಕಸ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ರೋಹಿತ್ ಶೆಟ್ಟಿ. ಅವರ ನಿರ್ದೇಶನದ ಸಿನಿಮಾಗಳಲ್ಲಿ ಮಸಾಲೆ ಅಂಶ ಜಾಸ್ತಿಯೇ ಇರುತ್ತದೆ. ‘ಗೋಲ್ಮಾಲ್’, ‘ಸಿಂಗಂ’, ‘ಸೂರ್ಯವಂಶಿ’ ಅಂತಹ ಹಿಟ್ ಚಿತ್ರಗಳನ್ನು ನೀಡಿದ ರೋಹಿತ್ ಶೆಟ್ಟಿ ಸಿನಿಮಾ ಮೇಲೆ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆಯಿತ್ತು. ಆದರೆ, ‘ಸರ್ಕಸ್’ ಸಿನಿಮಾಗೆ ನೆಗೆಟಿವ್ ವಿಮರ್ಶೆ ಸಿಕ್ಕಿದೆ. ರಣವೀರ್ ಸಿಂಗ್ ಅವರ ವೃತ್ತಿ ಜೀವನದ ಅತೀ ಕೆಟ್ಟ ಚಿತ್ರಗಳಲ್ಲಿ ಇದು ಕೂಡ ಒಂದು ಎನ್ನಲಾಗುತ್ತಿದೆ.

suddiyaana