ಮದುವೆ ಮನೆಯಲ್ಲಿ ಎಂಜಲು ತಟ್ಟೆ ತಾಗಿತೆಂದು ವೇಯ್ಟರ್‌ನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದ ಅತಿಥಿಗಳು!

ಮದುವೆ ಸಮಾರಂಭದಲ್ಲಿ ಸಣ್ಣಪುಟ್ಟ ತಪ್ಪುಗಳು ನಡೆಯುವುದು ಸಾಮಾನ್ಯ. ಈ ವೇಳೆ ಜಗಳ ನಡೆಯುವುದು ಕಾಮನ್. ಆದ್ರೆ ಇಲ್ಲೊಂದು ಕಡೆ ಎಂಜಲು ತಟ್ಟೆ ಸ್ನೇಹಿತರಿಗೆ ತಾಗಿತು ಅಂತಾ ಮದುವೆಗೆ ಬಂದಿದ್ದ ಅತಿಥಿಗಳು ವೇಯ್ಟರ್ ನನ್ನು ಕೊಲೆ ಮಾಡಿದ್ದಾರೆ.
ಹೌದು. ಈ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಡೆದಿದೆ. ಮದುವೆ ಮನೆಯಲ್ಲಿ ಸಮಾರಂಭದಲ್ಲಿ ಆಹಾರವನ್ನು ಸರ್ವ್ ಮಾಡುತ್ತಿದ್ದಾಗ ಇಬ್ಬರಿಗೆ ಎಂಜಲು ತಟ್ಟೆ ತಾಗಿದೆ. ಇದೇ ಸಿಟ್ಟಿನಿಂದ ಮದುವೆ ಮನೆಯಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ.
ಇದನ್ನೂ ಓದಿ: ರೂಲ್ಸ್ ಬ್ರೇಕ್ ಮಾಡೋದ್ರಲ್ಲಿ ಬಿಎಂಟಿಸಿಯೇ ನಂ.1 – ಬೆಂಗಳೂರಿನಲ್ಲಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳ ಸಂಖ್ಯೆ ಹೆಚ್ಚಳ!
ಪಂಕಜ್ ಅಂಕುರ್ ವಿಹಾರ್‌ನ ಸಿಜಿಎಸ್ ವಾಟಿಕಾದಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುತ್ತಿದ್ದಾಗ ಪಂಕಜ್ ಅವರ ಬಳಿಯಿದ್ದ ಎಂಜಿಲು ಪ್ಲೇಟ್‌ಗಳು ರಿಷಬ್ ಮತ್ತು ಅವರ ಇಬ್ಬರು ಸ್ನೇಹಿತರಿಗೆ ಅಚಾನಕ್ಕಾಗಿ ತಾಗಿತ್ತು. ಆಗ ಜಗಳ ಪ್ರಾರಂಭವಾಗಿತ್ತು. ಈ ವೇಳೆ ಪಂಕಜ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಪಂಕಜ್ ಗಂಭೀರವಾಗಿ ಗಾಯಗೊಂಡು ನೆಲದ ಮೇಲೆ ಬಿದ್ದಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಮನೋಜ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ.
ಸಿಕ್ಕಿಬೀಳುವ ಭಯದಿಂದ ರಿಷಬ್ ಮತ್ತು ಅವನ ಸ್ನೇಹಿತರು ಶವವನ್ನು ಹತ್ತಿರದ ಕಾಡಿನಲ್ಲಿ ಬಚ್ಚಿಟ್ಟರು. ಘಟನೆ ನಡೆದ ಒಂದು ದಿನದ ನಂತರ ಪೊಲೀಸರು ಶವವನ್ನು ವಶಪಡಿಸಿಕೊಂಡರು. ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.