ನೀವು ಕೊಳಕು ಬಟ್ಟೆ ಧರಿಸಿದಂತೆ ಕನಸು ಬಿದ್ರೆ ಹುಷಾರ್ – ಬುಡಮೇಲಾಗುತ್ತೆ ಲೈಫ್

ಪ್ರತಿಯೊಂದು ಕನಸಿಗೂ ತನ್ನದೇ ಆದ ಮಹತ್ವವಿದೆ. ಪ್ರತಿ ಕನಸೂ ನಮ್ಮ ಜೀವನದಲ್ಲಿ ನಡೆಯಬಹುದಾದ ಕೆಲ ಘಟನೆಗಳ ಮುನ್ಸೂಚನೆಯಾಗಿರುತ್ತದೆ. ಕೆಲ ಕನಸು ಬಿದ್ದಾಗ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ನೂರು ಬಾರಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲವಾದ್ರೆ ನಷ್ಟ ಕಟ್ಟಿಟ್ಟಬುತ್ತಿ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಶನಿವಾರ ಶನಿದೇವರನ್ನ ಹೇಗೆ ಆರಾಧನೆ ಮಾಡಬೇಕು ಗೊತ್ತಾ?
ಹರಿದ ಅಥವಾ ಕೊಳಕು ಬಟ್ಟೆಯನ್ನು ಧರಿಸಿದಂತೆ ಬಿದ್ದ ಕನಸು ಕೂಡ ನಮ್ಮ ಜೀವನದ ಜೊತೆ ನಂಟು ಹೊಂದಿದೆ. ನೀವು ಕೊಳಕು ಬಟ್ಟೆ ಧರಿಸಿದಂತೆ ಕನಸು ಕಂಡ್ರೆ ಅದು ಜಾಗರೂಕರಾಗಿ ಎಂಬುದರ ಸಂಕೇತ. ನಿಮ್ಮ ಇಮೇಜ್ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಇದು ಸೂಚಿಸುತ್ತದೆ. ಹತ್ತಿರವಿರುವ ಯಾರಾದರೂ ನಿಮ್ಮನ್ನು ನಿರಾಶೆಗೊಳಿಸಬಹುದು. ಹಿಂದಿನ ತಪ್ಪಿನ ಬಗ್ಗೆ ವಿಷಾದಿಸುವುದು ಸಹ ತೊಂದರೆ ಉಂಟುಮಾಡಬಹುದು. ಅಂತಹ ಸಮಯದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.
ನಿಮ್ಮ ಕನಸಿನಲ್ಲಿ ನೀವು ಹರಿದ ಬಟ್ಟೆ ಹಾಕಿಕೊಂಡಂತೆ ಕನಸು ಬಿದ್ದರೆ ಅದನ್ನು ಕೂಡ ಶುಭ ಎಂದು ಪರಿಗಣಿಸಲಾಗುವುದಿಲ್ಲ. ಹರಿದ ಹಾಗೂ ಕೊಳಕಾದ ಬಟ್ಟೆಯನ್ನು ಧರಿಸಿದಂತೆ ಕನಸು ಬಿದ್ದರೆ ಅದು ನಿಮ್ಮ ಖರ್ಚುನ್ನು ಹೆಚ್ಚು ಮಾಡುತ್ತದೆ ಎಂಬ ಸಂಕೇತ. ಹಾಗೆಯೇ ಹಣಕಾಸಿನ ವಿಷಯಗಳ ಬಗ್ಗೆ ಜಾಗರೂಕರಾಗಿರಿ ಎಂಬುದನ್ನು ಸೂಚಿಸುತ್ತದೆ. ಪ್ರಮುಖ ಕೆಲಸ ಸ್ಥಗಿತಗೊಳ್ಳಬಹುದು ಎಂಬುದನ್ನು ಇದು ಸಂಕೇತಿಸುತ್ತದೆ. ಒಂದು ಯೋಜನೆ ನಿರೀಕ್ಷಿತ ಫಲಿತಾಂಶಗಳನ್ನು ನೀಡದಿರಬಹುದು. ಆದ್ದರಿಂದ ಯಾವುದೇ ಅಪಾಯಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.

ನೋಡಿರಿ

