ಕಾಂಟ್ರವರ್ಸಿ ಕಿಂಗ್‌ ರಾಥಿ ರಹಸ್ಯ.. ನೋಟ್‌ಬುಕ್‌ ಸೆಲೆಬ್ರೇಷನ್‌‌ ಯಾಕೆ? – ‌ಉದ್ಧಟತನಕ್ಕೆ ದಿಗ್ವೇಶ್‌ ಕೆರಿಯರ್‌ ಎಂಡ್?

ಕಾಂಟ್ರವರ್ಸಿ ಕಿಂಗ್‌ ರಾಥಿ ರಹಸ್ಯ.. ನೋಟ್‌ಬುಕ್‌ ಸೆಲೆಬ್ರೇಷನ್‌‌ ಯಾಕೆ? – ‌ಉದ್ಧಟತನಕ್ಕೆ ದಿಗ್ವೇಶ್‌ ಕೆರಿಯರ್‌ ಎಂಡ್?

ದಿಗ್ವೇಶ್ ರಾಥಿ.. ಸದ್ಯ ಐಪಿಎಲ್ 2025 ರಲ್ಲಿ ಆಟದ ಜೊತೆ ಜೊತೆಗೆ ಕಾಂಟ್ರವರ್ಸಿಯಲ್ಲೂ ಹೆಚ್ಚು ಸೌಂಡ್ ಮಾಡ್ತಿರೋ ಆಟಗಾರ.. ಈಗಾಗ್ಲೇ ನಾಲ್ಕು ಬಾರಿ ನೋಟ್ಬುಕ್ ಸೆಲಬ್ರೇಟ್ ಮಾಡಿ ಐಪಿಎಲ್ ಆಯೋಜಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.  ಫೈನ್‌ ಮೇಲೆ ಫೈನ್‌ ಹಾಕಿಸಿಕೊಂಡಿದ್ದಾರೆ.. ಇಷ್ಟೆಲ್ಲಾ ಆದ್ರೂ ಈತನಿಗೆ ಬುದ್ದಿ ಬರೋ ತರ ಕಾಣ್ತಿಲ್ಲ.. ಯಾವ ಶಿಕ್ಷೆ ಬೇಕಾದ್ರೂ ಕೊಡ್ಲಿ.. ಎಷ್ಟು ಬೇಕಾದ್ರೂ ಫೈನ್ ಹಾಕ್ಲಿ.. ತಾನು ಮಾತ್ರ ಬದಲಾಗಲ್ಲ ಅನ್ನೋ ಮನಸ್ಥಿತಿಯಲ್ಲೇ ಇದ್ದಾನೆ ಈ ರಾಥಿ.

ಇದನ್ನೂ ಓದಿ: ಬಾಂಗ್ಲಾ ಪಿಎಂ ಮೊಹಮ್ಮದ್ ಯೂನಸ್ ರಾಜೀನಾಮೆ ನೀಡುವುದ್ದಕ್ಕೆ ನಿರ್ಧರಿಸಿದ್ದಾರೆ – ಎನ್‌ಸಿಪಿ ಸಂಚಾಲಕ ನಹಿದ್ ಇಸ್ಲಾಂ

ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ದಿಗ್ವೇಶ್ ರಾಥಿ ನಿಜಕ್ಕೂ ಒಳ್ಳೆಯ ಮಿಸ್ಟರಿ ಸ್ಪಿನ್ನರ್‌.. ಬಾಲನ್ನು ಬೆನ್ನ ಹಿಂದೆ ಅಡಗಿಸಿಕೊಂಡು ಬಂದು ಯಾವ ಕಡೆಗೆ ಬೌಲ್‌ ಮಾಡ್ತಾರೆ ಅನ್ನೋದು ಬ್ಯಾಟ್ಸ್‌ಮನ್‌ಗೆ ಗೊತ್ತಾಗಲ್ಲ. ಈ ಮೂಲಕ ವಿಕೆಟ್‌ ಕಬಳಿಸೋದ್ರಲ್ಲೂ ದಿಗ್ವೇಶ್‌ ಯಶಸ್ವಿಯಾಗ್ತಿದ್ದಾರೆ. ಬೌಲಿಂಗ್‌ ಇಕಾನಮಿ ಕೂಡ ಒಳ್ಳೆಯ ರೀತಿಯಲ್ಲೇ ಇದೇ.. ಆದ್ರೆ ಈ ಹುಡುಗ ಬೌಲಿಂಗ್ಗಿಂತ ಹೆಚ್ಚು ಸದ್ದು ಮಾಡ್ತಿರೋದು ಮಾತ್ರ ನೋಟ್ಬುಕ್ ಸೆಲಿಬ್ರೇಷನ್ ಮೂಲಕ. ಕ್ರಿಕೆಟ್‌ ಅನ್ನೋದು ಜಂಟಲ್‌ಮನ್‌ ಗೇಮ್‌.. ಹೀಗಾಗಿ ಇಲ್ಲಿ ಆಟಗಾರರು ಮಾಡುವ ಸೆಲೆಬ್ರೇಷನ್‌ ಎದುರಾಳಿಗಳನ್ನು ಹರ್ಟ್‌ ಮಾಡುವಂತೆ ಇರಬಾರದು.. ಅವರನ್ನು ಮುಗಿಸಿಬಿಟ್ಟೆ ಎಂಬ ಅಹಂಕಾರ ತೋರಬಾರದು..ನಾನೇ ಕಳಿಸಿಬಿಟ್ಟೆ ಎಂದು ಆಟಕ್ಕಿಂತ ದೊಡ್ಡವರಂತೆ ವರ್ತಿಸಬಾರದು.. ಇದೇ ಕಾರಣಕ್ಕೆ ಕ್ರಿಕೆಟ್‌ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಮೊದಲ ಬಾರಿ ದಿಗ್ವೇಶ್‌ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡಿದಾಗಲೇ ಐಪಿಎಲ್‌ ಆಡಳಿತ ಮಂಡಳಿ ದಂಡ ವಿಧಿಸಿತ್ತು.. ಹೀಗೆ ಒಂದು ಸಲ ತಪ್ಪು ಮಾಡಿದ್ರೆ ಓಕೆ.. ಆದ್ರೆ ರಾಥಿ ಪದೇ ಪದೇ ತಪ್ಪು ಮಾಡಿ ಶಿಕ್ಷೆಗೆ ಗುರಿಯಾಗ್ತಾನೆ ಇದ್ದಾರೆ.. ಹಾಗಿದ್ದರೂ ಬದಲಾಗುವ ಯಾವ ಲಕ್ಷಣ ಕೂಡ ಕಾಣ್ತಿಲ್ಲ.. ಇದೀಗ ದಿಗ್ವೇಶ್ ರಾಥಿಯನ್ನ ಒಂದು ಪಂದ್ಯಕ್ಕೆ ಅಮಾನತು ಮಾಡಲಾಗಿದೆ. ಇದಕ್ಕೂ ಮೊದಲೇ ಮೂರು ಬಾರಿ ದಂಡ ವಿಧಿಸಲಾಗಿತ್ತು.. ಈಗ ಲಾಸ್ಟ್‌ ವಾರ್ನಿಂಗ್‌ ಎಂಬಂತೆ ಪಂದ್ಯದಿಂದಲೇ ಅಮಾನತು ಮಾಡಲಾಗಿದೆ.. ಅಂದ್ರೆ ಸುಧಾರಿಸಿಕೊಳ್ಳೋದಿಕ್ಕೆ.. ತಪ್ಪು ತಿದ್ದಿಕೊಳ್ಳೋದಿಕ್ಕೆ ಇದೊಂದು ಕಡೆಯ ಅಕಾಶ.. ಅಷ್ಟಕ್ಕೂ 25 ವರ್ಷದ ಯುವ ಆಟಗಾರನ ವಿಚಿತ್ರ ಸೆಲೆಬ್ರೇಷನ್ ಹಿಂದೆ ವಿಚಿತ್ರ ಕಾರಣವೊಂದಿದೆ.

ಅಂದ್ಹಾಗೆ ದಿಗ್ವೇಶ್ ರಾಥಿ ಮೂಲತಃ ದೆಹಲಿಯವರು.. 1999ರ ಡಿಸೆಂಬರ್ 15 ರಂದು ಹುಟ್ಟಿದ ದಿಗ್ವೇಶ್‌ಗೆ ಬಾಲ್ಯದಿಂದಲೂ ಕ್ರಿಕೆಟ್ ಮೇಲೆ ಆಸಕ್ತಿ ಇತ್ತು. ಹೀಗಾಗಿ ದೆಹಲಿಯಲ್ಲೇ ಕ್ರಿಕೆಟ್ ಕೋಚಿಂಗ್ ಗೆ ಸೇರ್ತಾರೆ. ಆರಂಭದಲ್ಲಿ ದಿಗ್ವೇಶ್ ಬ್ಯಾಟಿಂಗ್ ಮಾಡ್ತಿದ್ರು. ಆದ್ರೆ ಅವಕಾಶಗಳ ಕೊರತೆಯಿಂದ ದಿಗ್ವೇಶ್ ಬೌಲಿಂಗ್ ಕಡೆಗೆ ವಾಲಿದ್ರು. ಆರಂಭದಲ್ಲಿ ನೆಟ್ಸ್ ನಲ್ಲಿ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡಿದ ಬಳಿಕ ದಿಗ್ವೇಶ್ ಇತರ ಬ್ಯಾಟ್ಸ್‌ಮನ್‌ ಗಳಿಗೆ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಬ್ಯಾಟ್ಸ್‌ಮನ್‌ಗಳು ತಮ್ಮ ಬೌಲಿಂಗಿಗೆ ಬೀಟ್‌ ಆಗೋದನ್ನು ನೋಡಿ ದಿಗ್ವೇಶ್ ಗೆ ಏನೋ ಒಂತರ ಖುಷಿ ಸಿಗುತ್ತಿತ್ತು. ದೆಹಲಿಯ ದಿಲ್ಮಾದ್ ಗಾರ್ಡನ್ ನಲ್ಲಿ ಆಡುತ್ತಿದ್ದಾಗ ಸೀನಿಯರ್ ಆಟಗಾರ ರಾಬಿನ್ ಬಿಟ್ಟೋ ಅವರು ದಿಗ್ವೇಶ್ ಬೌಲಿಂಗ್ ಗಮನಿಸ್ತಾರೆ. ಅಲ್ಲಿಂದ ಅವ್ರು ದಿಗ್ವೇಶ್ ಗೆ ಬೌಲಿಂಗ್ ಕಡೆಗೆ ಹೆಚ್ಚು ಗಮನ ಕೊಡಲು ಹೇಳಿದ್ರು. ಅಲ್ಲಿಂದ ದಿಗ್ವೇಶ್ ಬೌಲಿಂಗ್ ಜರ್ನಿ ಶುರುವಾಗುತ್ತೆ. ಅಲ್ಲಿಂದ ಮಿಸ್ಟ್ರಿ ಬೌಲರ್‌ ಆಗಿ ದಿಗ್ವೇಶ್‌ ಸ್ವಂತ ಪರಿಶ್ರಮದಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಶುರುಮಾಡಿದ್ರು.. 2024ರಲ್ಲಿ ದಿಗ್ಗೇಶ್ ರಾಥಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನೆಟ್ ಬೌಲರ್ ಆಗಿದ್ದರು. ಕೆಕೆಆರ್‌ ತಂಡದಲ್ಲಿ ನೆಟ್‌ಬೌಲರ್‌ ಆಗಿದ್ದಾಗ, ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರನ್ನು ನೋಡಿ ಮಿಸ್ಟ್ರಿ ಸ್ಪಿನ್‌ನಲ್ಲಿ ತಾನು ಹೊಸ ಹೊಸ ಅಂಶಗಳನ್ನು ಕಲಿತುಕೊಂಡಿದ್ದೆ ಅಂತಾ ಸಂದರ್ಶನವೊಂದ್ರಲ್ಲಿ ಹೇಳಿದ್ದಾರೆ. ಅಲ್ಲದೆ ತನಗೆ ಇದನ್ನು ನೇರವಾಗಿ ಯಾರೂ ಕಲಿಸಿದ್ದಲ್ಲ.. ತಾನೇ ಕಲಿತಿದ್ದು ಎನ್ನುವುದು ದಿಗ್ವೇಶ್‌ನ ಸ್ಪಷ್ಟ ಮಾತು.. ಹೀಗೆ ಸ್ವತಃ ಪರಿಶ್ರಮಪಟ್ಟು ಇಷ್ಟೆಲ್ಲಾ ಸಾಧನೆ ಮಾಡಿದ ದಿಗ್ವೇಶ್‌, ಈ ನೋಟ್‌ಬುಕ್‌ ಸೆಲೆಬ್ರೇಷನ್‌ ಮಾಡೋದ್ಯಾಕೆ ಅನ್ನೋದ್ರ ಬಗ್ಗೆ ಅವ್ರ ಅಣ್ಣ ಸಂದರ್ಶನವೊಂದ್ರಲ್ಲಿ ಗುಟ್ಟು ಬಿಚ್ಚಿಟ್ಟಿದ್ದಾರೆ.

ದಿಗ್ವೇಶ್‌ ರಾಥಿಯ ಸಹೋದರ ಸನ್ನಿ ಪ್ರಕಾರ ಯಾರದ್ದೇ ಗಮನ ಸೆಳೆಯುವ ಉದ್ದೇಶದಿಂದ ದಿಗ್ವೇಶ್‌ ನೋಟ್‌ಬುಕ್‌  ಸಂಭ್ರಮಾಚಣೆ ಮಾಡುತ್ತಿಲ್ಲವಂತೆ. ಅಲ್ಲದೆ ದಿಗ್ವೇಶ್‌ ಇಲ್ಲಿವರೆಗೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರ್ಲಿಲ್ಲ. ತನ್ನ ವಾಟ್ಸಾಪ್ ಸ್ಟೇಟಸ್ ಅನ್ನು ಸಹ ಆತ ಅಷ್ಟೇಟ್ ಮಾಡುತ್ತಿರಲಿಲ್ಲ. ‘ನಿಮಗೆ ಸ್ಟೇಟಸ್ ಇಲ್ಲದಿರುವಾಗ ಸ್ಟೇಟಸ್ ಅಪ್ಡೇಟ್ ಮಾಡುವುದರಿಂದ ಏನು ಪ್ರಯೋಜನ ಎಂದು ದಿಗ್ವೇಶ್‌ ಕೇಳುತ್ತಿದ್ದರಂತೆ.. ಆದ್ರೆ ಮೈದಾನದಲ್ಲಿ ಮಾಡೋ ವಿಚಿತ್ರ ಸೆಲೆಬ್ರೇಷನ್‌ ಬಗ್ಗೆ ಕೇಳಿದ್ದಕ್ಕೆ  ಅದ್ರಿಂದ ನನಗೆ ಪ್ರೇರೇಪಣೆ ಸಿಗುತ್ತದೆ ಎಂದು ದಿಗ್ವೇಶ್‌ ಅಣ್ಣನ ಜೊತೆ ಹೇಳಿದ್ದಾರಂತೆ..  ಅದಕ್ಕೆ, ಅವರಣ್ಣ,  ನಿನಗೆ ಉತ್ತಮವಾಗಿ ಆಡಲು ಸಹಾಯ ಮಾಡಿದರೆ ಸರಿ, ಆದರೆ ಯಾವುದೇ ಆಟಗಾರನನ್ನು ಹೀಗೆ ಸೆಲೆಬ್ರೇಟ್‌ ಮಾಡಿ ಅಗೌರವಿಸಬೇಡ ಎಂದು ಕಿವಿಮಾತು ಹೇಳಿದ್ದಾರಂತೆ.  ಆದ್ರೇನು ಮಾಡೋದು, ಐಪಿಎಲ್‌ ಆಡಳಿತ ಮಂಡಳಿ ದಂಡ ಹಾಕಿ ಪೆಟ್ಟು ಕೊಟ್ಟರೂ ಸುಧಾರಿಸಿಕೊಳ್ಳದ ದಿಗ್ವೇಶ್‌, ಅಣ್ಣನ ಕಿವಿಮಾತನ್ನು ಕಿವಿಗೂ ಹಾಕಿಕೊಂಡಂತೆ ಕಾಣ್ತಿಲ್ಲ..

ಅಂದಹಾಗೆ ಈ ನೋಟ್‌ಬುಕ್‌ ಸೆಲಬ್ರೇಷನ್‌ ಅನ್ನು ಮೊದಲು ಕ್ರಿಕೆಟ್‌ನಲ್ಲಿ ಪರಿಚಯಿಸಿದವರು ವೆಸ್ಟ್ ಇಂಡೀಸ್ ಬೌಲರ್ ಕೆಸ್ಮಿಕ್ ವಿಲಿಯಮ್ಸ್, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ವಿಲಿಯಮ್ಸ್‌ ಮಾಡುತ್ತಿದ್ದ ನೋಟ್‌ಬುಕ್‌ ಸೆಲೆಬ್ರೇಷನ್‌ ದೊಡ್ಡ ಸುದ್ದಿಯಾಗಿತ್ತು.. ಇದಾದ ಬಳಿಕ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಲ್ಲಿ ಕೆಸ್ಮಿಕ್ ವಿಲಿಯಮ್ಸ್ ಎಸೆತವನ್ನು ಸತತ ಸಿಕ್ಸರ್ ಗೆ ಅಟ್ಟಿದ್ದ ವಿರಾಟ್ ಕೊಹ್ಲಿ, ವಿಲಿಯಮ್ಸ್ ಗೆ ನೋಟ್ ಬುಕ್ ಶೈಲಿಯ ರುಚಿ ತೋರಿಸಿದ್ದರು. ಇದೀಗ ರಾಥಿ ಐಪಿಎಲ್ ಗೆ ನೋಟ್ ಬುಕ್ ತಂದಿದ್ದಾರೆ. ಮುಂದಿನ ದಿನಗಳಲ್ಲಾದ್ರೂ ತನ್ನ ಸೆಲೆಬ್ರೇಷನ್ ರೀತಿನಾ ಚೇಂಜ್ ಮಾಡಿದ್ರಷ್ಟೇ ಇವರಿಗೆ ಭವಿಷ್ಯವಿದೆ.. ಇಲ್ದೇ ಹೋದ್ರೆ ಈಗ ಒಂದು ಮ್ಯಾಚ್‌ನ ಅಮಾನತು ಶಿಕ್ಷೆ ಅನುಭವಿಸುತ್ತಿರುವ ದಿಗ್ವೇಶ್‌ ಮುಂದೆ ಪ್ರತಿ ವಿಕೆಟ್‌ ಪಡೆದಾಗಲೂ  ತನ್ನ ನೋಟ್‌ಬುಕ್‌ ಸೆಲೆಬ್ರೇಷನ್‌ನಿಂದ ಒಂದೊಂದೇ ಮ್ಯಾಚ್‌ ಕಳೆದುಕೊಳ್ತಾ ಹೋಗಬೇಕಾಗಬಹುದು. ಅಲ್ಲದೆ, ಆಡಿದ ಪಂದ್ಯದ ಸಂಭಾವನೆಯನ್ನೂ ದಂಡವಾಗಿ ಪಾವತಿಸಿ, ಉಚಿತವಾಗಿ ಕ್ರಿಕೆಟ್‌ ಆಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಬಹುದು.. ಇನ್ನಾದ್ರೂ ಈ ಆಟಗಾರ ತನ್ನ ಮನಸ್ಥಿತಿಯನ್ನು ಬದಲಿಸಿಕೊಂಡ್ರೆ ಒಳ್ಳೆಯ ಭವಿಷ್ಯವಿದೆ.. ಇಲ್ದೇ ಹೋದ್ರೆ ಬೇಗನೆ ದಿಗ್ವೇಶ್‌ ರಾಥಿಯ ಕೆರಿಯರ್‌ ಎಂಡ್‌ ಆಗೋದ್ರಲ್ಲಿ ಅನುಮಾನವೇ ಇಲ್ಲ..

Shwetha M

Leave a Reply

Your email address will not be published. Required fields are marked *