LSG ದಿಗ್ವೇಶ್ಗೆ ರೂಲ್ಸ್ ಇಲ್ವಾ? ರಾಥಿ ಜುಟ್ಟು ಹಿಡೀತಾರಾ ಅಭಿಷೇಕ್?
ನೋಟ್ಬುಕ್ ಸ್ಟೈಲ್ಗೆ ಡಿಶುಂ.. ಡಿಶುಂ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತೀ ಹೆಚ್ಚು ಬಾರಿ ದಂಡ ಕಟ್ಟಿದ್ದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಯುವ ಸ್ಪಿನ್ನರ್ ದಿಗ್ವೇಶ್ ರಾಥಿ. ಪೇದೆ ಪೇದೆ ಒಂದೇ ತಪ್ಪು ಮಾಡಿ ಹಣ ಕಳೆದುಕೊಂಡು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ಮೈದಾನದಲ್ಲಿ ಸಂಚಲನ ಸೃಷ್ಟಿಸಿದ್ದ ದಿಗ್ವೇಶ್ ಈವರೆಗೆ ಮೂರು ಬಾರಿ ದಂಡ ಕಟ್ಟಿದ್ದಾರೆ. ಅಲ್ಲದೆ ಇದೀಗ ಒಂದು ಪಂದ್ಯದಿಂದ ಅಮಾನತುಗೊಂಡಿದ್ದಾರೆ. ಈ ನಿಷೇಧದೊಂದಿಗೆ ದಿಗ್ವೇಶ್ ರಾಥಿಗೆ ಪಂದ್ಯ ಶುಲ್ಕದ ಶೇ 50 ರಷ್ಟು ದಂಡವನ್ನು ಸಹ ವಿಧಿಸಲಾಗಿದೆ. ಸದ್ಯ ಅವರ ಡಿಮೆರಿಟ್ ಪಾಯಿಂಟ್ 5 ಕ್ಕೇರಿದ್ದು, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ದಿಗ್ವೇಶ್ನನ್ನು ಹೊರಗಿಡುವಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂಚಿಸಲಾಗಿದೆ.
ಪದೇ ಪದೇ ತಪ್ಪು ಮಾಡುತ್ತಿರೋ ರಾಥಿ
ಏಪ್ರೀಲ್ 1 ರಂದು ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದ ದಿಗ್ವೇಶ್ಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಿದ್ದರು. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು. ಇದಾದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತದೇ ನೋಟ್ ಬುಕ್ ಸೆಲೆಬ್ರೇಷನ್ನೊಂದಿಗೆ ದಿಗ್ವೇಶ್ ರಾಥಿ ಕಾಣಿಸಿಕೊಂಡಿದ್ದರು. ಅಲ್ಲದೆ ಐಪಿಎಲ್ ನಿಯಮ ಉಲ್ಲಂಘಿಸಿದ್ದಕಾಗಿ ದಿಗ್ವೇಶ್ಗೆ ಪಂದ್ಯ ಶುಲ್ಕದ ಶೇ. 50 ರಷ್ಟು ದಂಡ ಹಾಗೂ 2 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು. ಆ ನಂತ್ರ ನೋಟ್ಬುಕ್ ಸೆಲೆಬ್ರೇಷನ್ನೊಂದಿಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ ಬೀಳ್ಕೊಡುಗೆ ನೀಡಿದ್ರು. ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಯ್ಯರ್ ವಿಕೆಟ್ ಪಡೆದ ದಿಗ್ವೇಶ್ ಎಂದಿನಂತೆ ನೋಟ್ಬುಕ್ ಸಹಿಯೊಂದಿಗೆ ಸಂಭ್ರಮಿಸಿದರು. ಆದ್ರೆ ಕಳೆದ ಸಲಕ್ಕಿಂತ ಈ ಸಲದ ನೋಟ್ ಬುಕ್ ಸೆಲಬ್ರೇಷನ್ ದೊಡ್ಡ ಮಟ್ಟದಲ್ಲಿ ಬೆಂಕಿ ಹಚ್ಚಿದೆ.
ರಾಥಿ ಸೆಲೆಬ್ರೇಷನ್‌ಗೆ ರೊಚ್ಚಿಗೆದ್ದ ಅಭಿಷೇಕ್ ಶರ್ಮಾ
ಸೋಮವಾರ ನಡೆದ ಎಸ್‌ಆರ್‌ಹೆಚ್ ವಿರುದ್ದದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ವಿಕೆಟ್ ಪಡೆದ ದಿಗ್ವೇಶ್, ನೋಟ್ ಬುಕ್ ಸೆಲೆಬ್ರೇಷನ್ ಮಾಡಿದರು. ದಿಗ್ವೇಶ್ ನಡೆಯಿಂದ ಕೊಪಗೊಂಡ ಅಭಿಷೇಕ್ ಶರ್ಮಾ ಪ್ರತ್ಯುತ್ತರ ನೀಡಲು ಮುಂದಾದರು. ಇಬ್ಬರ ನಡುವಿನ ಜಗಳವು ತಾರಕ್ಕೇರುತ್ತಿದ್ದಂತೆ, ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿದರು. ಇಬ್ಬರ ಜಗಳವನ್ನ ಬಿಡಿಸಿದ್ರು. ನಂತ್ರ ದಿಗ್ವೇಶ್ ರಾಥಿ ಜೊತೆ ಮೈದಾನದಲ್ಲೇ ಜಗಳಕ್ಕಿಳಿದಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ.
ನಿನ್ ಜುಟ್ಟು ಹಿಡಿದು ಬಾರಿಸ್ತೀನಿ’ ಎಂದ ಅಭಿಷೇಕ್
ಪಂದ್ಯ ಮುಗಿದ ಮೇಲೆ ಕೂಡ ಇವರ ಜಗಳ ಮುಂದುವರಿದಿತ್ತು. ಉಭಯ ತಂಡದ ಆಟಗಾರರು ಪರಸ್ಪರ ಹಸ್ತಲಾಘುವ ಮಾಡುವೆ ವೇಳೆ ಸರತಿ ಸಾಲಲ್ಲಿ ಬಂದ ದಿಗ್ವೇಶ್ ರಥಿಯನ್ನು ಕಂಡ ಅಭಿಷೇಕ್ ಶರ್ಮಾ ನಿನ್ ಜುಟ್ಟು ಹಿಡಿದು ಭಾರಿಸ್ತೀನಿ ಎಂದು ಹೇಳಿದರು. ಈ ವೇಳೆ ದಿಗ್ವೇಶ್ ರಥಿ ಸಮಜಾಯಿಷಿ ನೀಡಲು ಮುಂದಾದರೂ ಅಲ್ಲಿಯೇ ಪಕ್ಕದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಹಾಯಕ ಕೋಚ್ ವಿಜಯ್ ದಹಿಯಾ ಇಬ್ಬರನ್ನು ಸಮಾಧಾನ ಮಾಡಿ ಮುಂದಕ್ಕೆ ಹೋಗುವಂತೆ ಹೇಳಿದರು. ಆಗ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿ ಮುಂದಕ್ಕೆ ಹೋದರು.
ರಾಥಿ ಎರಡು ಹೆಚ್ಚುವರಿ ಡಿಮೆರಿಟ್ ಪಾಯಿಂಟ್‌ಗಳನ್ನು ಪಡೆದಿದ್ದಕ್ಕಾಗಿ, ಒಂದು ಪಂದ್ಯದ ಅಮಾನತು ಶಿಕ್ಷೆ ವಿಧಿಸಲಾಗಿದೆ. ಜತೆಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯದ ಶೇ.50ರಷ್ಟು ಶುಲ್ಕವನ್ನು ಕಡಿತಗೊಳಿಸಲಾಗಿದೆ. ಒಟ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಸೂಪರ್ ಆಗಿ ಬೌಲಿಂಗ್ ಮಾಡ್ತಿದ್ದ ರಾಥಿ, ನೋಟ್‌ಬುಕ್ ಸ್ಟೈಲ್ ಮಾಡೋಕೆ ಹೋಗಿ 3 ಬಾರಿಗೆ ತಂಡ ತೆತ್ತಿದ್ದಾರೆ. ಅಲ್ಲದೇ ಒಂದು ಪಂದ್ಯದಿಂದ ಅಮಾನತ್ತು ಆಗಿದ್ದಾರೆ. ಮುಂದೂ ಕೂಡ ಹೀಗೆ ಮಾಡಿದ್ರೆ ಐಪಿಎಲ್‌ನಿಂದಲೇ ರಾಥಿ ಹೊದ್ರು ಅಚ್ಚರಿಯಿಲ್ಲ.