5 ಬಾಲ್ ಗೆ 5 ವಿಕೆಟ್ ಕಿತ್ತ ರಾಥಿ – ಕಾಂಟ್ರವರ್ಸಿ ದಿಗ್ವೇಶ್ ಈಗ HERO
ನೋಟ್ ಬುಕ್ ಸೆಲೆಬ್ರೇಷನ್ ಕೈ ಬಿಟ್ರಾ?

2025ರ ಐಪಿಎಲ್ನಲ್ಲಿ ಸಾಕಷ್ಟು ಯಂಗ್ಸ್ಟರ್ಸ್ ಶೈನ್ ಆಗಿದ್ದಾರೆ. ತಮ್ಮ ಮೊದಲ ಸೀಸನ್ನಲ್ಲೇ ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ, ಆಯುಷ್ ಮಾತ್ರೆ, ದಿಗ್ವೇಶ್ ರಾಥಿಯಂತ ಯಂಗ್ ಸ್ಟರ್ಸ್ ತಮ್ಮ ಆಟದ ಮೂಲಕವೇ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅದ್ರಲ್ಲೂ ದಿಗ್ವೇಶ್ ರಾಥಿ ಹೆಸ್ರನ್ನ ಮರೆಯೋಕೆ ಸಾಧ್ಯನೇ ಇಲ್ಲ. ಯಾಕಂದ್ರೆ ಆಟಕ್ಕಿಂತಲೂ ಜಾಸ್ತಿ ಸುದ್ದಿಯಾಗಿದ್ದು ಅವ್ರ ನೋಟ್ ಬುಕ್ ಸೆಲೆಬ್ರೇಷನ್ನಿಂದ. ಅದೇ ಸಂಭ್ರಮಾಚರಣೆಯಿಂದ ಫೈನ್ ಕಟ್ಟಿದ್ದೂ ಅಲ್ದೇ ಪಂದ್ಯದಿಂದಲೇ ಬ್ಯಾನ್ ಕೂಡ ಆಗಿದ್ರು. ಅದ್ರಲ್ಲೂ ಆರ್ಸಿಬಿ ಅಭಿಮಾನಿಗಳಿಗಂತೂ ಈ ಆಟಗಾರ ಸ್ವಲ್ಪ ಜಾಸ್ತಿನೇ ನೆನಪಿರ್ತಾರೆ. ಬಟ್ ಈ ಕಾಂಟ್ರವರ್ಸಿ, ಅಗ್ರೆಶನ್, ಕನ್ಫ್ಯೂಷನ್ಸ್ ಎಲ್ಲಾ ಹೊರಗಿಟ್ಟು ನೋಡಿದ್ರೆ ದಿಗ್ವೇಶ್ ರಾಥಿಯಲ್ಲಿ ಅತ್ಯದ್ಭುತ ಟ್ಯಾಲೆಂಟ್ ಇದೆ. ಇದೀಗ ಸ್ಥಳೀಯ ಟಿ-20ಲೀಗ್ನಲ್ಲಿ ಮತ್ತೊಮ್ಮೆ ಪ್ರೂವ್ ಆಗಿದೆ.
ಇದನ್ನೂ ಓದಿ : ICUನಲ್ಲಿ ತಾಯಿ.. ENGಗೆ ಗಂಭೀರ್ – ತಂಡಕ್ಕಾಗಿ ಗೌತಮ್ ಅತಿದೊಡ್ಡ ತ್ಯಾಗ
18ನೇ ಸೀಸನ್ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕಣಕ್ಕಿಳಿದಿದ್ದ ಯುವ ಲೆಗ್-ಸ್ಪಿನ್ನರ್ ರಾಥಿ ತಮ್ಮ ಐಪಿಎಲ್ ಡೆಬ್ಯೂ ಸೀಸನ್ನಲ್ಲೇ ಸಾಕಷ್ಟು ಸದ್ದು ಮಾಡಿದ್ರು. ಮಿಸ್ಟರಿ ಗೂಗ್ಲಿಗಳು, ಎಕಾನಮಿ ಬೌಲಿಂಗ್, ಅದ್ರಲ್ಲೂ ವಿಕೆಟ್ ಬಿದ್ದಾಗ ತಮ್ಮದೇ ವಿಭಿನ್ನ ಶೈಲಿಯ ನೋಟ್ಬುಕ್ ಸೆಲೆಬ್ರೇಷನ್ನಿಂದ ಹಾಟ್ ಟಾಪಿಕ್ ಆಗಿದ್ರು. ಐಪಿಎಲ್ನಲ್ಲಿ ನೋಟ್ಬುಕ್ ಸೆಲೆಬ್ರೇಷನ್ಗಾಗಿ 3 ಬಾರಿ ದಂಡ ಕಟ್ಟಿದ್ದಲ್ಲದೆ ಒಂದು ಪಂದ್ಯದಿಂದ ನಿಷೇದಕ್ಕೂ ಒಳಗಾಗಿದ್ದರು. ಬಟ್ ಅವ್ರ ಟ್ಯಾಲೆಂಟ್ನ ಇಗ್ನೋರ್ ಮಾಡೋಕೆ ಆಗಲ್ಲ. ಇದೀಗ ಸ್ಥಳೀಯ ಟಿ20 ಲೀಗ್ನಲ್ಲಿ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ಗಳನ್ನು ಪಡೆಯುವ ಮೂಲಕ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದಾರೆ. ಸತತ 5 ವಿಕೆಟ್ ಉರುಳಿಸಿ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.
ಸ್ಥಳೀಯ ಟಿ20 ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಸತತ ಐದು ಎಸೆತಗಳಲ್ಲಿ ಐದು ವಿಕೆಟ್ಗಳನ್ನು ರಾಥಿ ಪಡೆದಿದ್ದಾರೆ. ಕೇವಲ ಐದು ಎಸೆತಗಳಲ್ಲಿ ಅರ್ಧದಷ್ಟು ತಂಡವನ್ನು ಪೆವಿಲಿಯನ್ಗೆ ಕಳುಹಿಸಿದ್ರು. ಇದಕ್ಕೂ ಮೊದಲು, ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ಗಳನ್ನು ಪಡೆದಿದ್ದರೆ, ದ್ವಿಗೇಶ್ ಸ್ಥಳೀಯ ಟಿ20 ಪಂದ್ಯದಲ್ಲಿ ಐದು ವಿಕೆಟ್ಗಳನ್ನು ಪಡೆದಿದ್ದಾರೆ. ವಿಕೆಟ್ ಪಡೆಯುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಈ ವಿಡಿಯೋವನ್ನ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾವ ಲೀಗ್ ಅಂತಾ ಮೆನ್ಷನ್ ಮಾಡದ ಗೋಯೆಂಕಾ ಇದು ಸ್ಥಳೀಯ ಟಿ20 ಲೀಗ್ನ ಕ್ಷಣವೆಂದು ಉಲ್ಲೇಖಿಸಿದ್ದಾರೆ.
ಒಂದೇ ಓವರ್ನಲ್ಲಿ ಅದೂ ಕೂಡ ಬ್ಯಾಕ್ ಟು ಬ್ಯಾಕ್ 5 ವಿಕೆಟ್ಗಳನ್ನ ಪಡೆದಿರೋದು ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಸಾಧನೆಯಾಗಿದೆ. ಈ ಪಂದ್ಯದಲ್ಲಿ ಒಟ್ಟಾರೆ 3.5 ಓವರ್ಗಳನ್ನು ಬೌಲಿಂಗ್ ಮಾಡಿದ ರಾಥಿ, 28 ರನ್ಗಳಿಗೆ 7 ವಿಕೆಟ್ಗಳನ್ನು ಪಡೆದರು. ಎದುರಾಳಿ ತಂಡಕ್ಕೆ 36 ಎಸೆತಗಳಲ್ಲಿ 113 ರನ್ಗಳ ಗುರಿಯಿದ್ದಾಗ ರಾಥಿ ತಮ್ಮ ಕೊನೆಯ ಓವರ್ಗೆ ಬಂದರು. ತಮ್ಮ ಗೂಗ್ಲಿಗಳಿಂದಲೇ ಎದುರಾಳಿ ಬ್ಯಾಟರ್ಗಳನ್ನ ಕಾಡಿದ ಯಂಗ್ ಸ್ಪಿನ್ನರ್ ನಾಲ್ವರು ಬ್ಯಾಟರ್ಗಳನ್ನು ಕ್ಲೀನ್ ಬೌಲ್ಡ್ ಮಾಡಿದರೆ, ಒಬ್ಬರು ವಿಕೆಟ್ಕೀಪರ್ಗೆ ಕ್ಯಾಚ್ ನೀಡಿದ್ದಾರೆ. ಹೇಳಿ ಕೇಳಿ ದಿಗ್ವೇಶ್ ರಾಠಿ ಬೌಲಿಂಗ್ ಶೈಲಿಯು ಮಿಸ್ಟರಿ ಸ್ಪಿನ್ಗೆ ಹೆಸರಾಗಿದೆ. ಸ್ಥಳೀಯ ಟಿ20 ಪಂದ್ಯದಲ್ಲಿ ರಾಥಿ ಅವ್ರ ಗೂಗ್ಲಿಗಳನ್ನ ಬ್ಯಾಟರ್ಗಳು ರೀಡ್ ಮಾಡುವುದು ತುಂಬಾನೇ ಕಷ್ಟ. ಹೀಗಾಗೇ ಬೇಗ ಬೇಗನೆ ವಿಕೆಟ್ ಒಪ್ಪಿಸಿದ್ದಾರೆ.
ಇನ್ನು 2024ರ ಐಪಿಎಲ್ ಹರಾಜಿನಲ್ಲಿ ಎಲ್ಎಸ್ಜಿ ಫ್ರಾಂಚೈಸಿಯು ರಾಥಿ ಅವ್ರನ್ನ ಮೂಲ ಬೆಲೆ 30 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ರವಿ ಬಿಷ್ಣೋಯ್ ಮತ್ತು ಎಂ. ಸಿದ್ಧಾರ್ಥ್ಗೆ ಬ್ಯಾಕ್ಅಪ್ ಆಗಿ ಆಯ್ಕೆಯಾದ ರಾಥಿ, ತಮ್ಮ ಮೊದಲ ಸೀಸನ್ನಲ್ಲಿ ಪ್ರಮುಖ ಬೌಲರ್ ಆಗಿ ಮಿಂಚಿದರು. 13 ಪಂದ್ಯಗಳಲ್ಲಿ 14 ವಿಕೆಟ್ಗಳನ್ನು ಪಡೆದ ರಾಥಿ, 8.25 ರ ಎಕಾನಮಿಯೊಂದಿಗೆ ರನ್ಗಳನ್ನು ಕಂಟ್ರೋಲ್ ಮಾಡುವಲ್ಲಿ ಯಶಸ್ವಿಯಾಗಿದ್ರು. ಸುನಿಲ್ ನರೈನ್, ಪ್ರಿಯಾಂಶ್ ಆರ್ಯ, ಮತ್ತು ಅಭಿಷೇಕ್ ಶರ್ಮಾ ರಂತಹ ಆಟಗಾರರ ವಿಕೆಟ್ಗಳನ್ನು ಪಡೆದಿರುವ ರಾಥಿ ಲಕ್ನೋ ಪಾಲಿಗೆ ಪ್ರಮುಖ ಅಸ್ತ್ರವಾಗಿದ್ದಾರೆ.
ಐಪಿಎಲ್ನಲ್ಲಿ ರಾಥಿ ಆಟಕ್ಕಿಂತ ನೋಟ್ ಬುಕ್ ಸೆಲೆಬ್ರೇಷನ್ ವಿಚಾರವಾಗಿಯೇ ಜಾಸ್ತಿ ಚರ್ಚೆಗೆ ಗ್ರಾಸವಾಗಿದ್ರು. ವಿಕೆಟ್ ಪಡೆದ ನಂತರ ತಮ್ಮ ಎಡಗೈ ಮೇಲೆ ಬಲಗೈನಿಂದ ಬರೆಯೋ ಶೈಲಿಯನ್ನ ನೋಟ್ಬುಕ್ನಲ್ಲಿ ಆಟಗಾರರ ಹೆಸರನ್ನು ಬರೆಯುವ ರೀತಿಯಲ್ಲಿ ಸೆಲೆಬ್ರೇಟ್ ಮಾಡ್ತಿದ್ರು. ಇದೊಂಥರ ಎದುರಾಳಿ ಆಟಗಾರರಿಗೆ ಅಗ್ರೆಸ್ಸಿವ್ ಇಂಟೆಂಟ್ನಂತೆ ಕಂಡು ಬಂದಿತ್ತು. ಇದನ್ನು ಕೆಲವು ಅಂಪೈರ್ಗಳು ಮತ್ತು ಎದುರಾಳಿ ಆಟಗಾರರು ವಿರೋಧಿಸಿ ತಿರುಗಿಬಿದ್ದರು. ಇದರಿಂದ ಎರಡು ಬಾರಿ ದಂಡ ವಿಧಿಸಲಾಯಿತು. ಪಂಜಾಬ್ ಕಿಂಗ್ಸ್ ವಿರುದ್ಧ 25% ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 50% ದಂಡ ವಿಧಿಸಿದ್ರು. ಅಲ್ದೇ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾರನ್ನು ಔಟ್ ಮಾಡಿದ ನಂತರ ರಾಥಿ ಮತ್ತದೇ ಸ್ಟೈಲ್ ನಲ್ಲಿ ಸೆಲೆಬ್ರೇಟ್ ಮಾಡಿದ್ರು. ಹಾಗೇ ಆನ್ ಫೀಲ್ಡ್ನಲ್ಲೇ ಅಭಿಷೇಕ್ ಮತ್ತು ರಾಥಿ ನಡುವೆ ವಾಗ್ವಾದ ಆಗಿತ್ತು. ಇದಾದ ಬಳಿಕ ರಾಥಿಗೆ 50% ದಂಡ ಮತ್ತು ಎರಡು ಡಿಮೆರಿಟ್ ಪಾಯಿಂಟ್ಗಳನ್ನು ನೀಡಲಾಗಿತ್ತು. ಆ ಬಳಿಕ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಿಂದ ರಾಥಿಯನ್ನು ಒಂದು ಪಂದ್ಯಕ್ಕೆ ನಿಷೇಧಿಸಲಾಗಿತ್ತು.
ಇನ್ನು ಆರ್ಸಿಬಿ ಫ್ಯಾನ್ಸ್ಗಂತೂ ಈ ಸೀಸನ್ನ ಲೀಗ್ ಹಂತದ ಕೊನೇ ಪಂದ್ಯವನ್ನ ಮರೆಯೋಕೆ ಸಾಧ್ಯನೇ ಇಲ್ಲ. ಲಕ್ನೋ ವಿರುದ್ಧದ ಆ ಪಂದ್ಯದಲ್ಲಿ 228 ರನ್ಗಳನ್ನ ಚೇಸ್ ಮಾಡಿ ಇತಿಹಾಸ ಸೃಷ್ಟಿಸಿದ್ರು. ಹಾಗೇ ಆ ಪಂದ್ಯದಲ್ಲಿ ರಾಥಿ ಜೊತೆಗಿನ 2 ವಿಚಾರಗಳು ಸಾಕಷ್ಟು ಸದ್ದು ಮಾಡಿದ್ವು. ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ ಸಿಬಿ ಪರ ಜಿತೇಶ್ ಶರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡ್ತಿದ್ರು. 49 ರನ್ ಬಾರಿಸಿದ್ದ ಜಿತೇಶ್ ಶರ್ಮಾರನ್ನ ದಿಗ್ವೇಶ್ ರಾಥಿ ಔಟ್ ಮಾಡಿದ್ರು. 17ನೇ ಓವರ್ನ ಮೊದಲ ಎಸೆತದಲ್ಲೇ ಜಿತೇಶ್ ನೇರವಾಗಿ ಆಯುಷ್ ಬದೋನಿಗೆ ರಿವರ್ಸ್-ಸ್ವಿಫ್ಟ್ ಮಾಡಿದರು. ಈ ವೇಳೆ ರಾಥಿ ಸ್ಟೈಲಾಗಿ ಪಿಚ್ ಮೇಲೆ ಬರೆದು ಮತ್ತದೇ ನೋಟ್ಬುಕ್ ಸೆಲೆಬ್ರೇಷನ್ ಮಾಡಿದ್ರು. ಬಟ್ ಅವ್ರ ಚೆಕ್ಬೌನ್ಸ್ ಆಗಿತ್ತು. ಯಾಕಂದ್ರೆ ಅದು ನೋ ಬಾಲ್ ಅಂತಾ ಸ್ಟೇಡಿಯಮ್ನಲ್ಲಿ ಌಂಬುಲೆನ್ಸ್ ಹಾರ್ನ್ ಸೌಂಡ್ ಆಗಿತ್ತು. ಆ ಬೌಲಿಂಗ್ನಲ್ಲಿ ರಾಥಿ ಬ್ಯಾಕ್-ಫೂಟ್ ನೋ ಬಾಲ್ ಮಾಡಿದ್ದಾರೆ ಅನ್ನೋದು ಗೊತ್ತಾಯ್ತು. ಸೋ ಫ್ರೀ ಹಿಟ್ ಸಿಕ್ತು. ನೆಕ್ಸ್ಟ್ ಬಾಲ್ನಲ್ಲೇ ಸಿಕ್ಸ್ ಬಾರಿಸಿದ ಜಿತೇಶ್ 55 ಬಾರಿಸಿ ಅರ್ಧಶತಕ ಕಂಪ್ಲೀಟ್ ಮಾಡಿದ್ರು. ಇಷ್ಟಕ್ಕೆ ಸುಮ್ಮನಾಗದ ರಾಥಿ ಇದೇ ಓವರ್ನಲ್ಲೇ ಜಿತೇಶ್ರನ್ನ ಮಂಕಡ್ ರನೌಟ್ ಮಾಡಲು ಮುಂದಾಗಿದ್ರು. ಬೌಲ್ ಮಾಡೋ ಮೊದ್ಲೇ ಜಿತೇಶ್ ಕ್ರೀಸ್ ಬಿಟ್ಟಿದ್ದಾರೆ ಅಂತಾ ರನ್ಔಟ್ ಅಂತಾ ಅಪೀಲ್ ಕೂಡ ಮಾಡಿ ಥರ್ಡ್ ಅಂಪೈರ್ಗೆ ಹೋಗಿದ್ರು. ಬಟ್ ರಾಥಿ ನಾನ್-ಸ್ಟ್ರೈಕರ್ನ ಕ್ರೀಸ್ ಒಳಗೆ ಆಲ್ರೆಡಿ ಬಂದು ಆ ನಂತ್ರ ಬೇಲ್ಸ್ ಪ್ಲಿಪ್ ಮಾಡಿದ್ರು. ಮತ್ತೊಂದೆಡೆ ರನ್ಔಟ್ ಅಪೀಲ್ನ ಕ್ಯಾಪ್ಟನ್ ರಿಷಭ್ ಪಂತ್ ಹಿಂತೆಗೆದುಕೊಂಡ್ರು. ಹೀಗಾಗಿ ನಾಟ್ಔಟ್ ಕೊಡಲಾಯ್ತು. ಸೋ ಈ ಪಂದ್ಯದ ಬಳಿಕ ರಾಥಿ ಸಾಕಷ್ಟು ಟ್ರೆಂಡಿಂಗ್ ನಲ್ಲಿದ್ರು.