30 ಲಕ್ಷ-18.37 ಲಕ್ಷ = 11.67 ಲಕ್ಷ – 3 ಸಲ ಫೈನ್.. ರಾಥಿ ಅಕೌಂಟ್ ಖಾಲಿ
ಕೊಹ್ಲಿ ಕೆಣಕದಂತೆ ದಿಗ್ವೇಶ್‌ಗೆ ವಾರ್ನಿಂಗ್!

ಲಖನೌ ಸೂಪರ್ ಜೈಂಟ್ಸ್ ಸ್ಪಿನ್ನರ್ ದಿಗ್ವೇಶ್ ರಾಠಿ ತಮ್ಮ ಬೌಲಿಂಗ್‌ಗಿಂತ ಹೆಚ್ಚು ಗಮನ ಸೆಳೆದಿದ್ದು ತಮ್ಮ ನೋಟ್‌ಬುಕ್ ಸೆಲಿಬ್ರೇಷನ್ ಮೂಲಕ. ಈ ಸೆಲಿಬ್ರೇಷನ್ ರಾಥಿ ಕ್ರಿಕೆಟ್ ಸಾಧನೆ ಮಸುಕಾಗುವಂತೆ ಮಾಡಿ ಬಿಟ್ಟಿದೆ. ಅತಿಯಾದ ಸೆಲಿಬ್ರೇಷನ್ ಹಾಗೂ ವಿಕೆಟ್ ಕಬಳಿಸಿದ ಬಳಿಕ ಎದುರಾಳಿ ಬ್ಯಾಟರ್‌ಗಳನ್ನು ಕೆಣಕುವ ಸ್ವಭಾವದಿಂದಲೇ ದಿಗ್ವೇಶ್ ರಾಠಿ ಒಂದಲ್ಲಾ ಎರಡಲ್ಲ ಬರೋಬ್ಬರಿ ಮೂರು ಬಾರಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿ ಪೈನ್ ಕಟ್ಟಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಬಳಿಸಿ, ಅತಿರೇಕದ ನೋಟ್‌ಬುಕ್ ಸೆಲಿಬ್ರೇಷನ್ ಮಾಡಿದ ತಪ್ಪಿಗೆ ರಾಥಿ ಪಂದ್ಯದ ಸಂಭಾವನೆಯ 50% ದಂಡ ಹಾಗೂ ಒಂದು ಪಂದ್ಯದ ನಿಷೇಧದ ಶಿಕ್ಷೆಗೆ ಒಳಗಾಗಿದ್ದಾರೆ. .
ದಿಗ್ವೇಶ್ ಜೇಬಿಗೆ ಎಷ್ಟು ಕತ್ತರಿ
ಈ ಸೀಸನ್‌ನಲ್ಲೇ ಬಿಸಿಸಿಐ ದಿಗ್ವೇಶ್ ಮೇಲೆ ಮೂರನೇ ಬಾರಿಗೆ ದಂಡದ ಬರೆ ಬೀಸಿದೆ. ಈ ಸೀಸನ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಐಪಿಎಲ್ ಮೆಗಾ ಹರಾಜಿನಲ್ಲಿ ದಿಗ್ವೇಶ್ ರಾಥಿಗೆ 30 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು. ಈ 30 ಲಕ್ಷ ರುಪಾಯಿಗೆ ಸರ್ಕಾರಿ ಟ್ಯಾಕ್ಸ್ 30% ಅಪ್ಲೈ ಆಗಲಿದ್ದು, ಅಲ್ಲಿ 9 ಲಕ್ಷ ರುಪಾಯಿ ಕಟ್ ಆಗಿ 21 ಲಕ್ಷ ರಾಥಿ ಕೈ ಸೇರಿದೆ. 21 ಲಕ್ಷ ಇಟ್ಕೊಂಡು ಇರೋದ್ ಬಿಟ್ಟು ಮೈದಾನದಲ್ಲಿ ಸೈನ್ ಮಾಡೋಕೆ ಹೋಗಿ ದಿಗ್ವೇಶ್ ಕಳ್ಕೊಂಡಿದ್ದು ಕೇಳಿದ್ರೆ ನಿಮ್ಗೆ ತಲೆಕೊಟ್ಟು ಹೋಗುತ್ತೆ. ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ದಿಗ್ವೇಶ್ ರಾಠಿಗೆ ಮೊದಲ ಬಾರಿಗೆ ದಂಡ ವಿಧಿಸಲಾಗಿತ್ತು. ಈ ವೇಳೆಯೂ ಇವರು ಪ್ರಿಯಾಂಶ್ ಆರ್ಯರನ್ನು ಔಟ್ ಮಾಡಿ ತಮ್ಮ ಸಿಗ್ನೇಚರ್ ನೋಟ್‌ಬುಕ್ ಸೆಲೆಬ್ರೇಷನ್ ಮಾಡಿದರು. ಇದರಿಂದಾಗಿ ಅವರಿಗೆ 1.87 ಲಕ್ಷ ರೂ. ದಂಡ ವಿಧಿಸಲಾಯಿತು. ಇನ್ನು ಏಪ್ರಿಲ್ 4 ರಂದು ನಡೆದು ಪಂದ್ಯದಲ್ಲಿ ಮುಂಬೈ ವಿರುದ್ಧದ ಪಂದ್ಯದಲ್ಲೂ ದಂಡ ವಿಧಿಸಲಾಗಿತ್ತು. ಈ ವೇಳೆ ಇವರಿಗೆ 3.75 ಲಕ್ಷ ರೂ. ದಂಡ ಬಿದ್ದಿತ್ತು. ಇನ್ನು ಸೋಮವಾರ ನಡೆದ ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲೂ ದಿಗ್ವೇಶ್ ರಾಠಿಗೆ ಮೂರನೇ ಬಾರಿಗೆ ದಂಡ ವಿಧಿಸಲಾಯಿತು. ಎಸ್‌ಆರ್‌ಎಚ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಕೆಣಕಿದ ದಿಗ್ವೇಶ್ ಜೇಬಿಗೆ 3.75 ಲಕ್ಷ ರೂ. ಕತ್ತರಿ ಬಿದ್ದಿತು. ಅಂದರೆ ಸರ್ಕಾರಿ ಟ್ಯಾಕ್ಸ್ ಕಳೆದು ಉಳಿದ 21 ಲಕ್ಷ ರುಪಾಯಿನಲ್ಲಿ ದಿಗ್ವೇಶ್ ರಾಠಿ 9.37 ಲಕ್ಷ ರುಪಾಯಿಗಳನ್ನು ದಂಡದ ರೂಪದಲ್ಲಿಯೇ ಕಟ್ಟಿದ್ದಾರೆ. ಹೀಗಾಗಿ ದಿಗ್ವೇಶ್ ರಾಠಿಗೆ ಈ ಬಾರಿಯ ಐಪಿಎಲ್ ಮುಗಿದ ಬಳಿಕ ಅವರ ಖಾತೆಯಲ್ಲಿ ಉಳಿಯುವ ಒಟ್ಟು ಮೊತ್ತ ಕೇವಲ 10.63 ಲಕ್ಷ ರುಪಾಯಿಗಳು ಮಾತ್ರ . ನೋಡಿ ಇನ್ನೂ ಎಲ್‌ಎಸ್‌ಜಿಗೆ ಎರಡು ಮ್ಯಾಚ್ ಇದೆ ಇದ್ರಲ್ಲಿ ಗುಜರಾತ್ ವಿರುದ್ಧದ ಮ್ಯಾಚ್‌ನಿಂದ ರಾಥಿಯನ್ನ ಹೊರಗಿಟ್ಟಿದ್ದಾರೆ. ಇನ್ನೂ ಆರ್‌ಸಿಬಿ ವಿರುದ್ಧ ಇದೇ ತಿಂಗಳ 27ಕ್ಕೆ ಮ್ಯಾಚ್ ಇದೆ. ಈ ಮ್ಯಾಚ್‌ನಲ್ಲಿ ಎಲ್ಲಾದ್ರೂ ಮತ್ತೆ ದಿಗ್ವೇಶ್ ರಾಥಿ ಪಿಚ್‌ನಲ್ಲಿ ಸೈನ್ ಹಾಕೋಕೆ ಹೋದ್ರೆ, ದೊಡ್ಡ ಬೆಲೆ ತರಬೇಕಾಗುತ್ತೆ.
ಕೊಹ್ಲಿ ಎದುರು ಹಿಂಗಾಡ್ಬೇಡ ಎಂದ ಆರ್‌ಸಿಬಿ ಫ್ಯಾನ್ಸ್!
ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿ ನೋಟ್‌ಬುಕ್ ಸೆಲೆಬ್ರೇಷನ್ ಮಾಡಿ ಮೈದಾನದಿಂದ ಹೊರಗೆ ನಡಿ ಎನ್ನುವಂತೆ ಸನ್ನೆ ಮಾಡಿದ್ರು ರಾಥಿ. ಇದರಿಂದ ಅಭಿಷೇಕ್ ಶರ್ಮಾ ಕೂಡ ಕೋಪಗೊಂಡು ನಿನ್ನ ಜುಟ್ಟು ಹಿಡಿದು ಬಾರ್ಸಿನಿ ಮಗನೇ ಅಂತ ಹೇಳಿದ್ರು. ಇಬ್ಬರ ಜಗಕ್ಕೆ ತಾರಕ್ಕೇರಿತ್ತು. ಆದ್ರೆ ಆರ್‌ಸಿಬಿ ವಿರುದ್ಧ ಹೀಗ್ ಮಾಡಬೇಡ ಅಂತ ಫ್ಯಾನ್ಸ್ ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಆಡದೇ ಇದ್ದರೂ ಮೇ 27ರಂದು ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ದಿಗ್ವೇಶ್ ರಾಥಿ ಆಡಲಿದ್ದಾರೆ. ಆದ್ರೆ ಈ ಪಂದ್ಯದಲ್ಲಿ ಕೊಹ್ಲಿಯನ್ನ ಕೆಣಕಬೇಡ ಅಂತ ಹೇಳಿದ್ದಾರೆ ಫ್ಯಾನ್ಸ್..
ಯಾಕಂದ್ರೆ ಈಗಾಗಲೇ ಎಲ್‌ಎಸ್‌ಜಿ ತಂಡದ ಆಟಗಾರರು ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ತಂಡದ ಬೌಲರ್ ಆಗಿದ್ದ ನವೀನ್ ಉಲ್ ಹಕ್ ಮತ್ತು ಕೋಚ್ ಆಗಿದ್ದ ಗೌತಮ್ ಗಂಭೀರ್ ಅವರ ಜೊತೆ ಮೈದಾನದಲ್ಲೇ ಗಲಾಟೆಯಾಗಿತ್ತು. ಈಗ ದಿಗ್ವೇಶ್ ರಾಠಿ ಈ ರೀತಿ ಮೈದಾನದಲ್ಲಿ ಅತಿರೇಖಾದ ವರ್ತನೆ ತೋರಿಸಿದರೆ ಅದಕ್ಕೆ ವಿರಾಟ್ ಕೊಹ್ಲಿ ತಿರುಗೇಟು ನೀಡುವುದು ಗ್ಯಾರಂಟಿ. ವೆಸ್ಟ್ ಇಂಡೀಸ್ ತಂಡದ ವೇಗದ ಬೌಲರ್ ಕೆರ್‍ಸಿಕ್ ವಿಲಿಯಮ್ಸ್ ಇದೇ ರೀತಿ ಸಹಿ ಹಾಕುವ ಸಂಭ್ರಮಾಚರಣೆ ಮಾಡಿ ಕೊಹ್ಲಿ ಅವರನ್ನು ಕೆರಳಿಸಿದ್ದರು. ಬಳಿಕ ಕೊಹ್ಲಿ ಪ್ರತಿ ಬಾರಿ ಬೌಂಡರಿ, ಸಿಕ್ಸರ್ ಬಾರಿಸಿ ಅದೇ ರೀತಿ ಸಹಿ ಮಾಡುವ ಮೂಲಕ ವಾಪಸ್ ನೀಡಿದ್ದರು. ಅದನ್ನು ನೆನಪಿಸಿಕೊಂಡಿರುವ ಅಭಿಮಾನಿಗಳು ದಯವಿಟ್ಟು ಕೊಹ್ಲಿಯನ್ನು ಕೆಣಕಬೇಡ ಎಂದು ಬುದ್ದಿವಾದ ಹೇಳಿದ್ದಾರೆ.
ಸೈನ್ ಮತ್ತೆ ರಿಪೀಟ್ ಆದ್ರೆ IPLನಿಂದ ಬ್ಯಾನ್?
ಹೌದು.. ಈಗಾಗಲೇ ಎಷ್ಟೇ ಪೈನ್ ಹಾಕಿ ಬುದ್ಧಿ ಹೇಳಿದ್ರೂ ದಿಗ್ವೇಶ್ ರಾಥಿ ಕೇಳುತ್ತಿಲ್ಲ. ಮಾಡಿದ್ದ ತಪ್ಪನ್ನೇ ಮಾಡುತ್ತಿದ್ದಾರೆ. ಡಿಮೇರಿಟ್ ಪಾಯಿಂಟ್ಸ್ ಜೊತೆ ಫೈನ್ ಕೂಡ ಕಟ್ಟುತ್ತಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಬಿಸಿಸಿಐ ರೊಚ್ಚಿಗೆದ್ದು ಐಪಿಎಲ್‌ನಿಂದಲೇ ಬ್ಯಾನ್ ಮಾಡಿದ್ರೂ ಮಾಡಬಹುದು.. ಆಮೇಲೆ ರಾಥಿ ತನ್ನ ಭವಿಷ್ಯ ಅಂತ್ಯಕ್ಕೆ ತಾನೇ ಸೈನ್ ಹಾಕಿಕೊಳ್ಳಬೇಕಾಗುತ್ತೆ. ಹೀಗಾಗಿ ಚೆನ್ನಾಗಿ ವಿಕೆಟ್ ತೆಗೆಯುತ್ತಿರುವ ರಾಥಿ ತನ್ನ ತಪ್ಪನ್ನ ತಿದ್ದಿಕೊಂಡು ಇನ್ನಾದ್ರೂ ನೋಟ್‌ಬುಕ್ ಸೆಲೆಬ್ರೇಷನ್ ಬಿಡಬೇಕು. ಏನೂ ಆಗಲ್ಲ ನಾನೇ ಅದೇ ಮಾಡ್ತೀನಿ ಅಂತ ಹೋದ್ರೆ ಫೈನ್ ಅಲ್ಲ ಐಪಿಎಲ್‌ನಿಂದಲೇ ಬ್ಯಾನ್ ಆಗಬೇಕಾಗುತ್ತೆ. ಅದ್ರಲ್ಲೂ ವಿರಾಟ್ ಕೊಹ್ಲಿ ಮುಂದೆ ನೋಟ್‌ಬುಕ್ ಸೆಲೆಬ್ರೇಷನ್ ಮಾಡಿದ್ರೆ ಕೊಹ್ಲಿ ಉಗ್ರ ರೂಪವನ್ನ ಮೈದಾನದಲ್ಲೇ ನೋಡಬೇಕಾಗುತ್ತೆ..