BMTC ಬಸ್ನಲ್ಲಿ 6 ರೂ. ಬದಲು 60 ಸಾವಿರ ಪಾವತಿಸಿದ ಪ್ರಯಾಣಿಕ! – ಮುಂದೇನಾಯ್ತು ಗೊತ್ತಾ?

ಡಿಜಿಟಲ್ ಪೇಮೆಂಟ್ ಬಂದ್ಮೇಲೆ ಈಗ ಹೋದಲ್ಲೆಲ್ಲಾ ಫೋನ್ ಪೇ, ಗೂಗಲ್ ಪೇ ಮಾಡುತ್ತಿದ್ದೇವೆ. ಆದ್ರೆ ಫೋನ್ ಪೇ ಮಾಡುವಾಗ ತಪ್ಪಿ ಹೆಚ್ಚು ಹಣ ಪಾವತಿ ಮಾಡಿ ಹಣ ಕಳೆದುಕೊಂಡ ಉದಾಹರಣೆ ಸಾಕಷ್ಟು ಇದೆ. ಇದೀಗ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಬಿಎಂಟಿಸಿ ಪ್ರಯಾಣಿಕನೊಬ್ಬ ಟಿಕೆಟ್ ದರ 6 ರೂಪಾಯಿ ಬದಲು 60 ಸಾವಿರ ಹಣ ಪಾವತಿ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ.ಹರಿಪ್ರಸಾದ್ರನ್ನು ತಳ್ಳಿದ ಮಾರ್ಷಲ್ಸ್! – ಜುಬ್ಬಾ ಹರಿದಿದ್ದು ಬಿಜೆಪಿ ನಾಯಕರಾ?
ಈ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ. ಜ.14ರಂದು ರಾತ್ರಿ ವೇಳೆ ಈ ವ್ಯಕ್ತಿ ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಆ ವ್ಯಕ್ತಿ ಟಿಕೆಟ್ ಖರೀದಿಸಿದ್ದಾರೆ.ಟಿಕೆಟ್ ದರವನ್ನು ಪೋನ್ ಪೇ ಮೂಲಕ ಮಾಡಿದ್ದಾರೆ. ಈ ವೇಳೆ 6 ರೂಪಾಯಿ ಬದಲು 60 ಸಾವಿರ ಪೋನ್ ಪೇ ಮಾಡಿದ್ದಾರೆ. ಬಳಿಕ ಪ್ರಯಾಣಿಕ ಕಂಡಕ್ಟರ್ ಗೆ ಮಾಹಿತಿ ನೀಡಿದ್ದಾರೆ. ಬಸ್ ನಿರ್ವಾಹಕ ಖಾತೆ ಪರಿಶೀಲಿಸಿದಾಗ 62,316 ರೂ ಹಾಕಿರುವುದು ಗೊತ್ತಾಗಿದೆ.
ಬಳಿಕ ಪ್ರಯಾಣಿಕನಿಗೆ ಆ ಹಣವನ್ನ ವಾಪಾಸ್ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಈ ಹಣವನ್ನು ತಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ. ಮೊದಲು ನಿರ್ವಾಹಕ ಈ ಬಗ್ಗೆ ತನ್ನ ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ ಅವರ ನಂಬರ್ ಪಡೆದುಕೊಂಡಿದ್ದಾರೆ. ಡಿಪೋ ಮ್ಯಾನೇಜರ್ ಫೋನ್ ನಂಬರ್ ಕೂಡ ನೀಡಲಾಗಿದೆ. ಅವರು ಪರಿಶೀಲನೆ ನಡೆಸಿದ ನಂತರ ಹಣ ಪಡೆಯಬಹುದು. ಹಣ ಪಡೆಯಲು ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಇನ್ನೂ ಕೂಡ ಹಣ ಪಾವತಿ ಆಗಿಲ್ಲ. ಇವತ್ತು ಅಥವಾ ನಾಳೆಯೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.

ನೋಡಿರಿ

