BMTC ಬಸ್‌ನಲ್ಲಿ 6 ರೂ. ಬದಲು 60 ಸಾವಿರ ಪಾವತಿಸಿದ ಪ್ರಯಾಣಿಕ! – ಮುಂದೇನಾಯ್ತು ಗೊತ್ತಾ?

BMTC ಬಸ್‌ನಲ್ಲಿ 6 ರೂ. ಬದಲು 60 ಸಾವಿರ ಪಾವತಿಸಿದ ಪ್ರಯಾಣಿಕ! – ಮುಂದೇನಾಯ್ತು ಗೊತ್ತಾ?

ಡಿಜಿಟಲ್‌ ಪೇಮೆಂಟ್‌ ಬಂದ್ಮೇಲೆ ಈಗ ಹೋದಲ್ಲೆಲ್ಲಾ ಫೋನ್‌ ಪೇ, ಗೂಗಲ್‌ ಪೇ ಮಾಡುತ್ತಿದ್ದೇವೆ. ಆದ್ರೆ ಫೋನ್​​ ಪೇ ಮಾಡುವಾಗ ತಪ್ಪಿ ಹೆಚ್ಚು ಹಣ ಪಾವತಿ ಮಾಡಿ ಹಣ ಕಳೆದುಕೊಂಡ ಉದಾಹರಣೆ ಸಾಕಷ್ಟು ಇದೆ. ಇದೀಗ ಬೆಂಗಳೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ.  ಬಿಎಂಟಿಸಿ ಪ್ರಯಾಣಿಕನೊಬ್ಬ ಟಿಕೆಟ್‌ ದರ 6 ರೂಪಾಯಿ ಬದಲು 60 ಸಾವಿರ ಹಣ ಪಾವತಿ ಮಾಡಿದ್ದಾರೆ.

ಇದನ್ನೂ ಓದಿ:  ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ.ಹರಿಪ್ರಸಾದ್‌ರನ್ನು ತಳ್ಳಿದ ಮಾರ್ಷಲ್ಸ್!‌ –   ಜುಬ್ಬಾ ಹರಿದಿದ್ದು ಬಿಜೆಪಿ ನಾಯಕರಾ?

ಈ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ. ಜ.14ರಂದು ರಾತ್ರಿ ವೇಳೆ ಈ ವ್ಯಕ್ತಿ ಬನಶಂಕರಿಯಿಂದ ಕದಿರೇನಹಳ್ಳಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಆ ವ್ಯಕ್ತಿ ಟಿಕೆಟ್‌ ಖರೀದಿಸಿದ್ದಾರೆ.ಟಿಕೆಟ್‌ ದರವನ್ನು ಪೋನ್‌ ಪೇ ಮೂಲಕ ಮಾಡಿದ್ದಾರೆ. ಈ ವೇಳೆ 6 ರೂಪಾಯಿ ಬದಲು 60 ಸಾವಿರ ಪೋನ್ ಪೇ ಮಾಡಿದ್ದಾರೆ. ಬಳಿಕ ಪ್ರಯಾಣಿಕ ಕಂಡಕ್ಟರ್ ಗೆ ಮಾಹಿತಿ ನೀಡಿದ್ದಾರೆ. ಬಸ್​​​ ನಿರ್ವಾಹಕ  ಖಾತೆ ಪರಿಶೀಲಿಸಿದಾಗ 62,316 ರೂ ಹಾಕಿರುವುದು ಗೊತ್ತಾಗಿದೆ.

ಬಳಿಕ ಪ್ರಯಾಣಿಕನಿಗೆ ಆ ಹಣವನ್ನ ವಾಪಾಸ್‌ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಈ ಹಣವನ್ನು ತಕ್ಷಣದಲ್ಲಿ ನೀಡಲು ಸಾಧ್ಯವಿಲ್ಲ. ಮೊದಲು ನಿರ್ವಾಹಕ ಈ ಬಗ್ಗೆ ತನ್ನ ಮೇಲಾಧಿಕಾರಿಗಳಿಗೆ ತಿಳಿಸಿ, ನಂತರ ಅವರ ನಂಬರ್​​ ಪಡೆದುಕೊಂಡಿದ್ದಾರೆ. ಡಿಪೋ ಮ್ಯಾನೇಜರ್ ಫೋನ್ ನಂಬರ್​​ ಕೂಡ ನೀಡಲಾಗಿದೆ. ಅವರು ಪರಿಶೀಲನೆ ನಡೆಸಿದ ನಂತರ ಹಣ ಪಡೆಯಬಹುದು. ಹಣ ಪಡೆಯಲು ಡಿಪೋಗೆ ಬರಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಇನ್ನೂ ಕೂಡ ಹಣ ಪಾವತಿ ಆಗಿಲ್ಲ. ಇವತ್ತು ಅಥವಾ ನಾಳೆಯೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಹೇಳಿದ್ದಾರೆ.

Shwetha M