ಪಾಕಿಸ್ತಾನದಲ್ಲಿ ಜನರಿಗೆ ಗಾಯದ ಮೇಲೆ ಮತ್ತೆ ಬರೆ – ಲೀಟರ್‌ಗೆ 262 ರೂಪಾಯಿ ದಾಟಿದ ಡೀಸೆಲ್ ದರ
ದಿವಾಳಿಯಾಗಿರುವ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಮಾಡುತ್ತಿರುವ ಸರ್ಕಸ್ ಒಂದೆರಡಲ್ಲ. ಅದೇನೇ ಕಸರತ್ತು ಮಾಡಿದರೂ ಕೂಡಾ ಪಾಕಿಸ್ತಾನದಲ್ಲಿ ಉದ್ಭವವಾಗಿರುವ ಆರ್ಥಿಕ ಬಿಕ್ಕಟ್ಟು ಸದ್ಯಕ್ಕೆ ಸುಧಾರಿಸುವ ಸ್ಥಿತಿ ಕಾಣುತ್ತಿಲ್ಲ. ಹೀಗಿರುವಾಗ ಅಲ್ಲಿನ ಸರ್ಕಾರ ಜನರಿಗೆ ಮತ್ತೊಂದು ಶಾಕ್ ನೀಡಿದೆ. ಪೆಟ್ರೋಲ್ ಮತ್ತೆ ಡೀಸೆಲ್ ಬೆಲೆ ದಿಢೀರ್ ಅಂತಾ ಏರಿಕೆಯಾಗಿದೆ. ಪಾಕಿಸ್ತಾನದ ಹಣಕಾಸು ಸಚಿವ ಇಶಾಕ್ ದಾರ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 35 ರೂಪಾಯಿ ಏರಿಕೆ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 249.80 ರೂಪಾಯಿಗೆ ಏರಿದೆ. ಹೈಸ್ಪೀಡ್ ಡೀಸೆಲ್ ಬೆಲೆ 262.80ಕ್ಕೆ ಹೆಚ್ಚಳವಾಗಿದೆ. ಸೀಮೆ ಎಣ್ಣೆ ಬೆಲೆ ಕೂಡ ಲೀಟರ್‌ಗೆ 189.83 ರೂಪಾಯಿ ಏರಿಕೆಯಾಗಿದ್ದು, ಸಾದಾ ಡೀಸೆಲ್ ಬೆಲೆ 187 ರೂಪಾಯಿಯಷ್ಟಾಗಿದೆ.
ಇದನ್ನೂ ಓದಿ: ಒಡಿಶಾ ಸಚಿವರನ್ನ ಹತ್ಯೆಗೈದ ASI ಮಾನಸಿಕ ಅಸ್ವಸ್ಥ – ರಿವಾಲ್ವರ್ ನೀಡಿದ್ದರ ಹಿಂದೆ ಹಲವು ಅನುಮಾನ!
ಶನಿವಾರ ರಾತ್ರಿಯಿಂದಲೇ ಪೆಟ್ರೋಲ್ ಡಿಸೇಲ್ ರೇಟ್ ಜಾಸ್ತಿಯಾಗುತ್ತಿದೆ ಎಂಬ ಊಹಾಪೋಹ ಎದ್ದಿದ್ದು, ದೇಶಾದ್ಯಂತ ಜನ ಪೆಟ್ರೋಲ್ ಬಂಕ್ ಗಳಲ್ಲಿ ಸರತಿ ಸಾಲಾಗಿ ನಿಂತಿದ್ದರು. ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ನೋಸ್ಟಾಕ್ ಬೋರ್ಡ್ ಕಂಡುಬರುತ್ತಿದ್ದು, ಕಾಳಸಂತೆಯಲ್ಲೂ ಇಂಧನ ಮಾರಾಟವಾಗುತ್ತಿದೆ. ಇಷ್ಟು ದಿನ ಆಹಾರಕ್ಕಾಗಿ ಮುಗಿಬೀಳುತ್ತಿದ್ದ ಮಂದಿ ಈಗ ಇಂಧನಕ್ಕೂ ಮುಗಿಬೀಳುವಂತಾ ಪರಿಸ್ಥಿತಿ ಪಾಕಿಸ್ತಾನದಲ್ಲಿ ಉದ್ಭವಿಸಿದೆ.