ನೇಪಾಳಕ್ಕೆ 57 ವರ್ಷಗಳ ಹಿಂದೆಯೇ ರಾಮಮಂದಿರ ಉದ್ಘಾಟನೆ ಯಾವಾಗ ಎಂದು ಗೊತ್ತಿತ್ತಾ? – ಏನಿದು ಅಚ್ಚರಿ!

ನೇಪಾಳಕ್ಕೆ 57 ವರ್ಷಗಳ ಹಿಂದೆಯೇ ರಾಮಮಂದಿರ ಉದ್ಘಾಟನೆ ಯಾವಾಗ ಎಂದು ಗೊತ್ತಿತ್ತಾ? – ಏನಿದು ಅಚ್ಚರಿ!

ಎಲ್ಲೆಲ್ಲೂ ಶ್ರೀರಾಮನ ಜಪ ಶುರುವಾಗಿದೆ. ಅಯೋಧ್ಯೆ ರಾಮಮಂದಿರದ ಉದ್ಘಾಟನೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಹೊತ್ತಿನಲ್ಲೇ ರಾಮಮಂದಿಕ್ಕೆ ಸಂಬಂಧಿಸಿದಂತೆ ಫೋಟೋ ಒಂದು ವೈರಲ್‌ ಆಗುತ್ತಿದೆ. ನೇಪಾಳ ಸರ್ಕಾರದ 57 ವರ್ಷದ ಹಿಂದಿನ ಅಂಚೆ ಚೀಟಿ ವೈರಲ್ ಆಗುತ್ತಿದೆ. ಇದರಲ್ಲಿ ರಾಮಮಂದಿರವನ್ನು ಯಾವಾಗ ಸ್ಥಾಪಿಸಲಾಗುವುದು ಅಂತಾ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕೇರಳದ ಪ್ರಸಿದ್ಧ ದೇವಾಲಯಕ್ಕೆ ಭೇಟಿ ನೀಡಿದ ಪ್ರಧಾನಿ – ಖ್ಯಾತನಟ ಸುರೇಶ್ ಗೋಪಿ ಪುತ್ರಿಯ ಮದುವೆಯಲ್ಲೂ ಭಾಗಿ

ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲೇ ನೇಪಾಳ ಸರ್ಕಾರದ 57 ವರ್ಷದ ಹಿಂದಿನ ಅಂಚೆ ಚೀಟಿ ವೈರಲ್ ಆಗುತ್ತಿದೆ. ಶ್ರೀರಾಮ ಮತ್ತು ತಾಯಿ ಸೀತೆಯ ಚಿತ್ರವಿರುವ ಈ ಅಂಚೆಚೀಟಿಯಲ್ಲಿ, ರಾಮಮಂದಿರದ ಪ್ರತಿಷ್ಠಾಪನೆಯ ವರ್ಷವನ್ನು ತೋರಿಸಲಾಗಿದೆ. ಇದರಲ್ಲಿ ರಾಮ ಮಂದಿರವನ್ನು ಯಾವಾಗ ಸ್ಥಾಪಿಸಲಾಗುವುದು ಎಂದು ಉಲ್ಲೇಖಿಸಲಾಗಿದ್ದು, ಎಲ್ಲರಿಗೂ ಆಶ್ಚರ್ಯ ತಂದಿದೆ.

ಏಪ್ರಿಲ್ 18, 1967 ರಂದು ರಾಮನವಮಿಯಂದು ಈ ಅಂಚೆಚೀಟಿ ಬಿಡುಗಡೆಯಾಗಿದ್ದು, ಅದರಲ್ಲಿ ನೀಡಲಾದ ವರ್ಷ ಇದೀಗ ಚರ್ಚೆಯ ವಿಷಯವಾಗಿದೆ. ರಾಮ ಮಂದಿರ ಯಾವಾಗ ಪ್ರತಿಷ್ಠಾಪನೆಯಾಗಲಿದೆ ಎಂಬುದು ನೇಪಾಳಕ್ಕೆ 57 ವರ್ಷಗಳ ಹಿಂದೆ ಗೊತ್ತಿದೆಯೇ ಎಂದು ಜನರು ಕೇಳುತ್ತಿದ್ದಾರೆ. ಈ ಕಾಕತಾಳೀಯಕ್ಕೆ ಕಾರಣವೇನೆಂದು ನೋಡುವುದಾದರೆ ವಿಕ್ರಮ್ ಸಂವತ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡ‌ರ್ ನಡುವಿನ ವ್ಯತ್ಯಾಸದಿಂದಾಗಿ ಇದು ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ನೇಪಾಳವು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ 1967 ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದಾಗ, ವಿಕ್ರಮ್ ಸಂವತ್ ಪ್ರಕಾರ 2024 ವರ್ಷ ನಡೆಯುತ್ತಿದೆ. ಈ ಕಾರಣಕ್ಕಾಗಿ, 1967 ರಲ್ಲಿ ಬಿಡುಗಡೆಯಾದ ಅಂಚೆಚೀಟಿಯಲ್ಲಿ 2024 ಎಂದು ಬರೆಯಲಾಗಿದೆ.

ಈ ಅಂಚೆಚೀಟಿ ಈಗ ಲಕ್ಷೆದ ಅಶೋಕ್ ಕುಮಾರ್ ಅವರ ‘ದಿ ಲಿಟಲ್ ಮ್ಯೂಸಿಯಂ’ ನಲ್ಲಿದೆ. ಇದನ್ನು ಏಪ್ರಿಲ್ 18, 1967 ರಂದು ನೀಡಲಾಯಿತು. ಆ ಸಮಯದಲ್ಲಿ ಇದಕ್ಕೆ 15 ಪೈಸೆ. ಈ ಟಿಕೆಟ್ ಅನ್ನು ಒಬ್ಬ ವ್ಯಕ್ತಿಯಿಂದ ಖರೀದಿಸಿದೆ ಎಂದು ಅಶೋಕ್ ಹೇಳಿದ್ದಾರೆ. ಸದ್ಯ ಈ ಅಂಚೆ ಚೀಟಿಯ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

Shwetha M