ವಿರಾಟ್ ಕೊಹ್ಲಿ ಸೆಂಚುರಿ ಹೊಡೆಯಲು ಅಂಪೈರ್ ಕಾರಣವಾದ್ರಾ ? – ನಿಯಮದ ಪ್ರಕಾರ ಅಂಪೈರ್ ಮಾಡಿದ್ದೇನು?

ವಿರಾಟ್ ಕೊಹ್ಲಿ ಸೆಂಚುರಿ ಹೊಡೆಯಲು ಅಂಪೈರ್ ಕಾರಣವಾದ್ರಾ ? – ನಿಯಮದ ಪ್ರಕಾರ ಅಂಪೈರ್ ಮಾಡಿದ್ದೇನು?

ನಂಬರ್ 48.. ಇನ್ನೆರಡು ಸೆಂಚೂರಿ ಹೊಡೆದ್ರೆ ಲೆಜೆಂಡರಿ ಸಚಿನ್​ ತೆಂಡೂಲ್ಕರ್ ರೆಕಾರ್ಡ್​​ನ್ನ ವಿರಾಟ್ ಕೊಹ್ಲಿ ಬ್ರೇಕ್ ಮಾಡ್ತಾರೆ. ಆ ಎರಡು ಸೆಂಚೂರಿ ಕೂಡ ಈ ವರ್ಲ್ಡ್​ಕಪ್​ನಲ್ಲೇ ಬರೋದು ಗ್ಯಾರಂಟಿ. ವಿಶ್ವಕಪ್​ ಟೂರ್ನಿಯಲ್ಲೇ ಕೊಹ್ಲಿ ಈ ದಾಖಲೆ ಬರೆದ್ರೆ ಅದಕ್ಕಿರೋ ತೂಕವೇ ಬೇರೆಯಾಗಿರುತ್ತೆ. ಟೀಂ ಇಂಡಿಯಾವನ್ನ ಗೆಲ್ಲಿಸೋಕೆ ರನ್ ಮಾಡುತ್ತಲೇ ವಿರಾಟ್​ ಕೊಹ್ಲಿ ಈಗ ತೆಂಡೂಲ್ಕರ್ ಸೆಂಚೂರಿ ರೆಕಾರ್ಡ್​ನ್ನ ಕೂಡ ಚೇಸ್​ ಮಾಡ್ತಿದ್ದಾರೆ.

ಇದನ್ನೂ ಓದಿ:  ಬಾಂಗ್ಲಾದೇಶ ವಿರುದ್ಧ ವಿರಾಟ್ ಶತಕದ ಅಬ್ಬರ – ಅಭಿಮಾನಿಗಳ ಮನಗೆದ್ದಿದ್ದು ಕೊಹ್ಲಿಗೆ ಸಾಥ್ ಕೊಟ್ಟ ಹೆಮ್ಮೆಯ ಕನ್ನಡಿಗ ಕೆ.ಎಲ್ ರಾಹುಲ್

ಬಾಂಗ್ಲಾದೇಶ ವಿರುದ್ಧದ ಮ್ಯಾಚ್​ನಲ್ಲಂತೂ ಕೊಹ್ಲಿ ಸೆಂಚೂರಿ ಬೆನ್ನತ್ತಿದ ರೀತಿ ತುಂಬಾನೆ ಎಂಟರ್​ಟೈನ್ ಆಗಿತ್ತು. ಈ ಮಧ್ಯೆ ಒಂದಷ್ಟು ಮಂದಿ ಕೊಹ್ಲಿ ಸ್ವಾರ್ಥಿ. ಸೆಂಚೂರಿಗೋಸ್ಕರ ಆಡಿದ್ರು. ಸಿಂಗಲ್​ ತೆಗೆಯದೇ ಇದ್ದಿದ್ದು ಸರಿಯಲ್ಲ ಅಂತಾನೂ ಹೇಳ್ತಿದ್ದಾರೆ. ಕೊಹ್ಲಿ ಸೆಂಚೂರಿಗೆ ಅಂಪೈರ್ ಹೆಲ್ಪ್ ಮಾಡಿದ್ರು. ಕೊಹ್ಲಿ ಸೆಂಚೂರಿ ಬಾರಿಸಲಿ ಅಂತಾ ಅಂಪೈರ್ ವೈಡ್ ಕೊಟ್ಟಿಲ್ಲ ಅಂತೆಲ್ಲಾ ಹೇಳಲಾಗ್ತಿದೆ. ​ಆದ್ರೆ ಅಂಪೈರ್​ ವೈಡ್ ಕೊಡದೇ ಇರೋದಕ್ಕೆ ಅಸಲಿ ಬೇರೆಯೇ ಇದೆ.

ಟೀಂ ಇಂಡಿಯಾ ಗೆಲ್ಲೋಕೆ 15 ರನ್​​ಗಳು ಬೇಕಿತ್ತು. ವಿರಾಟ್ ಕೊಹ್ಲಿ ಸೆಂಚೂರಿ ಆಗೋಕೂ 15 ರನ್ ಬೇಕಿತ್ತು.. ಕೊಹ್ಲಿ ಸೆಂಚೂರಿಗೆ ಬೇಕಾಗಿದ್ದ ರನ್ ಮತ್ತು ಭಾರತದ ಗೆಲುವಿಗೆ ಬೇಕಾಗಿದ್ದ ನಂಬರ್​ ಮಧ್ಯೆ ಕೊನೆವರೆಗೂ ಹೆಚ್ಚು ವ್ಯತ್ಯಾಸ ಏನೂ ಇರಲಿಲ್ಲ. ಹೀಗಾಗಿ ವಿರಾಟ್​ ಕೊಹ್ಲಿ ಸೆಂಚೂರಿ ಹೊಡೆಯೋದು ಅಷ್ಟು ಸುಲಭವಾಗಿರಲಿಲ್ಲ.

ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧ ಸೆಂಚೂರಿ ಮಾಡಬೇಕು ಅನ್ನೋ ಪ್ಲ್ಯಾನ್​ನಲ್ಲೇ ಇರಲಿಲ್ಲ. 15 ರನ್ ಬೇಕಿದ್ರೂ, ಶತಕ ಹೊಡಿಬೇಕು ಅಂತಾ ಅಂದುಕೊಂಡೇ ಇರಲಿಲ್ಲ. ಆದ್ರೆ, ಎಲ್ಲರೂ ಕೂಡ ಕೊಹ್ಲಿ ಸೆಂಚೂರಿಗೆ ಇಬ್ಬರು ಕಾರಣ ಅಂತಿದ್ದಾರೆ. ಕೆಎಲ್ ರಾಹುಲ್ ಮತ್ತು ಅಂಪೈರ್ ರಿಚರ್ಡ್. ಕೊಹ್ಲಿ ಸೆಂಚೂರಿಯಾಗೋಕೆ ಕೆಎಲ್​ ರಾಹುಲ್​ ನೆರವು ನೀಡಿದ್ದಾರೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೆ ಇದ್ರಲ್ಲಿ ಅಂಪೈರ್ ಪಾತ್ರ ಏನೂ ಇಲ್ಲ. ಚೇಸಿಂಗ್​​ನಲ್ಲಿ ಭಾರತಕ್ಕೆ ಅತೀ ಹೆಚ್ಚು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿರುವ ದಾಖಲೆ ಕೂಡ ಕೊಹ್ಲಿ ಹೆಸರಲ್ಲೇ ಇದೆ. ಹೀಗಾಗಿ ವಿರಾಟ್ ಕೊಹ್ಲಿ ತಾನು ಸ್ವಾರ್ಥಿ ಅಲ್ಲ ಅನ್ನೋದನ್ನ ಸಾಬೀತುಪಡಿಸಬೇಕಾದ ಅವಶ್ಯಕತೆಯೇ ಇಲ್ಲ.

ಇನ್ನು ಅಂಪೈರ್ ರಿಚರ್ಡ್ ಅವರ ವೈಡ್​ ಡಿಸೀಶನ್​ ಬಗ್ಗೆ ಒಂದಷ್ಟು ಕ್ಲಾರಿಟಿ ನೀಡ್ಲೇಬೇಕು. ಮ್ಯಾಚ್ ಮುಗಿದ ಬಳಿಕ ಸೋಷಿಯಲ್​ ಮೀಡಿಯಾದಲ್ಲಿ ಅಂಪೈರ್ ರಿಚರ್ಡ್ ಫುಲ್​ ಟ್ರೆಂಡಿಂಗ್​ನಲ್ಲಿದ್ರು. ಬಾಂಗ್ಲಾ ಬೌಲರ್​ ವೈಡ್ ಎಸೆದ್ರೂ ವೈಡ್ ನೀಡದೆ ಕೊಹ್ಲಿ ಶತಕಕ್ಕೆ ಕಾರಣವಾದ್ರು. ಕೊಹ್ಲಿ ಸೆಂಚೂರಿ ಹೊಡೆಯಲಿ ಅಂತಾನೆ ಅಂಪೈರ್ ವೈಡ್ ಕೊಟ್ಟಿಲ್ಲ ಅಂತಾ ಎಲ್ಲರೂ ಮಾತನಾಡ್ತಿದ್ರು.. ಕಾಮೆಂಟ್ಸ್​ ಮಾಡ್ತಿದ್ರು..

ಆದ್ರೆ ನಿಮಗೆ ಗೊತ್ತಿರಲಿ.. ಇದು ರಿಯಾಲಿಟಿ ಅಲ್ಲ.. ಬಾಂಗ್ಲಾ ಬೌಲರ್ ಉದ್ದೇಶಪೂರ್ವಕವಾಗಿಯೇ ವೈಡ್ ಎಸೆದ್ರು ಅನ್ನೋ ಕಾರಣಕ್ಕೆ ಅಂಪೈರ್ ವೈಡ್ ಕೊಟ್ಟಿಲ್ಲ.. ಕೊಹ್ಲಿ ಸೆಂಚೂರಿ ಬಾರಿಸಲಿ ಅಂತಾ ವೈಡ್​ ಕೊಟ್ಟಿಲ್ಲ ಅಂತಾ ಯಾರಾದ್ರೂ ಅಂದುಕೊಂಡಿದ್ದರೆ ಅದು ತಪ್ಪು. ಅಂಪೈರ್​ ತೀರ್ಮಾನದಿಂದ ಖುಷಿಯಾಗಿದ್ದು ಹೌದು. ಭಾರತೀಯರೆಲ್ಲರೂ ಅಂಪೈರ್​​ನ್ನ ಹೀರೋ ಮಾಡ್ತಿದ್ದಾರೆ. ಆದರೆ, ಇಲ್ಲಿ ಅಂಪೈರ್ ರಿಚರ್ಡ್​ ಕೊಹ್ಲಿಗೆ ಫೇವರ್ ಆಗಿಯೂ ಇರಲಿಲ್ಲ.. ರೂಲ್ಸ್​ನ್ನ ಕೂಡ ಬ್ರೇಕ್​ ಮಾಡಿಲ್ಲ. ಬಾಲ್ ಲೆಗ್​​ ಸೈಡ್​ಗೆ ಹೋದ್ರೂ ವೈಡ್ ನೀಡದೇ ಇರೋದಕ್ಕೆ ಒಂದು ಪ್ರಮುಖ ಕಾರಣ ಇದೆ. ಕ್ರಿಕೆಟ್ ಕುರಿತ ಎಂಸಿಸಿ ರೂಲ್ಸ್​​ನಲ್ಲಿ ಒಂದಷ್ಟು ಬದಲಾವಣೆಗಳಾಗಿವೆ.

ಬೌಲರ್ ಬಾಲ್​ ಎಸೆಯೋ ಮುನ್ನ ಬ್ಯಾಟ್ಸ್​​ಮನ್​​ ಕ್ರೀಸ್​ನಲ್ಲಿ ಒಂದು ಪೊಸೀಷನ್​ನಲ್ಲಿ ನಿಂತಿರುತ್ತಾರೆ. ಬಾಲ್ ಎಸೆಯುತ್ತಲೇ ಬ್ಯಾಟ್ಸ್​ಮನ್​ ತನ್ನ ಪೊಸೀಷನ್ ಚೇಂಜ್ ಮಾಡಿದಾಗ ಬಾಲ್​ ಜಸ್ಟ್​ ಲೆಗ್​​ಸೈಡ್​ನಿಂದ ಪಾಸ್ ಆದರೂ ಅದು ವೈಡ್ ಆಗುವುದಿಲ್ಲ. ಇಲ್ಲಿ ಕೊಹ್ಲಿ ವಿಚಾರದಲ್ಲೂ ಆಗಿರೋದು ಇದೇ. ಇಲ್ಲಿ ವಿರಾಟ್ ಕೊಹ್ಲಿ ಪೊಸೀಶನ್​ ಚೇಂಜ್​ ಮಾಡಿದ್ರಿಂದಾಗಿ ಅಂಪೈರ್ ವೈಡ್ ಕೊಟ್ಟಿಲ್ಲ ಅಷ್ಟೇ.

Sulekha