ಮಂಜುಗೆ ಹೊಡೆದು ತಪ್ಪು ಮಾಡಿದ್ರಾ ಸೌಂದರ್ಯ? – ಬಿಗ್ಬಾಸ್ ಮೂಲ ನಿಯಮ ಉಲ್ಲಂಘನೆಗೆ ಶಿಕ್ಷೆಯಾಗುತ್ತಾ?

ಬಿಗ್ ಬಾಸ್ ಮನೆಯಲ್ಲಿ ಕಿರಣ್ ಶಾಸ್ತ್ರಿ ಮತ್ತು ಮಹಾಕವಿ ಮಂಜು ನಾಲಗೆಗೆ ಲಗಾಮಿಲ್ಲ. ಮತ್ತೊಂದೆಡೆ ಕಿತ್ತಾಟವೂ ಕೂಡಾ ನಡೆದಿದೆ. ಟಾಸ್ಕ್ ವೇಳೆ ಮಂಜು ಹಾಗೂ ಸೌಂದರ್ಯಾ ನಡುವೆ ತಳ್ಳಾಟ, ನೂಕಾಟ ನಡೆದಿದ್ದಲ್ಲದೇ, ಹೊಡೆದಾಟಕ್ಕೂ ಹೋಗಿದೆ.
ಇದನ್ನೂ ಓದಿ:ಗಗನ್ ಮತ್ತು ಕಾವ್ಯಾ ಗೌಡ ಜಟಾಪಟಿ – ತಾಂಡವ್ ಸ್ನೇಹಕ್ಕಾಗಿ ಗಗನ್ ತಪ್ಪು ಮಾಡಿದ್ರಾ?
ಬಿಗ್ ಬಾಸ್ ಮನೆಯಲ್ಲಿ ಈ ವಾರ ನೀಡಿದ ಟಾಸ್ಕ್ನಲ್ಲಿ ಸ್ಪರ್ಧಿಗಳು ತಮ್ಮ ಬಳಿ ಇರುವ ವಸ್ತುಗಳನ್ನು ಪ್ರತಿಸ್ಪರ್ಧಿಗಳಿಂದ ಕಾಪಾಡಿಕೊಳ್ಳಬೇಕು. ವಸ್ತುಗಳನ್ನು ಕಸಿದುಕೊಳ್ಳಲು ಇತರರು ಪ್ರಯತ್ನಿಸಿದಾಗ ಅವುಗಳನ್ನು ಉಳಿಸಿಕೊಳ್ಳಬೇಕು. ಟಾಸ್ಕ್ ಆರಂಭವಾಗುತ್ತಿದ್ದಂತೆ ಧನುಷ್ ಸೌಂದರ್ಯ ಶೆಟ್ಟಿ ವಸ್ತುಗಳನ್ನು ಕಸಿದುಕೊಳ್ಳಲು ಮುಂದಾಗಿದ್ದಾರೆ. ಆದರೆ ಸೌಂದರ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ನಂತರ ಮಂಜು ಬಂದು ಸೌಂದರ್ಯ ಬಳಿಯಿರುವ ವಸ್ತುಗಳನ್ನು ಕಸಿದುಕೊಳ್ಳುತ್ತಾರೆ. ಆಗ ಸೌಂದರ್ಯ ತನ್ನ ವಸ್ತುವನ್ನು ಕಾಪಾಡಿಕೊಳ್ಳುವ ಭರದಲ್ಲಿ ಮಂಜುಗೆ ಹೊಡೆಯುತ್ತಾರೆ. ಮಂಜು ಹಾಗೂ ಸೌಂದರ್ಯಾ ನಡುವೆ ಕಿತ್ತಾಟ ಜೋರಾಗಿಯೇ ನಡೆಯುತ್ತದೆ. ಸೌಂದರ್ಯಾ ಅವರು ಕೋಪ ತಾಳಲಾರದೆ ಮಂಜುನ ತಳ್ಳಿದ್ದಾರೆ. ಇದರಿಂದ ಸಿಟ್ಟಾದ ಮಂಜು, ‘ಸೌಂದರ್ಯಾ ಅವರು ನನಗೆ ಹೊಡೆದಿದ್ದಾರೆ’ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.
ನಂತರ ಮಂಜು ಸಿಟ್ಟನ್ನು ತಡೆಯಲಾರದೇ ಬಾಯಿಗೆ ಬಂದಂಗೆ ಮಾತನಾಡುತ್ತಲೇ ಇರುತ್ತಾರೆ. ಈ ವೇಳೆ ಮಾತು ಮಿತಿಮೀರಿ ಆಡುತ್ತಾರೆ. ಆಗ ಬಿಗ್ ಬಾಸ್ ಮಂಜು ಅವರನ್ನು ಕನ್ಫೆಷನ್ ರೂಮ್ಗೆ ಕರೆಯುತ್ತಾರೆ. ಮಂಜು ಉದ್ವೇಗ, ಸಿಟ್ಟನ್ನು ಕಡಿಮೆ ಮಾಡುವ ಪ್ರಯತ್ನವೂ ನಡೆಯುತ್ತದೆ. ಬಿಗ್ಬಾಸ್ನ ಮೂಲ ನಿಯಮ ಎಂದರೆ ಯಾರೊಬ್ಬರೂ ಯಾರ ಮೇಲೆಯೂ ಹಲ್ಲೆ ನಡೆಸುವಂತಿ್ಲ್ಲ. ಹಾಗೆ ಹೊಡೆದರೆ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ. ಈ ರೀತಿ ಹೊಡೆದು ದೊಡ್ಮನೆಯಿಂದ ಹೊರ ಹೋದವರು ಅನೇಕರಿದ್ದಾರೆ. ಆದರೆ, ಸೌಂದರ್ಯಾ ವಿಷಯದಲ್ಲಿ ಬಿಗ್ಬಾಸ್ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಅನ್ನೋ ಕುತೂಹಲ ಗರಿಗೆದರಿದೆ.

ನೋಡಿರಿ

