ಪ್ರೀತಮ್ ದತ್ತು ತಗೊಂಡ್ರಾ ಶಿವಣ್ಣ? – DKD ಪೋರ ದೊಡ್ಮನೆ ಮಗ ಆಗಿದ್ಹೇಗೆ?

ಪ್ರೀತಮ್.. ಡಿಕೆಡಿ ಶೋ ಮ್ಯಾಜಿಕಲ್ ಡ್ಯಾನ್ಸರ್.. ಎನರ್ಜಿ ಕಿಂಗ್ ಅಂತಾನೇ ಹೇಳ್ಬೋದು. ಈತನ ವಯಸ್ಸಿಗೂ ಮೀರಿದ ಪ್ರತಿಭೆಗೆ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ಅದ್ರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರಿಗಂತೂ ಈತನೆಂದ್ರೆ ಪಂಚಪ್ರಾಣ. ಈತನ ಡ್ಯಾನ್ಸ್ ಶೋ ಯಾವತ್ತೂ ಮಿಸ್ ಮಾಡಿಕೊಳ್ಳಲ್ಲ. ಎಲ್ಲಿ ಹೋದ್ರೂ ಕರ್ಕೊಂಡು ಹೋಗ್ತಾರೆ. ಇದೀಗ ಶಿವಣ್ಣ ಹಾಗೂ ಗೀತಕ್ಕ ಪ್ರೀತಮ್‌ನ ದತ್ತು ತೆಗೆದುಕೊಂಡ್ರಾ ಅಂತ ಫ್ಯಾನ್ಸ್ ಕೇಳ್ತಿದ್ದಾರೆ.
ಇದನ್ನೂ ಓದಿ: ಬಂಗಾರದ ಬೆಲೆ ಮತ್ತೆ ಕುಸಿತ – ಬೆಳ್ಳಿ ರೇಟ್ ಕೂಡಾ ಕಡಿಮೆ – ಚಿನ್ನ ಕೊಳ್ಳುವವರಿಗೆ ಒಳ್ಳೇ ಕಾಲ..!
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ 7 ವರ್ಷದ ಪೋರ ಪ್ರೀತಮ್ ಸಖತ್ ಹೈಲೈಟ್.. ಆತನ ಡ್ಯಾನ್ಸ್ ನೋಡಲೆಂದೇ ಶೋ ನೋಡುವವರು ಅನೇಕರಿದ್ದಾರೆ. ಆತನ ಅನ್‌ಲಿಮಿಟೆಡ್ ಎನರ್ಜಿ, ಡ್ಯಾನ್ಸ್ ಪರ್ಫಾಮೆನ್ಸ್, ಮುದ್ದು ಮುದ್ದಾದ ಮಾತಿಗೆ ವೀಕ್ಷಕರು ಕಳೆದು ಹೋಗಿದ್ದಾರೆ. ಇನ್ನು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಜೊತೆಗಿನ ಪ್ರೀತಮ್ ಬಾಂಧವ್ಯದ ಬಗ್ಗೆ ನಾವು ಹೇಳಬೇಕಂತಿಲ್ಲ.. ಪ್ರೀತಮ್ ಜೊತೆ ಶಿವಣ್ಣ ಮಗುವಾಗಿ ಬಿಡ್ತಾರೆ.. ಆತನ ಜೊತೆ ಆಟವಾಡುತ್ತಾ ಕಾಲ ಕಳೀತಾರೆ.. ಅಷ್ಟೇ ಅಲ್ಲ ಶಿವಣ್ಣ ಹೋದಲೆಲ್ಲಾ ಪ್ರೀತಮ್‌ನ ಕರ್ಕೊಂಡು ಹೋಗ್ತಿದ್ದಾರೆ. ಇದೀಗ ಶಿವಣ್ಣ ಫ್ಯಾನ್ಸ್ ಪ್ರೀತಮ್‌ನ ದತ್ತು ತಗೊಂಡ್ರಾ ಅಂತ ಪ್ರಶ್ನೆ ಮಾಡ್ತಿದ್ದಾರೆ.
ಗದಗ ಮೂಲಕ ಪ್ರೀತಮ್ ಡಿಕೆಡಿ ಬಂದ್ಮೇಲೆ ಶಿವಣ್ಣ ಹಾಗೂ ಗೀತಕ್ಕನ ಫೇವರಿಟ್ ಆಗ್ಬಿಟ್ಟಿದ್ದಾನೆ. ಡಿಕೆಡಿ ಶೂಟಿಂಗ್‌ನಲ್ಲೂ ಪ್ರೀತಮ್ ಡ್ಯಾನ್ಸ್ ನೋಡೋದನ್ನ ಒಂದು ದಿನಾನೂ ಮಿಸ್ ಮಾಡಲ್ಲ ಶಿವಣ್ಣ, ಗೀತಕ್ಕ. ಮನೆಗೆ ಹೋಗುವ ತನಕವೂ ಅವನ ಜೊತೆಯೇ ಕಾಲ ಕಳೀತಾರೆ. ಹೀಗಾಗೇ ಶೋ ನಲ್ಲೂ ಶಿವಣ್ಣ ದತ್ತು ಪುತ್ರ ಪ್ರೀತಮ್ ಅಂತ ಕರೀತಾರೆ. ಅಷ್ಟೇ ಅಲ್ಲ ಮೊನ್ನೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದಂದೂ ಶಿವಣ್ಣ, ಗೀತಕ್ಕ ಪ್ರೀತಮ್‌ನ ಕರ್ಕೊಂಡು ಬಂದಿದ್ರು. ಅಪ್ಪು ಸಮಾಧಿಗೆ ಪೂಜೆ ಮಾಡಿ, ಬಳಿಕ ಹೂವು ಹಾಕಿದ್ರು. ಆಗಲೂ ಪ್ರೀತಮ್ ಜೊತೆಗಿದ್ದ. ಈ ಬೆನ್ನಲ್ಲೇ ಶಿವಣ್ಣ ಪ್ರೀತಮ್ ದತ್ತು ತೆಗೆದುಕೊಂಡಿದ್ದಾರೆ ಎಂದು ಕೆಲವರು ಹೇಳಿದ್ರೆ, ಇನ್ನೂ ಕೆಲವರು ಈತನನ್ನು ನೀವೇ ನೋಡಿಕೊಳ್ಳಿ. ದತ್ತು ತೆಗೆದುಕೊಳ್ಳಿ ಅಂತ ಫ್ಯಾನ್ಸ್ ಹೇಳಿದ್ದಾರೆ . ಇದೀಗ ಪ್ರೀತಮ್ ಬಗ್ಗೆ ಶಿವಣ್ಣ ಮನಬಿಚ್ಚಿ ಮಾತನಾಡಿದ್ದಾರೆ.
ಡಿಕೆಡಿ ಶೋನಲ್ಲಿ ಶಿವಣ್ಣ ಪ್ರೀತಮ್ ನಡುವಿನ ಬಾಂಧವ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಮಗುವಿನ ಬಳಿ ಒಂದು ರೀತಿಯ ಶಕ್ತಿ ಇದೆ. ಗೀತಕ್ಕನಿಗೂ ಈತನಂದ್ರೆ ತುಂಬಾ ಇಷ್ಟ. ಅದೇನು ಬಾಂಧವ್ಯ ಅಂತ ಗೊತ್ತಿಲ್ಲ. ಮನೆಯಲ್ಲೂ ಈತನ ಬಗ್ಗೆಯೇ ಮಾತು.. ಶೋ ಮುಗಿದ ಮೇಲೆ ಪ್ರೀತಮ್ ಸಿಗಲ್ಲ ಅಂತ ಗೀತಾ ಅವರು ಬೇಜಾರು ಮಾಡಿಕೊಂಡಿದ್ರು. ಆಗ ನಾನು ಹೇಳಿದೆ. ಪ್ರೀತಮ್ ಸಿಗಲ್ಲ ಅಂತ ಯಾಕೆ ಯೋಚನೆ ಮಾಡ್ತೀರಾ.. ಆತನನ್ನ ನೋಡ್ಬೇಕು ಅಂದಾಗ ಮನೆಗೆ ಕರೆಸಿಕೊಂಡ್ರೆ ಆಯ್ತು. ಪ್ರತಿ ವಾರ ಮನೆಗೆ ಬರ್ಲಿ.. ಎಷ್ಟು ದಿನ ಬೇಕಾದ್ರೂ ಇರ್ಲಿ.. ಅವನಂದ್ರೆ ನನಗೆ ತುಂಬಾ ಇಷ್ಟ.. ಅವನು ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಅಂತಾ ಹೇಳಿದ್ದಾರೆ.
ಅಂದ್ಹಾಗೆ ಶಿವಣ್ಣ ಅವರದ್ದು ಸರಳ ವ್ಯಕ್ತಿತ್ವ.. ದೊಡ್ಮನೆ ಕುಡಿಯಾದರೂ ಒಂಚೂರು ಹಮ್ಮು ಬಿಮ್ಮು ಇಲ್ಲ. ಅವರನ್ನ ವೈಯಕ್ತಿಕವಾಗಿ ಬಲ್ಲವರಿಗಷ್ಟೇ ಅಲ್ಲ, ಪ್ರತಿ ಅಭಿಮಾನಿಗೂ ಅವರ ಸರಳತೆ ಬಗ್ಗೆ ಗೊತ್ತಿದೆ. ಬದುಕಿನ ಉದ್ದಕ್ಕೂ ಅವರು ನಡೆದುಬಂದ ದಾರಿ ಯುವಜನೆತೆಗೆ ಸ್ಪೂರ್ತಿ. ಗಿಲ್ಲಿ ಅಂದ್ರೂ ಶಿವಣ್ಣಗೆ ಸಿಕ್ಕಾಪಟ್ಟೆ ಇಷ್ಟ. ಪ್ರತಿ ಹೆಜ್ಜೆಯಲ್ಲೂ ಗಿಲ್ಲಿನಟನಿಗೆ ಸಪೋರ್ಟ್ ಮಾಡ್ತಿದ್ದಾರೆ. ಇದೀಗ ಪ್ರೀತಮ್ ಅಂತೂ ಮನೆಮಗ ಆಗಿದ್ದಾನೆ. ಈ ಬಾಲ ಪ್ರತಿಭೆಯನ್ನ ಎನ್ಕರೇಜ್ ಮಾಡ್ತಿರುವ ಶಿವರಾಜ್‌ಕುಮಾರ್ ಅವರ ಸರಳತೆಗೆ ಫ್ಯಾನ್ಸ್ ಸೆಲ್ಯೂಟ್ ಹೇಳ್ತಿದ್ದಾರೆ.

ನೋಡಿರಿ

