ನ್ಯೂಯಾರ್ಕ್ ಗೆ ಹೋಗಿದ್ಯಾಕೆ ಐಶ್ವರ್ಯ ರೈ – ಸಲ್ಲು, ಐಶ್ ಪ್ರೀತಿ ವಿಚಾರ ಈಗ ಯಾಕೆ?
ಬ್ರೇಕಪ್‌ಗೆ ಇದೇ ಕಾರಣ ಆಗಿತ್ತಾ?

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಡಿವೋರ್ಸ್ ವಿಚಾರ ಬಿಟೌನ್‌ನಲ್ಲಿ ಭಾರಿ ಚರ್ಚೆಯಾಗುತ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಈ ವಿಚಾರಕ್ಕೆ ಪುಷ್ಠಿ ನೀಡುವಂತಹ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ. ಹಬ್ಬುತ್ತಿರುವ ವದಂತಿ ಬಗ್ಗೆ ಈ ದಂಪತಿ ಒಂಚೂರು ತಲೆಕೆಡಿಸಿಕೊಂಡಿಲ್ಲ.. ತಾವಾಯ್ತು.. ತಮ್ಮ ಕೆಲಸ ಆಯ್ತು ಅಂತಾ ಅವರ ಪಾಡಿಗೆ ಅವರು ಇದ್ದಾರೆ.. ಇದೀಗ ಐಶ್ ವಿದೇಶಕ್ಕೂ ಹೋಗಿ ಬಂದಿದ್ದಾರೆ. ಇದ್ರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.. ಈ ಬೆನ್ನಲ್ಲೇ ಐಶ್ವರ್ಯ ಹಾಗೂ ನಟ ಸಲ್ಮಾನ್ ಖಾನ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಐಶ್ವರ್ಯ ರೈ ಬೇರೆಯಾಗಲು ಇದೊಂದು ಕಾರಣ ಆಯ್ತಾ ಅನ್ನೋ ವಿಚಾರ ಚರ್ಚೆ ಆಗ್ತಾ ಇದೆ. ಅಷ್ಟಕ್ಕೂ ಐಶ್ ಹಾಗೂ ಸಲ್ಲು ಪ್ರೀತಿ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು ಯಾಕೆ? ಬ್ರೇಕ್ ಅಪ್ ಆಗಲು ಕಾರಣ ಏನು? ಐಶ್ ಹೋಗಿದ್ದಾದ್ರೂ ಎಲ್ಲಿಗೆ ಅನ್ನೋದ್ರ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕಂಚಿನ ಪದಕ ಗೆದ್ದ ರೈಲ್ವೆ ಕಲೆಕ್ಟರ್ – ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಸ್ಪಪ್ನಿಲ್
ಬಚ್ಚನ್ ಫ್ಯಾಮಿಲಿಯಲ್ಲಿ ಸದಾ ಸುದ್ದಿಯಲ್ಲಿರುತ್ತೆ.. ಐಶ್ವರ್ಯ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಬಿದ್ದಿಗೆ ಅಂತಾ ಹೇಳಲಾಗುತ್ತಿದೆ. ಈ ಗಾಸಿಪ್‌ಗಳ ಮಧ್ಯೆ ಐಶ್ ವಿದೇಶಕ್ಕೆ ಹೋಗಿದ್ದಾರೆ. ಬಚ್ಚನ್ ಕುಟುಂಬದೊಂದಿಗಿನ ಜಗಳದ ವರದಿಗಳ ನಡುವೆ, ಐಶ್ವರ್ಯಾ ನ್ಯೂಯಾರ್ಕ್ ಗೆ ಹೋಗಿ ಬಂದಿದ್ದಾರೆ. ಮಗಳ ಜೊತೆ ವೆಕೇಷನ್ ಎಂಜಾಯ್ ಮಾಡಿ ಬಂದಿದ್ದಾರೆ. ಇದ್ರ ಫೋಟೋಗಳು ವೈರಲ್ ಆಗಿದೆ.
ಐಶ್ ಹಾಗೂ ಅಭಿ ದಾಂಪತ್ಯದಲ್ಲಿ ಬಿರುಕು ಬಿದ್ದಿಗೆ ಎಂಬ ಗಾಸಿಪ್ ಹಬ್ಬುತ್ತಿದ್ದಂತೆ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಪ್ರೀತಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಪ್ರೇಮಕತೆ ತಿಳಿಯದ ಬಾಲಿವುಡ್ ಸಿನಿಮಾ ಪ್ರೇಮಿಯಿಲ್ಲ. ಕ್ಯೂಟ್ ಕಪಲ್ ಅಂತಾನೇ ಫೇಮಸ್ ಆಗಿದ್ರು.. ಸಂಬಂಧದಲ್ಲಿ ಎಲ್ಲವೂ ಸರಿ ಹೋಗಿದ್ದರೆ, ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಮದುವೆ ಆಗಿ ಸಂಸಾರ ಕಟ್ಟಿಕೊಂಡಿರುತ್ತಿದ್ದರು. ಆದರೆ, ಸಲ್ಮಾನ್ ಖಾನ್, ಐಶ್ವರ್ಯಾ ರೈ ನಡುವಿನ ಸಂಬಂಧದಲ್ಲಿ ದೊಡ್ಡ ಬಿರುಕು ಬಿಟ್ಟಿತ್ತು. ಇಡೀ ಪ್ರಪಂಚಕ್ಕೆ ಗೊತ್ತಾಗುವಂತೆ ಈ ಜೋಡಿ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದು ಕೂಡ ಅಷ್ಟೇ ವಿಪರ್ಯಾಸ.
ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಸಂಜಯ್ ಲೀಲಾ ಬನ್ಸಾಲಿ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 1999ರಲ್ಲಿ ತೆರೆಕಂಡಿದ್ದ ‘ಹಮ್ ದಿಲ್ ದೇ ಚುಕೆ ಸನಮ್’ ಸಿನಿಮಾದ ಚಿತ್ರೀಕರಣದ ವೇಳೆ ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಮಧ್ಯೆ ಪ್ರೀತಿ ಹುಟ್ಟಿತ್ತು. ಇಲ್ಲಿಂದ ಒಂದಿಷ್ಟು ದಿನ ಡೇಟಿಂಗ್ ಮಾಡುತ್ತಿದ್ದ ಜೋಡಿ 2001ರಲ್ಲಿ ದೂರ ಆಯ್ತು. ಆ ಬಳಿಕ ಐಶ್ವರ್ಯಾ ರೈ ಹೆಸರು ಮತ್ತೊಬ್ಬ ಬಾಲಿವುಡ್ ನಟ ವಿವೇಕ್ ಓಬೆರಾಯ್ ಜೊತೆ ತಳುಕು ಹಾಕಿಕೊಂಡಿತ್ತು. ಈ ವಿಚಾರ ಬಾಲಿವುಡ್ ಅಂಗಳದಲ್ಲಿ ಭಾರಿ ಸದ್ದು ಮಾಡಿತು.. ಸಾಕಷ್ಟು ಗಾಸಿಪ್ ಗಳು ಹರಿದಾಡಲು ಶುರು ಆಯ್ತು.. ಬಳಿಕ ಐಶ್ ತಮ್ಮ ಸಂಬಂಧ ಮುರಿದು ಬೀಳುವುದಕ್ಕೆ ಏನು ಕಾರಣ ಅನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಸಲ್ಮಾನ್ ಖಾನ್ ಮಧ್ಯಪಾನ ಮಾಡಿದ ಬಳಿಕ ಅವರ ವರ್ತನೆಯಿಂದ ಬೇಸತ್ತು ಬ್ರೇಕಪ್ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದರು. ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಮೌಖಿಕವಾಗಿ ಹಿಂಸೆ ನೀಡಿ, ಅವಮಾನ ಮಾಡುತ್ತಿದ್ದರೆಂದು ಹೇಳಿಕೊಂಡಿದ್ದರು.
ಈ ಜೋಡಿ ಬ್ರೇಕಪ್ ವಿಚಾರದ ಬಗ್ಗೆ ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಕಿಡಿ ಕಾರಿದ್ದರು. ಐಶ್ವರ್ಯಾ ರೈಗೆ ತಿರುಗೇಟು ಕೂಡ ಕೊಟ್ಟಿದ್ದರು. ಮಾಧ್ಯಮವೊಂದರಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧದ ಬಗ್ಗೆ ಓಪನ್ ಆಗಿ ಮಾತಾಡಿದ್ದರು. ಐಶ್ವರ್ಯಾ ರೈ ತಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು,. ಆ ವೇಳೆ ಅವರನ್ನು ತಮ್ಮ ಕುಟುಂಬದಂತೆ ನೋಡಿಕೊಂಡಿದ್ದೇವೆ ಎಂದಿದ್ದಾರೆ. ಆದರೆ, ಸಲ್ಮಾನ್ ಖಾನ್‌ಗೆ ಐಶ್ವರ್ಯಾ ರೈ ಅಭದ್ರತೆ ಆಗುವಂತೆ ನಡೆದುಕೊಂಡಿದ್ದರು. ಎಲ್ಲಿಯೂ ಓಪನ್ ಆಗಿ ತಮ್ಮ ನಡುವಿನ ಸಂಬಂಧದ ಬಗ್ಗೆ ಹೇಳಿಕೊಳ್ಳಲಿಲ್ಲ ಎಂದು ಸಲ್ಮಾನ್ ಖಾನ್ ಸಹೋದರ ಸೊಹೇಲ್ ಖಾನ್ ಹೇಳಿಕೊಂಡಿದ್ದರು. ಇದೇ ಸಂದರ್ಶನದಲ್ಲಿ ಸಲ್ಮಾನ್ ಖಾನ್‌ರಿಂದ ಐಶ್ವರ್ಯಾ ರೈ ಬೇರೆಯಾದ ಮೇಲೂ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದರು. ಅದ್ರೆ ಇನ್ನೊಂದು ಕಡೆ ವಿವೇಕ್ ಓಬೆರಾಯ್ ಜೊತೆನೂ ಅಫೇರ್ ಇಟ್ಟುಕೊಂಡಿದ್ದಾಗಿ ಹೇಳಿಕೊಂಡಿದ್ದರು. ಸೊಹೇಲ್ ಖಾನ್ ಹೇಳಿಕೆ ಭಾರಿ ವಿವಾದ ಹುಟ್ಟು ಹಾಕಿತ್ತು.. ಸಲ್ಲು ಐಶ್ ದೂರ ಆಗಲು ಸೊಹೇಲ್ ಖಾನ್ ಕಾರಣ ಆದ್ರಾ ಅನ್ನೋ ಚರ್ಚೆ ಕೂಡ ಶುರುವಾಗಿತ್ತು.. ಸಲ್ಮಾನ್ ಖಾನ್ ಜೊತೆ ಬ್ರೇಕ್ ಆದ 7 ವರ್ಷಗಳ ಬಳಿಕ ಅಂದ್ರೆ 2007 ರಲ್ಲಿ ಅಭಿಷೇಕ್ ಹಾಗೂ ಐಶ್ವರ್ಯ ಮದುವೆ ಆದ್ರು.. ಇದೀಗ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ವಿಚ್ಛೇದನದ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಸೋಹೆಲ್ ಖಾನ್ ಹೇಳಿಕೆ ಸದ್ದು ಮಾಡುತ್ತಿದೆ.