ಗಿಲ್ಲಿ ನಾಮಿನೇಟ್ ಮಾಡಿ ಮತ್ತೆ ತಪ್ಪು ಮಾಡಿದ್ರಾ ರಕ್ಷಿತಾ ಶೆಟ್ಟಿ? – ಜಾನ್ವಿ ಮಾತು ನಂಬಿ ದಾರಿ ತಪ್ಪಿದ್ರಾ?
ರಘು ವಿಚಾರದಲ್ಲಿ ಎಡವಿದ ರಕ್ಷಿತಾ ಬುದ್ದಿ ಕಲಿತಿಲ್ಲ - ಗಿಲ್ಲಿ ವಿಚಾರದಲ್ಲಿ ಮತ್ತೆ ಎಡವಿದ ರಕ್ಷಿತಾ..!

ಹೇಳಿದ್ದು ಸುಳ್ಳಾಗಬಹುದು. ಕೇಳಿದ್ದು ಸುಳ್ಳಾಗಬಹುದು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು. ಈ ಮಾತು ಈ ವಾರ ರಕ್ಷಿತಾ ಶೆಟ್ಟಿಗೆ ಸರಿಯಾಗಿಯೇ ಅನ್ವಯಿಸುತ್ತದೆ. ರಕ್ಷಿತಾಗೆ ಪ್ರತಿ ಬಾರಿ ಗಿಲ್ಲಿಯೇ ಜೊತೆಯಲ್ಲಿ ನಿಂತಿದ್ದು. ಆದರೆ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಜಾನ್ವಿ ಮಾಡಿರೋ ಆರೋಪವನ್ನೇ ಇಟ್ಟುಕೊಂಡು ರಕ್ಷಿತಾ ಗಿಲ್ಲಿಯನ್ನ ನಾಮಿನೇಟ್ ಮಾಡಿದ್ದಾಳೆ. ಇದು ಗಿಲ್ಲಿಗೆ ಬೇಸರ ತಂದಿದೆ. ವಂಶದ ಕುಡಿಯೇ ನನ್ನನ್ನು ನಂಬಿಲ್ಲ ಎಂದು ಬೇಸರ ಹೊರಹಾಕಿದ್ದಾರೆ ಗಿಲ್ಲಿ.
ಇದನ್ನೂ ಓದಿ:ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ವಂಶದ ಕುಡಿ! – ಅಶ್ವಿನಿ ಡಮ್ಮಿ, ಫೇಕ್ ಎಂದು ಅಬ್ಬರಿಸಿದ ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಗಿಲ್ಲಿಯನ್ನು ನಾಮಿನೇಟ್ ಮಾಡಿದ್ದಾರೆ. ಜಾನ್ವಿ ಅವರ ಮಾತಿಗೆ ಟ್ರ್ಯಾಪ್ ಆದ ರಕ್ಷಿತಾ, ಗಿಲ್ಲಿ ಆ್ಯಂಕರ್ಗಳಿಗೆ ಅವಮಾನ ಮಾಡಿದ್ದಾರೆ ಎಂದು ತಪ್ಪಾಗಿ ಭಾವಿಸಿದರು. ಆದರೆ, ಗಿಲ್ಲಿ ಇದನ್ನು ನಿರಾಕರಿಸಿದ್ದಾರೆ. ಗಿಲ್ಲಿ ಎಲ್ಲೂ ಕೂಡಾ ಯಾರ ವೃತ್ತಿ ಬಗ್ಗೆ ಇಲ್ಲಿ ಅವಹೇಳನ ಮಾಡಿರಲಿಲ್ಲ. ಸವಿರುಚಿ ಕಾರ್ಯಕ್ರಮದ ನಿರೂಪಣೆ ಬೇಡ. ಅಡುಗೆ ಬಗ್ಗೆ ನಿರೂಪಣೆ ಏನು ಮಾಡುವುದು, ಬೇರೆ ಕಾರ್ಯಕ್ರಮದ ನಿರೂಪಣೆ ಮಾಡುತ್ತೇನೆ ಎಂದು ಗಿಲ್ಲಿ ಹೇಳಿದ್ದರು. ಇದೇ ಮಾತನ್ನು ಸಿಕ್ಕಿದ್ದೇ ಚಾನ್ಸ್ ಎಂದು ಜಾನ್ವಿ ಗಿಲ್ಲಿ ವಿರುದ್ಧ ಕುತಂತ್ರ ಮಾಡಿದ್ದರು.
ಜಾನ್ವಿ ಸಿಕ್ಕಿದ್ದೇ ಅವಕಾಶ ಎಂದು, ‘ಒಂದು ಶೋನ ಗಿಲ್ಲಿ ಕೆಳಗೆ ಹಾಕಿ ಮಾತಾಡ್ತಾನೆ’ ಎಂದು ಬಿಂಬಿಸಲು ಬಂದರು. ‘ನಿನಗೇನು ಮೊದಲಿಗೇ ಅನುಬಂಧ ಅವಾರ್ಡ್ಸ್ನಲ್ಲಿ ಅವಕಾಶ ಕೊಡಬೇಕೆ’ ಎಂದು ಜಾನ್ವಿ ಪ್ರಶ್ನೆ ಮಾಡಿದರು. ನಂತರ ನಾಮಿನೇಷನ್ಗೆ ಇದೇ ಕಾರಣ ಕೊಟ್ಟರು. ಇದನ್ನು ರಕ್ಷಿತಾ ಯಾವ ರೀತಿ ಅರ್ಥ ಮಾಡಿಕೊಂಡರೋ ಗೊತ್ತಿಲ್ಲ, ಗಿಲ್ಲಿಯನ್ನು ನಾಮಿನೇಟ್ ಮಾಡಿದರು. ‘ಗಿಲ್ಲಿ ಅವರು ಆ್ಯಂಕರ್ಗಳಿಗೆ ಅವಮಾನ ಮಾಡಿದ್ದಾರೆ ಅನ್ನೋದು ಜಾನ್ವಿ ಹೇಳಿದ ಮಾತಿನಿಂದ ಗೊತ್ತಾಯ್ತು. ಹೀಗಾಗಿ, ನಾನು ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದರು. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ. ಗಿಲ್ಲಿಗೂ ಇದನ್ನು ಅರಗಿಸಿಕೊಳ್ಳೊದು ಕಷ್ಟ ಆಯಿತು ನಾನು ಜಾನ್ವಿ ಕೆಟ್ಟ ಆ್ಯಂಕರ್ ಎಂದು ಹೇಳಿಲ್ಲ. ಜಾನ್ವಿ ಹೇಳಿದಳು ಎಂದು ನೀನು ಕೇಳಿಬಿಟ್ಟೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ ಎಂದು ಸುದೀಪ್ ಸರ್ ಹೇಳಿದ್ದರು. ಅದನ್ನು ನೀನು ಮಾಡಬೇಕಿತ್ತು’ ಎಂದು ಗಿಲ್ಲಿ ಹೇಳಿದ್ದಾರೆ. ಜೊತೆಯಲ್ಲೇ ಇದ್ದು, ಗಿಲ್ಲಿಯನ್ನೇ ನಾಮಿನೇಟ್ ಮಾಡಿದ್ದು ತಪ್ಪಲ್ಲ. ಆದರೆ, ರಘು ವಿಚಾರದಲ್ಲೂ ರಕ್ಷಿತಾ ಇದೇ ತಪ್ಪು ಮಾಡಿದ್ದರು. ಈಗ ಗಿಲ್ಲಿ ವಿಚಾರದಲ್ಲಿ ಮತ್ತೆ ಎಡವಿದ್ದಾರೆ.

ನೋಡಿರಿ

