ತಾನೇ ತೋಡಿದ ಹಳ್ಳಕ್ಕೆ ಬಿದ್ರಾ ರಕ್ಷಿತಾ ಶೆಟ್ಟಿ? – ಮಾಳುಗಾಗಿ ತಪ್ಪು ಮಾಡಿದ್ರಾ ರಕ್ಷಿತಾ?

ತಾನೇ ತೋಡಿದ ಹಳ್ಳಕ್ಕೆ ಬಿದ್ರಾ ರಕ್ಷಿತಾ ಶೆಟ್ಟಿ? – ಮಾಳುಗಾಗಿ ತಪ್ಪು ಮಾಡಿದ್ರಾ ರಕ್ಷಿತಾ?

ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಆಟ ವೀಕ್ಷಕರಿಗೆ ಕಿರಿಕಿರಿಯಾಗ್ತಾ ಇದೆಯಾ?. ಯಾಕೆಂದರೆ, ರಕ್ಷಿತಾ ಶೆಟ್ಟಿ ಸೋಮವಾರದ ಎಪಿಸೋಡ್‌ನಲ್ಲಿ ಆಡಿರೋ ಆಟ ವಿಚಿತ್ರವಾಗಿತ್ತು. ಮಾಳುಗೆ ಬೆಂಬಲ ನೀಡಿದ ರೀತಿ, ನಾಮಿನೇಷನ್ ವೇಳೆ ನಡೆದುಕೊಂಡಿರುವ ರೀತಿ ನೋಡಿದ ವೀಕ್ಷಕರು ರಕ್ಷಿತಾ ಶೆಟ್ಟಿ ಆಟ ಹಳಿ ತಪ್ಪುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಬಿಗ್‌ಬಾಸ್‌ನಿಂದ ಜಾನ್ವಿ ಹೊರ ಬಂದಿದ್ದು ಬೇಗ ಆಯ್ತಾ? – ಕಾವ್ಯ ಮತ್ತು ಸ್ಪಂದನಾ ಟೆನ್ಷನ್ ಮಾಡಿಕೊಂಡಿದ್ಯಾಕೆ?

ರಕ್ಷಿತಾ ಶೆಟ್ಟಿ ಆಟ ಮೆಚ್ಚಿಕೊಂಡವರೇ ಈಗ ಈ ರೀತಿ ಆಡುವ ಬದಲು ಹೊರಗೆ ಬರುವುದೇ ವಾಸಿ ಅನ್ನೋ ರೀತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಮಾಳುಗೆ ಬೆಂಬಲ ನೀಡಿದ ರೀತಿ, ವಿಚಿತ್ರ ನಾಮಿನೇಷನ್ ತಂತ್ರದಿಂದ ರಕ್ಷಿತಾ ಶೆಟ್ಟಿ ಇಡೀ ಬಿಗ್‌ಬಾಸ್ ಮನೆಯ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾದರು. ಇಷ್ಟೇ ಆದರೆ, ರಕ್ಷಿತಾ ಶೆಟ್ಟಿ ಆಟ ಮೆಚ್ಚಬಹುದಿತ್ತು. ಆದರೆ, ರಕ್ಷಿತಾ ಶೆಟ್ಟಿಗೆ ತಾನು ಓಟಿಂದ ಗೆಲ್ಲುತ್ತೇನೆ ಎಂಬ ಓವರ್ ಕಾನ್ಫಿಡೆನ್ಸ್ ಜಾಸ್ತಿಯಿದೆ. ಹೀಗಾಗಿ ತನ್ನ ಬೆನ್ನ ಹಿಂದೆ ಚಾಕು ತೆಗೆಯುವ ಬದಲು ಮಾಳುಗೆ ಸಿಕ್ಕ ಚಾಕು ತೆಗೆದುಕೊಂಡು ಗಿಲ್ಲಿಯನ್ನು ನಾಮಿನೇಟ್ ಮಾಡಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಗಿದೆ.

ರಕ್ಷಿತಾ ಶೆಟ್ಟಿ ಎಲ್ಲರಿಗೂ ಇಷ್ಟ ಆಗಿರುವ ಸ್ಪರ್ಧಿ. ಅಷ್ಟೇ ಯಾಕೆ ಗಿಲ್ಲಿ ಕೂಡಾ ನಮ್ಮ ವಂಶದ ಕುಡಿ ಎಂದು ಹೆಮ್ಮೆಯಿಂದ ಹೇಳುತ್ತಲೇ ಇದ್ದರು. ಸೋಮವಾರದ ಎಪಿಸೋಡ್‌ನಲ್ಲೂ ಕೂಡಾ ರಕ್ಷಿತಾ ಶೆಟ್ಟಿ ಮಾಡುತ್ತಿರವ ತಪ್ಪನ್ನು ಗಿಲ್ಲಿ ತಿದ್ದಲು ಪ್ರಯತ್ನಿಸಿದರು. ನೀನು ನಿನ್ನ ಆಟ ಆಡಲು ಬಂದಿದ್ದು. ನಿನ್ನ ಆಟ ಮಾತ್ರ ಆಡು ಎಂದು ಗಿಲ್ಲಿ ರಕ್ಷಿತಾ ಶೆಟ್ಟಿಯನ್ನು ಎಚ್ಚರಿಸಿದರು. ಆದರೆ, ರಕ್ಷಿತಾ ಶೆಟ್ಟಿ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲೇ ಇರಲಿಲ್ಲ. ಹಾರುತ್ತಾ, ಕುಣಿಯುತ್ತಾ, ನಾನೇ ಸರಿ ಎಂಬಂತೆ ಮಾಳುವಿಗೆ ಬೆಂಬಲ ನೀಡುತ್ತಿರುವುದು ಕಿರಿಕಿರಿಯೆಂಬಂತೆ ಕಾಣಿಸುತ್ತಿತ್ತು.

ಇದಕ್ಕೂ ಮೊದಲು, 1ರಿಂದ 11ರವರೆಗೆ ಸಂಖ್ಯೆ ನೀಡಿ ಪ್ರತಿ ಸ್ಪರ್ಧಿಯನ್ನು ಅವರವರ ಆಟಕ್ಕೆ ಅನುಸಾರವಾಗಿ ಒಂದು ಸಂಖ್ಯೆಯನ್ನು ಕ್ಯಾಪ್ಟನ್ ಧನುಷ್ ನೀಡಬೇಕಿತ್ತು. ರಕ್ಷಿತಾಗೆ ನಾಲ್ಕನೇ ಸ್ಥಾನ ಸಿಕ್ಕರೆ ಮಾಳುಗೆ 11ನೇ ಸ್ಥಾನ ಸಿಕ್ಕಿತ್ತು. ರಕ್ಷಿತಾ ಅವರು ತಾವು ಒಂದು ಅಥವಾ ಎರಡನೇ ಸ್ಥಾನ ಪಡೆಯಬೇಕು ಎಂದು ಆಲೋಚಿಸುವ ಬದಲು ಮಾಳುಗೆ 11ನೇ ಸ್ಥಾನ ನೀಡಿದ್ದು ಏಕೆ ಎಂದು ಪ್ರಶ್ನೆ ಮಾಡಲು ಆರಂಭಿಸಿದರು. ‘ಮಾಳು ಅಣ್ಣ 3,4 ಅಥವಾ 5ನೇ ಸ್ಥಾನಕ್ಕೆ ಅರ್ಹರಾಗಿದ್ದರು. ಅವರನ್ನು 11ನೇ ಸ್ಥಾನದಲ್ಲಿ ನಿಲ್ಲಿಸಿದ್ದು ಸರಿಯಲ್ಲ ಎಂದು ವಾದಿಸಿದರು. ಒಟ್ನಲ್ಲಿ ರಕ್ಷಿತಾ ಶೆಟ್ಟಿ ತನ್ನ ಹಳ್ಳವನ್ನು ತಾನೇ ತೋಡಿಕೊಳ್ಳುತ್ತಿದ್ದಾರೆ.

Sulekha