ಪಾಕ್‌ನ 3ಯುದ್ಧ ವಿಮಾನ ಧ್ವಂಸ – F-16, JF-17 ವಿಮಾನದ ಬೆಲೆ ಎಷ್ಟು?
ಬಾಯಿ ಬಡ್ಕೊಂಡ ಬಡರಾಷ್ಟ್ರ!!

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಪಾಕಿಸ್ತಾನವು ಜಮ್ಮು-ಕಾಶ್ಮೀರ, ಪಂಜಾಬ್, ಮತ್ತು ರಾಜಸ್ಥಾನದ ಹಲವು ನಗರಗಳ ಮೇಲೆ ವಾಯು ದಾಳಿಗಳು ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು. ಇದಕ್ಕೆ ಪ್ರತಿಕಾರವಾಗಿ, ಭಾರತವು ಪ್ರತಿ ದಾಳಿಗಳನ್ನು ನಡೆಸಿ ಪಾಕಿಸ್ತಾನದ ಎಲ್ಲಾ ಯತ್ನವನ್ನು ವಿಫಲಗೊಳಿಸಿದೆ. ಇದರಲ್ಲಿ ಪಾಕಿಸ್ತಾನದ ಒಂದು ಎಫ್-16 ಮತ್ತು ಎರಡು ಜೆಎಫ್-17 ಥಂಡರ್ ಯುದ್ಧ ವಿಮಾನಗಳು ಉಡೀಸ್ ಆಗಿವೆ. ಲಾಹೋರ್ ಸೇರಿದಂತೆ ಪಾಕಿಸ್ತಾನದ ಹಲವು ಸ್ಥಳಗಳ ಮೇಲೆ ಭಾರತದ ಪ್ರತಿದಾಳಿಯಿಂದ ಪಾಕ್‌ಗೆ ಊಹಿಸಲಾಗದ ನಷ್ಟವಾಗಿದೆ.
ಪಾಕಿಸ್ತಾನದ F-16 ಯುದ್ಧ ವಿಮಾನ ಉಡೀಸ್
ಭಾರತದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ. ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ಜಮ್ಮುವನ್ನು ಗುರಿಯಾಗಿಸಲು ಪ್ರಯತ್ನಿಸಿತ್ತು. ಪಾಕಿಸ್ತಾನದ ವಾಯುಪಡೆಯ ಪ್ರಮುಖ ನೆಲೆಯಾದ ಸರ್ಗೋಧಾ ವಾಯುನೆಲೆಯಿಂದ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ, F-16 ಯುದ್ಧ ವಿಮಾನವು ಭಾರತದ ನೆಲದಿಂದ ಆಕಾಶಕ್ಕೆ ಚಿಮ್ಮುವ ಎಸ್‌ಎಎಮ್ ಕ್ಷಿಪಣಿಗೆ ಬಲಿಯಾಗಿದೆ.
ಚೀನಾ ಮತ್ತು ಫ್ರೆಂಚ್ ಯುದ್ಧ ವಿಮಾನಗಳನ್ನು ಹೊಂದಿರುವ ಪಾಕಿಸ್ತಾನದ ವಾಯುಪಡೆಯ ಪ್ರಮುಖ ಆಧಾರ ಸ್ತಂಭಗಳಲ್ಲಿ, F-16 ಯುದ್ಧ ವಿಮಾನ ಕೂಡ ಒಂದಾಗಿದೆ. 1981ರಲ್ಲಿ ಪಾಕಿಸ್ತಾನವು ಅಮೆರಿಕದೊಂದಿಗೆ 40 ಎಫ್-16 ವಿಮಾನಗಳಿಗೆ ಒಪ್ಪಂದ ಮಾಡಿಕೊಂಡಿತು. 1983-1987ರ ನಡುವೆ ಪೀಸ್ ಗೇಟ್ I ಮತ್ತು II ಕಾರ್ಯಕ್ರಮದಡಿ ಇವು ಒದಗಿಸಲಾಯಿತು. ಮೊದಲ ವಿಮಾನ 1983ರ ಜನವರಿ 15ರಂದು ತಲುಪಿತು. 1988ರಲ್ಲಿ 11 ಎಫ್-16 ವಿಮಾನಗಳಿಗೆ ಆರ್ಡರ್ ಮಾಡಲಾಯಿತು, ಆದರೆ 1990ರಲ್ಲಿ ಪರಮಾಣು ಕಾರ್ಯಕ್ರಮದಿಂದಾಗಿ ಅಮೆರಿಕವು ಡೆಲಿವರಿಯನ್ನು ನಿಲ್ಲಿಸಿತು. 2005ರಲ್ಲಿ ಅಮೆರಿಕದ ಅನುಮತಿಯೊಂದಿಗೆ 18 ಹೊಸ ಎಫ್-16 ವಿಮಾನಗಳನ್ನು 2010ರ ವೇಳೆಗೆ ಪಾಕ್ ಪಡೆದುಕೊಂಡಿತು. 2 ಅಮೆರಿಕ ನಿರ್ಮಿತ F-16 ಯುದ್ಧ ವಿಮಾನಗಳನ್ನು 1980ರ ದಶಕದ ಉತ್ತರಾರ್ಧದಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿತ್ತು.. 2019ರಲ್ಲಿ ಭಾರತದ ಬಾಲಾಕೋಟ್ ವಾಯುದಾಳಿಯ ಸಂದರ್ಭದಲ್ಲಿ, ಪಾಕಿಸ್ತಾನ F-16 ಯುದ್ಧ ವಿಮಾನಗಳನ್ನು ಬಳಸಿತ್ತು. ಪುಲ್ವಾಮಾ ದಾಳಿಗೆ ಭಾರತವು ಪ್ರತಿಕಾರವಾಗಿ ಬಾಲಾಕೋಟ್‌ನಲ್ಲಿ ದಾಳಿ ಮಾಡಿತ್ತು. ಆ ಸಮಯದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರು, ತಮ್ಮ ಮಿಗ್-21 ವಿಮಾನದಲ್ಲಿಕುಳಿತು, ಪಾಕಿಸ್ತಾನದ F-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. 1971 ರ ಯುದ್ಧದ ನಂತರ ಎರಡೂ ದೇಶಗಳ ನಡುವೆ ನಡೆದ ಮೊದಲ ವೈಮಾನಿಕ ಯುದ್ಧ ಇದಾಗಿತ್ತು.
ಎರಡು ಜೆಎಫ್-17 ಥಂಡರ್ ವಿಮಾನ ಧ್ವಂಸ
ಜೆಎಫ್-17 ಥಂಡರ್ ಒಂದು ಹಗುರವಾದ, ಬಹು-ಕಾರ್ಯದ ಯುದ್ಧ ವಿಮಾನವಾಗಿದೆ. ಇದನ್ನು ಪಾಕಿಸ್ತಾನ ಏರೋನಾಟಿಕಲ್ ಕಾಂಪ್ಲೆಕ್ಸ್ ಮತ್ತು ಚೀನಾದ ಚೆಂಗ್‌ಡು ಏರ್‌ಕ್ರಾಫ್ಟ್ ಕಾರ್ಪೊರೇಷನ್ ಸಂಯುಕ್ತವಾಗಿ ಅಭಿವೃದ್ಧಿಪಡಿಸಿವೆ. ಈ ವಿಮಾನವನ್ನು ಶತ್ರು ವಿಮಾನಗಳ ಮತ್ತು ಎದುರಾಳಿಯ ನಿರ್ದಿಷ್ಟ ಪ್ರದೇಶಗಳನ್ನ ಟಾರ್ಗೆಟ್ ಮಾಡಲು ಬಳಸಲಾಗುತ್ತದೆ. 1980ರ ದಶಕದ ಕೊನೆಯಲ್ಲಿ ಪಾಕಿಸ್ತಾನ ವಾಯುಪಡೆಗೆ ತನ್ನ ಹಳೆಯ ವಿಮಾನಗಳನ್ನು ಬದಲಿಸಲು ಹೊಸ ಯುದ್ಧ ವಿಮಾನಗಳ ಅಗತ್ಯವಿತ್ತು. 1990ರಲ್ಲಿ ಅಮೆರಿಕವು ಪಾಕಿಸ್ತಾನದ ಪರಮಾಣು ಕಾರ್ಯಕ್ರಮದಿಂದಾಗಿ ಎಫ್-16 ವಿಮಾನಗಳನ್ನು ನೀಡಲು ನಿರಾಕರಿಸಿತು. ಇದರಿಂದ ಪಾಕಿಸ್ತಾನವು ಚೀನಾದ ನೆರವು ಪಡೆದುಕೊಂಡಿತ್ತು. 2009ರ ನವೆಂಬರ್ 23ರಂದು ಮೊದಲ ಪಾಕಿಸ್ತಾನ-ನಿರ್ಮಿತ ಜೆಎಫ್-17 ಪಾಕ್ ವಾಯುಪಡೆಗೆ ಸೇರಿತು. 2010ರ ಫೆಬ್ರವರಿಯಲ್ಲಿ 14 ವಿಮಾನಗಳು ಸೇನೆಗೆ ಸೇರ್ಪಡೆಯಾದವು. 2015ರ ವೇಳೆಗೆ 66 ಯುದ್ದ ವಿಮಾನಗಳನ್ನು ಉತ್ಪಾದಿಸಲಾಯಿತು, ಮತ್ತು ಈಗ ಪಾಕ್ ವಾಯುಪಡೆಯಲ್ಲಿ 156 ಜೆಎಫ್-17 ವಿಮಾನಗಳಿವೆ. ಇರಲಾರದವೇ ಇರುವೆ ಬಿಡ್ಕೊಂಡ ಪಾಕಿಸ್ತಾನ ಕೈ ಸುಟ್ಟುಕೊಂಡಿದೆ. 3 ಯುದ್ಧ ವಿಮಾನಗಳನ್ನ ಕಳೆದುಕೊಂಡಿದ್ದು,ಟೀಸರ್‌ನಲ್ಲೇ ಭಾರತ ಶಕ್ತಿಏನು ಅನ್ನೋದು ಪಾಪಿ ಪಾಕ್ ಗೊತ್ತಾಗಿದೆ.