ಸೀತಾರಾಮ ಸೀರಿಯಲ್‌ ಗೆ ಗುಡ್‌ಬೈ ಹೇಳಿದ್ರಾ ಮೇಘನಾ ಶಂಕರಪ್ಪ? – ಪ್ರಿಯಾ ಪಾತ್ರ ಎಂಡ್‌?

ಸೀತಾರಾಮ ಸೀರಿಯಲ್‌ ಗೆ ಗುಡ್‌ಬೈ ಹೇಳಿದ್ರಾ ಮೇಘನಾ ಶಂಕರಪ್ಪ? – ಪ್ರಿಯಾ ಪಾತ್ರ ಎಂಡ್‌?

ಜೀ ಕನ್ನಡದಲ್ಲಿ ಸೀತಾರಾಮ ಸೀರಿಯಲ್‌ ಸದ್ಯ ರೋಚಕ ತಿರುವು ಪಡೆದುಕೊಂಡಿದೆ. ಸಿಹಿ ಸುಬ್ಬಿ ಕಾಂಬಿನೇಷನ್‌ ನಲ್ಲಿ ಕತೆ ಮೂಡಿ ಬರ್ತಿದ್ದು, ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಆದ್ರೀಗ ಸೀತಾರಾಮ ಸೀರಿಯಲ್‌ ಪ್ರಮುಖ ಪಾತ್ರಕ್ಕೆ ನಟಿಯೊಬ್ಬರು ಗುಡ್‌ಬೈ ಹೇಳಿದ್ರಾ ಅನ್ನೋ ಅನುಮಾನ ಮೂಡಿದೆ.

ಇದನ್ನೂ ಓದಿ: ಮುಂಬೈ & ಚೆನ್ನೈ IPL ಕಿಂಗ್ಸ್ – 17 ಸೀಸನ್.. ಟ್ರೋಫಿ ಗೆದ್ದವರೆಷ್ಟು?

ಹೌದು, ಸೀತಾರಾಮ ಸೀರಿಯಲ್‌ ನಲ್ಲಿ ಮೇಘನಾ ಶಂಕರಪ್ಪ ಪ್ರಿಯಾ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇತ್ತೀಚೆಗಷ್ಟೇ, ನಟಿ ಮೇಘನಾ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಅದೇ ಖುಷಿಯಲ್ಲಿ ಪತಿಯ ಜೊತೆಗೆ ಜಾಲಿ ಮೂಡ್​ಗೆ ಜಾರಿದ್ದಾರೆ. ಆದ್ರೆ, ನಟಿ ಮೇಘನಾ ಅವರು ಸೀತಾ ರಾಮ ಸೀರಿಯಲ್​ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಅಂತ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ.  ಅಲ್ಲದೇ ಸೋಷಿಯಲ್​ ಮೀಡಿಯಾದಲ್ಲಿ ನಟಿ ಮೇಘನಾ ಅವರು ಸೀರಿಯಲ್​ನಿಂದ ಆಚೆ ಬಂದ್ರಾ ಅಂತೆಲ್ಲಾ ಪ್ರಶ್ನೆ ಮಾಡುತ್ತಿದ್ದಾರೆ.

ಮೇಘನಾ ಶಂಕರಪ್ಪ ಶೂಟಿಂಗ್‌ ಸೆಟ್‌ ನಲ್ಲಿದ್ರೆ ಸಹ ನಟ, ನಟಿಯರೊಂದಿಗೆ ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡ್ತಿದ್ರು.. ಆದ್ರೆ ಇತ್ತೀಚೆಗೆ ಸಹ ನಟ, ನಟಿಯರೊಂದಿಗೆ, ರೀಲ್ಸ್‌ ಕೂಡ ಮಾಡಿಲ್ಲ.. ಹೀಗಾಗಿ ನಟಿ ಸೀರಿಯಲ್‌ ಬಿಟ್ರಾ ಅಂತಾ ಕೇಳ್ತಿದ್ದಾರೆ. ಆದ್ರೆ, ಈ ಬಗ್ಗೆ ನಟಿ ಮೇಘನಾ ಅವರು ಯಾವುದೇ ಮಾಹಿತಿ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಕೊಡ್ತಾರಾ ಅಂತ ಕಾದು ನೋಡಬೇಕಿದೆ.

Shwetha M