ಗಗನ್ ಮತ್ತು ಕಾವ್ಯಾ ಗೌಡ ಜಟಾಪಟಿ – ತಾಂಡವ್ ಸ್ನೇಹಕ್ಕಾಗಿ ಗಗನ್ ತಪ್ಪು ಮಾಡಿದ್ರಾ?

ಗಗನ್ ಮತ್ತು ಕಾವ್ಯಾ ಗೌಡ ಜಟಾಪಟಿ – ತಾಂಡವ್ ಸ್ನೇಹಕ್ಕಾಗಿ ಗಗನ್ ತಪ್ಪು ಮಾಡಿದ್ರಾ?

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಅಸಲಿ ಮುಖ ಒಂದೊಂದಾಗಿಯೇ ಹೊರ ಬರುತ್ತಿದೆ. ಇಷ್ಟು ದಿನ ಕಾವ್ಯಾ ಕಾಲೆಳೆಯುತ್ತಿದ್ದ ಗಗನ್ ಚಿನ್ನಪ್ಪ ಈಗ ಕಾವ್ಯ ಮೇಲೆಯೇ ಕಾದಾಟಕ್ಕಿಳಿದಿದ್ದಾರೆ. ಮತ್ತೊಂದೆಡೆ ವಿಐಪಿ ಗಗನ್ ಮೇಲೆ ತಾರತಮ್ಯದ ಆರೋಪ ಮಾಡಲಾಗಿದೆ.

ಇದನ್ನೂ ಓದಿ:ಏಕವಚನದಲ್ಲಿ ಗಗನ್ ಮಾತಾಡಿದರೆ ಓಕೆ – ಬೇರೆಯವರು ಗೌರವ ಕೊಡದಿದ್ದರೆ ಸಿಟ್ಯಾಕೆ?

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ಸ್ಪರ್ಧಿಗಳಾದ ಕಾವ್ಯಾ ಗೌಡ ಮತ್ತು ಗಗನ್ ಚಿಕಪ್ಪ ಅವರ ನಡುವೆ ಜಗಳ ಜೋರಾಗಿಯೇ ನಡೆದಿದೆ. ಅಡುಗೆಮನೆಯ ಜವಾಬ್ದಾರಿ ಹಾಗೂ ಕಸ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ವಾಗ್ವಾದ ಮಾಡಿಕೊಂಡಿದ್ದಾರೆ. ಡಸ್ಟ್‌ಬಿನ್ ಸ್ವಚ್ಛಗೊಳಿಸುವ ಬಗ್ಗೆ ಮಾತು ಶುರುವಾಗಿದೆ. ‘ಡಸ್ಟ್‌ಬಿನ್ ಕ್ಲೀನ್ ಮಾಡೋದು ಒಂದು ದೊಡ್ಡ ವಿಷಯ ಅಲ್ವೇ ಅಲ್ಲ’ ಎಂದು ಕಾವ್ಯಾ ಪ್ರತಿಕ್ರಿಯಿಸಿದರು. ಕಸವನ್ನು ಕವರ್‌ನಿಂದ ಹೊರಗೆ ಹಾಕಿರುವ ಕುರಿತು ಮತ್ತು ‘ಅದು ವೆಟ್ಟು, ಅಯ್ಯಯ್ಯೋ, ಚೀ ಚೀ ಚೀ’ ಎಂದು ಹೇಳಿ ಕೆಲಸದಿಂದ ನುಣುಚಿಕೊಳ್ಳುವ ಮನೋಭಾವದ ಬಗ್ಗೆ ಗಗನ್ ಅಸಮಾಧಾನ ವ್ಯಕ್ತಪಡಿಸಿದರು.  ಈ ವರಸೆ ಎಲ್ಲ ನಡೆಯಲ್ಲ ಕಾವ್ಯ, ಅಧಿಕ ಪ್ರಸಂಗ ಎಂದು ಗಗನ್ ಕಾವ್ಯಾರನ್ನ ಬೈದಿದ್ದಾರೆ.

ಮತ್ತೊಂದೆಡೆ ವಿಐಪಿ ಪಟ್ಟದಲ್ಲಿರುವ ಗಗನ್ ಚಿನ್ನಪ್ಪ ಮೇಲೆ ತಾರತಮ್ಯದ ಆರೋಪ ಬಂದಿದೆ. ಗಗನ್ ಅವರು ದೊಡ್ಮನೆಯಲ್ಲಿ ತಾಂಡವ್ ರಾಮ್ ಜೊತೆ ಕ್ಲೋಸ್ ಆಗಿದ್ದಾರೆ. ಈ ಕಾರಣಕ್ಕೆ ತಾಂಡವ್ ಅವರ ತಂಡಕ್ಕೆ ಬೆನಿಫಿಟ್ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಸ್ವಮಿಂಗ್​ಪೂಲ್​​ನಲ್ಲಿ ನಿಂತಿದ್ದವರ ಮೇಲೆ ಟೈಯರ್ ಟ್ಯೂಬ್ ಎಸೆಯುವ ಟಾಸ್ಕ್ ಇತ್ತು. ಈ ಟಾಸ್ಕ್​ನಲ್ಲಿ ಮೇಲಿನಿಂದ ಟ್ಯೂಬ್ ಹಾಕಿದ್ದು ನೇರವಾಗಿ ಸ್ವಿಮಿಂಗ್​ಪೂಲ್​ನಲ್ಲಿ ನಿಂತಿದ್ದವರ ಒಳಗೆ ಹೋಗಬೇಕು. ನೀರಿನಲ್ಲಿ ಇದ್ದವರು ಕೊಂಚವೂ ಸರಿಯಬಾರದು, ಕುತ್ತಿಗೆ ಅಲ್ಲಾಡಿಸಬಾರದು. ತಾಂಡವ್ ತಂಡದವರು ಇಲ್ಲಿ ಫೌಲ್ ಮಾಡಿದ್ದರು. ಇದನ್ನು ಗಗನ್ ಗಮನಿಸಿಯೇ ಇಲ್ಲ. ಆದರೆ, ಸೌಂದರ್ಯಾ ಶೆಟ್ಟಿ ಕೊಂಚ ಅಲ್ಲಾಡಿದ್ದಕ್ಕೆ ಫೌಲ್ ಕೊಟ್ಟಿದ್ದಾರೆ. ಇದು ಸಹಸ್ಪರ್ಧಿಗಳ ಸಿಟ್ಟಿಗೆ ಕಾರಣವಾಗಿದೆ.

Sulekha

Leave a Reply

Your email address will not be published. Required fields are marked *