ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ.ಹರಿಪ್ರಸಾದ್‌ರನ್ನು ತಳ್ಳಿದ ಮಾರ್ಷಲ್ಸ್!‌ –   ಜುಬ್ಬಾ ಹರಿದಿದ್ದು ಬಿಜೆಪಿ ನಾಯಕರಾ?

ರಾಜ್ಯಪಾಲರನ್ನು ಅಡ್ಡಗಟ್ಟಿದ ಬಿ.ಕೆ.ಹರಿಪ್ರಸಾದ್‌ರನ್ನು ತಳ್ಳಿದ ಮಾರ್ಷಲ್ಸ್!‌ –   ಜುಬ್ಬಾ ಹರಿದಿದ್ದು ಬಿಜೆಪಿ ನಾಯಕರಾ?

ಇಂದಿನಿಂದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಆರಂಭವಾಗಿದೆ. ಅಧಿವೇಶನ ಆರಂಭವಾಗುತ್ತಿದ್ದಂತೆ ಹೈಡ್ರಾಮಾವೇ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಸರ್ಕಾರ ನೀಡಿದ್ದ ಭಾಷಣವನ್ನು ಪೂರ್ತಿ ಓದದೇ ಬರಿ ಒಂದು ಸಾಲಿನಲ್ಲಿ ಭಾಷಣ ಮಂಡಿಸಿ ಸದನದಿಂದ ನಿರ್ಗಮಿಸಿದ್ದಾರೆ. ಇದೇ ವೇಳೆ ಬಿಕೆ ಹರಿಪ್ರಸಾದ್‌ ಸೇರಿದಂತೆ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿದ್ದರು. ಈ ವೇಳೆ ಬಿಕೆ ಹರಿಪ್ರಸಾದ್‌ ಅವರ ಜುಬ್ಬಾ ಹರಿದಿದೆ. ಈ ಬೆನ್ನಲ್ಲೇ ಬಿಕೆ ಹರಿಪ್ರಸಾದ್‌ ಅವರು  ಬಿಜೆಪಿ ನಾಯಕರು ನನ್ನ ಜುಬ್ಬಾ ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅವಮಾನಕ್ಕೆ ಹೆದರಿ ಪಾಕ್ ಬಾಬರ್ ಆಝಂ ಎಸ್ಕೇಪ್ – BBLಗೆ ಕೈಕೊಟ್ಟು ಓಡಿ ಹೋಗಿದ್ಯಾಕೆ?

ಒಂದು ಸಾಲಿನ ಭಾಷಣವನ್ನು ಮಂಡಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಧಾನಮಂಡಲದಿಂದ ನಿರ್ಗಮಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಈ ವೇಳೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ರಾಜ್ಯಪಾಲ ಥಾವರ್ ಚಂದ್  ಗೆಹ್ಲೋಟ್ ಅವರ ಎದುರು ನಿಂತು ನೀವು ಭಾಷಣವನ್ನು ಪೂರ್ತಿಯಾಗಿ ಓದಿ ಹೋಗಬೇಕೆಂದು ಆಗ್ರಹಿಸಿದ್ದರು.  ಈ ವೇಳೆ ರಾಜ್ಯಪಾಲರ  ಭದ್ರತಾ ಸಿಬ್ಬಂದಿ  ಬಿ.ಕೆ.ಹರಿಪ್ರಸಾದ್ ಅವರ ಪಕ್ಕಕ್ಕೆ ಸರಿಸಿ ರಾಜ್ಯಪಾಲರಿಗೆ ಮುಂದೆ ಹೋಗಲು ದಾರಿ ಮಾಡಿಕೊಡಲು ಯತ್ನಿಸಿದ್ದರು. ಈ ವೇಳೆ ಬಿ.ಕೆ.ಹರಿಪ್ರಸಾದ್ ಅವರ ಬಿಳಿ ಜುಬ್ಬಾದ ಕೆಳ ಭಾಗ ಸ್ವಲ್ಪ ಹರಿದಿದೆ.  ಬಿಜೆಪಿ ಸದಸ್ಯರೇ ಹಿಂದಿನಿಂದ ತಮ್ಮ ಜುಬ್ಬಾವನ್ನು ಹರಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಕೆ ಹರಿಪ್ರಸಾದ್‌, ರಾಜ್ಯಪಾಲರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ರಾಜ್ಯಪಾಲ ಹುದ್ದೆಯಲ್ಲಿರುವ ಅಧಿಕಾರ, ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ರಾಜ್ಯಪಾಲ ಹುದ್ದೆಗೆ ರಾಜೀನಾಮೆ ಕೊಟ್ಟು ಮಧ್ಯಪ್ರದೇಶಕ್ಕೆ ವಾಪಸ್ ಹೋಗಬೇಕು ಎಂದು ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ.

Shwetha M