ಗಿಲ್ಲಿ Vs ಅಶ್ವಿನಿ ಗೌಡ ಗೆಲ್ಲೋದ್ಯಾರು? – ಅಶ್ವಿನಿಗಾಗಿ ಟಾಸ್ಕ್ ಚೇಂಜ್ ಮಾಡಿದ್ರಾ ಬಿಗ್‌ಬಾಸ್?

ಗಿಲ್ಲಿ Vs ಅಶ್ವಿನಿ ಗೌಡ ಗೆಲ್ಲೋದ್ಯಾರು? – ಅಶ್ವಿನಿಗಾಗಿ ಟಾಸ್ಕ್ ಚೇಂಜ್ ಮಾಡಿದ್ರಾ ಬಿಗ್‌ಬಾಸ್?

ಬಿಗ್‌ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಆಟದ ರೀತಿ ನೋಡಿದರೆ, ಸ್ವತಃ ಬಿಗ್‌ಬಾಸ್ ಕೂಡಾ ತಲೆಬಾಗಿದ ಹಾಗೆ ಕಾಣುತ್ತಿದೆ. ಯಾರಿಗೂ ಕೇರ್ ಮಾಡಲ್ಲ. ಇವರು ಯಾರಿಗೆ ಬೇಕಾದರೂ ಏಕವಚನದಲ್ಲಿ ಮಾತನಾಡಬಹುದು. ಆದರೆ, ತನಗೆ ಮಾತ್ರ ಎಲ್ಲರೂ ಗೌರವ ಕೊಡಬೇಕು ಅನ್ನೋ ಧೋರಣೆ. ಇದರ ಜೊತೆಗೆ ಈ ಬಾರಿ ಮನೆಯ ಕ್ಯಾಪ್ಟನ್ ಅಶ್ವಿನಿ ಗೌಡ ಆಗಬೇಕು ಅನ್ನೋದು ಮೊದಲೇ ಫಿಕ್ಸ್ ಮಾಡಿದಂಗೆ ಇದೆ ಅನ್ನೋ ಆರೋಪ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಇದನ್ನೂ ಓದಿ:ಮರ್ಯಾದೆ ಅಶ್ವಿನಿ ಗೌಡ ಮತ್ತು ಜಾನ್ವಿಗೆ ಮಾತ್ರ ಇರೋದಾ? –ರಘು ಮತ್ತು ಗಿಲ್ಲಿಗೆ ಮರ್ಯಾದೆ ಇಲ್ವಾ?

ರಘು, ಅಶ್ವಿನಿಗೆ ಗೌಡಗೆ ಅಶ್ವಿನಿ ಎಂದಿದ್ದರು. ಇದರಿಂದ ದೊಡ್ಡ ಜಗಳ ಆಗಿದೆ. ಇದಾದ ಮೇಲೆ ಅಶ್ವಿನಿ ಮನೆ ಕೆಲಸದಲ್ಲಿ ಎಲ್ಲೂ ಕಾಣಿಸಿಕೊಂಡಿರಲೇ ಇಲ್ಲ. ಉಪವಾಸ ಸತ್ಯಾಗ್ರಹದ ನೆಪದಲ್ಲಿ ರೂಮ್ ಸೇರಿಕೊಂಡಿದ್ದರು. ಆದರೆ, ಟಾಸ್ಕ್ ಆಡಲು ಬಂದ ಅಶ್ವಿನಿ ಗೌಡ, ಗಿಲ್ಲಿ ಎದುರು ಸೋಲೊಪ್ಪಿಕೊಂಡಿದ್ದರು. ಆದರೆ, ಈ ವಾರ ಅಶ್ವಿನಿ ಟೀಮ್ ಎರಡು ಟಾಸ್ಕ್ ಗಳಲ್ಲಿ ಜಯ ಗಳಿಸಿತ್ತು. ಹೀಗಾಗಿ ಬಿಗ್‌ಬಾಸ್ ಅಶ್ವಿನಿಯವರನ್ನು ಕ್ಯಾಪ್ಟನ್ಸಿ ಟಾಸ್ಕ್‌ ಗೆ ಸೆಲೆಕ್ಟ್ ಮಾಡಿದ್ದಾರೆ. ಇದನ್ನು ನೋಡಿದ ವೀಕ್ಷಕರು ಬಿಗ್‌ಬಾಸ್ ಬೇಕಂತಲೇ ಅಶ್ವಿನಿಯವರನ್ನು ಆಯ್ಕೆ ಮಾಡಿದ್ದು. ಅಶ್ವಿನಿಯವರು ಈ ಬಾರಿ ಕ್ಯಾಪ್ಟನ್ ಆಗಲೇಬೇಕು ಎಂದು ಸ್ವತಃ ಬಿಗ್‌ಬಾಸ್ ಬಯಸುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಸಿಟ್ಟು ಹೊರಹಾಕಿದ್ದರು.

ಇದರ ನಡುವೆ ಬಿಗ್‌ಬಾಸ್ ಪ್ರೋಮೋ ರಿಲೀಸ್ ಆಗಿದ್ದು, ಇದರಲ್ಲಿ ಕೊಟ್ಟಿರುವ ಟಾಸ್ಕ್ ಅಶ್ವಿನಿಯವರನ್ನು ಗೆಲ್ಲಿಸಲು ಬಿಗ್‌ಬಾಸ್ ಕೂಡಾ ಸರ್ಕಸ್ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಫಿಸಿಕಲ್ ಟಾಸ್ಕ್ ಇದ್ದರೆ ಅಶ್ವಿನಿಯವರಿಗೆ ಮಾಡಲು ಕಷ್ಟವಾಗುತ್ತದೆ. ಯಾಕೆಂದರೆ, ಅಶ್ವಿನಿ ಎದುರಾಳಿಗಳು ಧ್ರುವಂತ್, ಅಭಿಷೇಕ್, ರಾಶಿಕಾ. ಇವರ ಎದುರು ಅಶ್ವಿಯವರಿಗೆ ಆಟ ಆಡಲು ಸ್ವಲ್ಪ ಕಷ್ಟವಾಗಬಹುದು. ಹೀಗಾಗಿ ಬಿಗ್‌ಬಾಸ್ ಕೂಡಾ ಅಶ್ವಿನಿಯವರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಹನ್ನೆರಡು ನಿಮಿಷದಲ್ಲಿ ಗಂಟೆ ಬಾರಿಸುವ ಅಭ್ಯರ್ಥಿ ಕ್ಯಾಪ್ಟನ್‌ ಆಗುತ್ತಾರೆ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಮಾತಿನಲ್ಲಿ ಗೆಲ್ಲುವ ಟಾಸ್ಕ್‌ ಇದಾಗಿತ್ತು. ಗಿಲ್ಲಿ ನಟ, ರಾಶಿಕಾ ಶೆಟ್ಟಿ, ಧ್ರುವಂತ್‌, ಅಶ್ವಿನಿ ಗೌಡ, ರಕ್ಷಿತಾ, ಅಭಿಷೇಕ್‌ ಶ್ರೀಕಾಂತ್‌ ಅವರು ಕ್ಯಾಪ್ಟನ್ಸಿ ಟಾಸ್ಕ್‌ ಆಡಿದ್ದಾರೆ. ಅಶ್ವಿನಿ ಗೌಡ, ಗಿಲ್ಲಿ ನಟ ಅವರು ಮುಖಾಮುಖಿಯಾಗಿದ್ದು, ಈ ಬಾರಿ ಮಾತಿನ ಪ್ರಹಾರವೇ ನಡೆದಿದೆ. ಗಿಲ್ಲಿ ನಟ ಅಂತೂ ಮಾತಿನಲ್ಲಿ ಸರಿಯಾಗಿ ಠಕ್ಕರ್‌ ಕೊಟ್ಟಿದ್ದಾರೆ. ಟೇಬಲ್‌ ಮೇಲೆ ಕಾಲಿಟ್ಟು ಅವರು ಸ್ಟ್ಯಾಂಡ್‌ ತಗೊಂಡಿದ್ದಾರೆ. ಗೇಟ್‌ ಹತ್ತಿರ ಬಂದು, ಮನೆಗೆ ಹೋಗ್ತೀನಿ, ಮನೆಗೆ ಹೋಗ್ತೀನಿ ಎಂದು ಹೇಳಿದ್ರಿ. ನಿಮ್ಮನ್ನು ನಾವು ಇಟ್ಟುಕೊಂಡಿದ್ದೀವಾ? ಹೋಗಿ, ಯಾರು ಬೇಡ ಅಂದ್ರು. ರಘು ಅಣ್ಣ ನಿಮ್ಮನ್ನು ಅಶ್ವಿನಿ ಅಂತ ಕರೆಯದೆ, ಆಶು ಅಂತ ಕರೆಯಬೇಕಿತ್ತಾ? ಏ ಅಂತ ನಿಮ್ಮ ಇನಿಶಿಯಲ್‌ ಇದ್ದಿದ್ರೆ ಏ ಅಶ್ವಿನಿ ಮೇಡಂ ಅಂತ ಕರೆಯುತ್ತಿದ್ದೆ ಎಂದು ಗಿಲ್ಲಿ ನಟ ಹೇಳಿದ್ದಾರೆ. ನಿನ್ನಂಥವರನ್ನು ಎಷ್ಟು ಜನರನ್ನು ನಾನು ನೋಡಿಲ್ಲ? ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಆಗ ಗಿಲ್ಲಿ ನಟ ಅವರು, “ನನ್ನನ್ನು ನೋಡಿರಲ್ಲ  ಎಂದು ಹೇಳಿದ್ದಾರೆ. ಒಟ್ನಲ್ಲಿ ಈ ವಾರ ಯಾರು ಕ್ಯಾಪ್ಟನ್‌ ಆಗುತ್ತಾರೆ ಎಂಬ ಕುತೂಹಲಕ್ಕಿಂತ ಬಿಗ್‌ಬಾಸ್ ಅಶ್ವಿನಿಯವರನ್ನೇ ಕ್ಯಾಪ್ಟನ್ ಮಾಡುವುದು ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ.

Sulekha