ಯಾವುದೋ ಒಂದು ದಿನ ಕೊನೆಗೊಳ್ಳಲೇಬೇಕು – ಭಾವುಕರಾದ ಕೊಹ್ಲಿ ನಿವೃತ್ತಿ ಸುಳಿವು ನೀಡಿದ್ರಾ?

ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟರ್, ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ತನ್ನ ನಿವೃತ್ತಿ, ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. ಜೊತೆಗೆ ಆಟದ ಮೇಲಿರುವ ಪ್ರೀತಿಯ ಬಗ್ಗೆ ವಿವರಿಸಿದ್ದಾರೆ. ಕೆಕೆಆರ್ ವಿರುದ್ಧ ಶತಕ ಸಿಡಿಸಿದ ಬಳಿಕ ಕೊಹ್ಲಿ ಮಾತನಾಡಿರುವ ವಿಚಾರಗಳು ಈಗ ಸದ್ದು ಮಾಡುತ್ತಿವೆ.
ಇದನ್ನೂ ಓದಿ:ನಾಯಕತ್ವದಲ್ಲಿ ಗೆದ್ದು ಬೀಗಿದ ಬುಮ್ರಾ – ಮುಂಬೈ ವಿರುದ್ಧ ಸೋತು ಬೆಂಡಾದ ಪಂಜಾಬ್ ಕಿಂಗ್ಸ್
ಟೆಸ್ಟ್ ಕ್ರಿಕೆಟ್, ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ ಬಳಿಕ ವಿರಾಟ್ ಕೊಹ್ಲಿ ಒನ್ ಡೇ ಕ್ರಿಕೆಟ್ ಮತ್ತು ಐಪಿಎಲ್‌ನಲ್ಲಿ ರನ್ ಮೇಲೆ ರನ್ ಸಿಡಿಸುತ್ತಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದ ನಿವೃತ್ತಿ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ಬಹಿರಂಗ ಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಅಂದ್ರೇನೆ ಹಾಗೆ. ಅಭಿಮಾನಿಗಳ ಪಾಲಿನ ಕಿಂಗ್.. ಮೈದಾನದಲ್ಲಿ ತರಲೆಗೂ ಕೊಹ್ಲಿಯೇ ಅಧಿಪತಿ. ಕೊಹ್ಲಿ ಮಾಡೋ ಕೀಟಲೆ ನೋಡೋದೇ ಚೆಂದ.. ಕ್ರೀಸ್ ತುಂಬಾ ಕೊಹ್ಲಿ ಓಡಾಡುತ್ತಿದ್ದರೆ ಆ ದಿನ ಅಭಿಮಾನಿಗಳಿಗೆ ಹಬ್ಬ. ಇದು ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಫ್ಯಾನ್ಸ್ ಗಮನಿಸದೇ ಇರಲ್ಲ. ಎರಡು ಡಕೌಟ್ ಗಳ ಬಳಿಕ ವಿರಾಟ್ ಕೊಹ್ಲಿ ಮೊದಲ ರನ್ ಗಳಿಸಿದಾಗ ಮಾಡಿರುವ ಸೆಲೆಬ್ರೇಷನ್‌ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದರು. ಒಂದು ರನ್ ಹೊಡೆದ ಕೊಹ್ಲಿ ಶತಕ ಬಾರಿಸಿದಂತೆ ಸಂಭ್ರಮಿಸಿದ್ದರು. ನಂತರ ಕೆಕೆಆರ್ ವಿರುದ್ಧ ಸೆಂಚುರಿ ಸಿಡಿಸಿದ್ರು.
ಆರ್‌ಸಿಬಿ ತಂಡವನ್ನು ಗೆಲ್ಲಿಸಿದ ಬಳಿಕ ಭಾವನಾತ್ಮಕವಾಗಿ ಮಾತನಾಡಿದ್ದಾರೆ ವಿರಾಟ್. ‘ನಾನು ಆಡುತ್ತಿರುವ ಈ ಆಟ ಯಾವುದೋ ಒಂದು ದಿನ ಖಂಡಿತ ಕೊನೆಗೊಳ್ಳುತ್ತದೆ. ಆದ್ದರಿಂದಲೇ ಮೈದಾನದಲ್ಲಿ ಇರೋ ಪ್ರತಿ ಕ್ಷಣವನ್ನು ಎಂಜಾಯ್ ಮಾಡುತ್ತೇನೆ’ ಎಂದು ಹೇಳುವ ಮೂಲಕ ಭಾವುಕರಾಗಿದ್ದಾರೆ. ಇಷ್ಟು ವರ್ಷ ಆಡಿದ ಬಳಿಕವೂ ನನ್ನ ಕೋರ್ ಫೀಲಿಂಗ್‌ನಲ್ಲಿ ಬದಲಾವಣೆ ಆಗಿಲ್ಲ. ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಸ್ಪರ್ಧಿಸುವುದು ನನಗೆ ಯಾವಾಗಲೂ ಗೌರವವಾಗಿರುತ್ತದೆ. ನನ್ನ ಜೀವನ ಪೂರ್ತಿ ನಾನು ಮಾಡಿರೋದು ಇದೆ. ಕ್ರಿಕೆಟ್ ಅಂದರೆ ನನಗೆ ತುಂಬಾ ಇಷ್ಟ. ಬ್ಯಾಟಿಂಗ್ ಮಾಡುತ್ತಿದ್ದರೂ, ಫೀಲ್ಡಿಂಗ್ ಮಾಡುತ್ತಿದ್ದರೂ ನನ್ನ ಸಂಪೂರ್ಣ ಶಕ್ತಿ ಹಾಗೂ ಆತ್ಮವನ್ನು ಇದರಲ್ಲಿಯೇ ಕೇಂದ್ರಿಕರಿಸುತ್ತೇನೆ’ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ. ‘ಮೈದಾನಕ್ಕೆ ಎಂಟ್ರಿ ಕೊಟ್ಟ ಪ್ರತಿದಿನವೂ ನನಗೆ ಒಂದು ಗುರಿ ಇರುತ್ತದೆ. ಮ್ಯಾಚ್ ಒತ್ತಡವನ್ನು ಎದುರಿಸೋದು, ಒತ್ತಡದ ಸಂದರ್ಭದಲ್ಲಿ ನನ್ನನ್ನು ನಾನು ಪರೀಕ್ಷೆ ಮಾಡಿಕೊಳ್ಳುವುದು ನನಗೆ ಇಷ್ಟ. ಇಂತಹ ಪರಿಸ್ಥಿತಿಯಲ್ಲಿ ಗೆಲುವು ಪಡೆದ ಸಂದರ್ಭದಲ್ಲಿಯೇ ಓರ್ವ ಒಳ್ಳೆ ಆಟಗಾರನಾಗಿ, ಒಳ್ಳೆಯ ವ್ಯಕ್ತಿಯಾಗಿ ನಾವು ಬೆಳೆಯುತ್ತೇವೆ. ಕ್ರೀಡೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಮಿಸುತ್ತವೆ’ ಎಂದು ಕೊಹ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ನನಗೆ ಇಂದಿಗೂ ರನ್ ಗಳಿಸುವ ಸಂತಸ ದೂರ ಆಗಿಲ್ಲ. ಬ್ಯಾಟ್ ಮಧ್ಯದಲ್ಲಿ ಚೆಂಡು ಟಚ್ ಆದಾಗ ಆಗುವ ಸಂತಸಕ್ಕಾಗಿ ನಾನು ಎಷ್ಟು ವರ್ಷ ಆದರೂ ಆಡೋದಕ್ಕೆ ಸಿದ್ಧ. ಇದು ದೇವರ ಅನುಗ್ರಹ’ ಎಂದು ಕೊಹ್ಲಿ ಹೇಳಿದ್ದಾರೆ.

ನೋಡಿರಿ

