ಐಶ್-ಅಭಿ ಡಿವೋರ್ಸ್ ಅನೌನ್ಸ್? – ಬಚ್ಚನ್ ಫ್ಯಾಮಿಲಿಯಲ್ಲಿ ಏನಾಗ್ತಿದೆ?
ವಿಡಿಯೋದಲ್ಲಿ ಇರೋ ಸತ್ಯವೇನು?

ಬಾಲಿವುಡ್‌ನ ಸೆಲೆಬ್ರಿಟಿ ಜೋಡಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಸಂಸಾರದ ಹಳಿ ತಪ್ಪಿದೆ.. ಇವರ ಮಧ್ಯೆ ಬಿರುಕು ಉಂಟಾಗಿದೆ ಎಂಬ ವಿಚಾರ ಬಿಟೌನ್ನಲ್ಲಿ ಸದ್ದು ಮಾಡ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಇವರಿಬ್ಬ ಬಗ್ಗೆ ಸಾಕಷ್ಟು ಗಾಸಿಪ್ಗಳು ಸ್ಪ್ರೆಡ್ ಆಗ್ತಾ ಇದೆ. ಬಚ್ಚನ್ ಮನೆಯ ದಿನಕ್ಕೊಂದೊಂದು ವಿಚಾರ ಚರ್ಚೆಯಲ್ಲಿರುತ್ತೆ.. ಇದೀಗ ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನದ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ ಎಂದು ಹೇಳೋ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.. ಈ ವಿಡಿಯೋದಲ್ಲಿ ದಾಂಪತ್ಯ ಜೀವನವನ್ನು ಕೊನೆಗೊಳಿಸೋದಾಗಿ ಅಭಿಷೇಕ್ ಹೇಳಿದ್ದಾರೆ.. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಭಿಷೇಕ್ ಏನ್ ಹೇಳಿದ್ದಾರೆ? ವೈರಲ್ ಆದ ವಿಡಿಯೋದ ಅಸಲಿಯತ್ತೇನು ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ’ – ಕ್ಷಮೆ ಕೇಳಿ ವಿನೇಶ್ ಫೋಗಟ್ ಭಾವುಕ ವಿದಾಯ
ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಎಲ್ಲವೂ ಚೆನ್ನಾಗಿಲ್ಲ ಅನ್ನೋ ಸುದ್ದಿ ಜೋರಾಗೇ ಕೇಳಿಬರುತ್ತಿದೆ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ಇಬ್ಬರು ಒಟ್ಟಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಹೀಗಾಗಿ ಈ ಜೋಡಿ ದಾಂಪತ್ಯ ಬಿರುಕು ಬಿಟ್ಟದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಬಚ್ಚನ್‌ಫ್ಯಾಮಿಲಿಯ ಯಾರೋಬ್ಬರೂ ಸ್ಪಷ್ಟನೆ ನೀಡಿಲ್ಲ.
ಇದೀಗ ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಡಿವೋರ್ಸ್ ವಿಚಾರವಾಗಿ ಅಭಿಷೇಕ್ ಬಚ್ಚನ್ ಮಾತನಾಡಿದ್ದಾರೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಈ ವಿಡಿಯೋ ಅಸಲಿಯಾ ನಕಲಿಯಾ ಅನ್ನೋ ವಿಚಾರ ಗೊತ್ತಾಗಿದೆ.
ಸಿನಿಮಾ ನಟ, ನಟಿಯರ ಕುರಿತಾಗಿ ನಕಲಿ ಸುದ್ದಿಗಳು ಆಗಾಗ ವೈರಲ್ ಆಗುತ್ತಿರುತ್ತವೆ. Al ಬಂದ್ಮೇಲಂತೂ ಸೆಲೆಬ್ರಿಟಿಗಳ ಫೇಕ್ ವಿಡಿಯೋಗಳು ಸಾಕಷ್ಟು ಹರಿದಾಡ್ತಿವೆ. ಅದಕ್ಕೆ ಲೇಟೆಸ್ಟ್ ಬಲಿಯಾದವರು ಬಾಲಿವುಡ್ ಸ್ಟಾರ್ ಅಭಿಷೇಕ್ ಬಚ್ಚನ್.
ಹೌದು, ಅಭಿಷೇಕ್ ಬಚ್ಚನ್ ತನ್ನ ದಾಂಪತ್ಯ ಜೀವನವನ್ನ ಕೊನೆಗೊಳಿಸುತ್ತಿದ್ದೇನೆ.. ಅದಕ್ಕೆ ಏನು ಕಾರಣ ಅಂತಾ ಹೇಳಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದವರೆಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ. ಇದೀಗ ಫೇಕ್ ವಿಡಿಯೋ ಅಂತಾ ಗೊತ್ತಾಗಿದೆ. ಇದನ್ನು Al ಬಳಸಿ ರಚಿಸಲಾಗಿದೆ ಎಂದು ಗೊತ್ತಾಗಿದೆ. ಅಭಿಷೇಕ್ ಬಚ್ಚನ್ ವಿಡಿಯೋ ಬಳಸಿಕೊಂಡು, ಲಿಪ್ ಸಿಂಕ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ಡೀಪ್ ಫೇಕ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಸೆಲೆಬ್ರಿಟಿಗಳನ್ನೇ ಗುರಿಯಾಗಿಸಿ, ಡೀಪ್ ಫೇಕ್ ವಿಡಿಯೋ ಫೋಟೋಗಳನ್ನ ಕಿಡಿಗೇಡಿಗಳು ವೈರಲ್ ಮಾಡ್ತಿದ್ದಾರೆ. ಈ ಹಿಂದೆ ಅಮೀರ್ ಖಾನ್, ರಣವೀರ್ ಸಿಂಗ್, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಮುಂತಾದವರು ಡೀಪ್ ಫೇಕ್ ಗೆ ಬಲಿಯಾಗಿದ್ರು. ಇದಕ್ಕೆ ಕೆಂದ್ರ ಸರ್ಕಾರವೂ ಆತಂಕ ವ್ಯಕ್ತಪಡಿಸಿತ್ತು. ಇದೀಗ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಾಂಪತ್ಯ ಜೀವನದಲ್ಲೂ ಬಿರುಕು ಬಿದ್ದಿದೆ.. ಇಬ್ಬರು ಪ್ರತ್ಯೇಕತೆಯ ಅಂಚಿನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಇದರ ಬೆನ್ನಲ್ಲೇ ಅಭಿಷೇಕ್ ಬಚ್ಚನ್ ಅವರ ನಕಲಿ ವಿಡಿಯೋ ವೈರಲ್ ಆಗಿದೆ.