ಬೈಕ್ಗೆ ಪಟಾಕಿ ಕಟ್ಟಿ ಸ್ಟಂಟ್ ಮಾಡಿದ! – ಸಾಹಸ ಪ್ರದರ್ಶಿಸಿದ ಯುವಕನಿಗೆ ಕಾದಿತ್ತು ಶಾಕ್!

ಕೆಲ ಯುವಕರಿಗೆ ಸುಮ್ಮನೆ ಇರೋದಿಕ್ಕೆ ಆಗೋದಿಲ್ಲ. ಏನಾದರೊಂದು ಕಿತಾಪತಿ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು ಹೆಚ್ಚು ಜನಪ್ರಿಯತೆ ಪಡೆಯಲು ಏನೇನೊ ಸ್ಟಂಟ್ಗಳನ್ನು ಮಾಡಿ ಪೇಚಿಗೆ ಸಿಲುಕುತ್ತಾರೆ. ಇದೀಗ ಇಲ್ಲೊಬ್ಬ ಯುವಕ ಬೈಕ್ಗೆ ಪಟಾಕಿಗಳನ್ನು ಕಟ್ಟಿ ನಡುರಸ್ತೆಯಲ್ಲೇ ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ್ದಾನೆ. ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆ ತಮಿಳುನಾಡಿನ ತಿರುಚಿಯಲ್ಲಿದೆ. ಯುವಕನೊಬ್ಬ ಬೈಕ್ಗೆ ಪಟಾಕಿಗಳನ್ನು ಕಟ್ಟಿ ಸ್ಟಂಟ್ ಮಾಡಿದ್ದಾನೆ. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವದ ಜೊತೆ ಚೆಲ್ಲಾಟ ಆಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಅನ್ನೋ ಕೂಗು ಕೇಳಿಬಂದಿತ್ತು. ಈ ಬೆನ್ನಲ್ಲೇ ಪೊಲೀಸರು ಕ್ರಮಕೈಗೊಂಡಿದ್ದಾರೆ. ರಸ್ತೆಯಲ್ಲಿ ಸಾಹಸ ಪ್ರದರ್ಶಿಸಿ ಪ್ರಯಾಣಿಕರಿಗೆ ಮತ್ತು ಪಾದಚಾರಿಗಳಿಗೆ ಅಪಾಯವನ್ನುಂಟು ಮಾಡಿದ ಆರೋಪದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನೀರು ಅಂತಾ ಪ್ರವಾಸಿಗರು ತಂದ ಬೀಯರ್ ಕುಡಿಯಿತು! – ಎಣ್ಣೆ ಮತ್ತಲ್ಲಿ ಕಾಡು ಹಂದಿ ಮಾಡಿದ್ದೇನು ಗೊತ್ತಾ?
ವೈರಲ್ ಆದ ವಿಡಿಯೋದಲ್ಲೇನಿದೆ?
ಯುವಕರು ಬೈಕ್ನ ಹೆಡ್ಲೈಟ್ಗೆ ಪಟಾಕಿಗಳನ್ನು ಕಟ್ಟುತ್ತಿರುವುದನ್ನು ತೋರಿಸುವ ಮೂಲಕ ವಿಡಿಯೋ ಪ್ರಾರಂಭವಾಗುತ್ತದೆ. ಇದಾದ ಬಳಿಕ ಹೆಡ್ಲೈಟ್ಗೆ ಕಟ್ಟಿದ್ದ ಪಟಾಕಿಗಳನ್ನು ಸಿಡಿಸುವ ಮೂಲಕ ಯುವಕರು ಬೈಕ್ನಲ್ಲಿ ಸಾಹಸ ಪ್ರದರ್ಶಿಸುತ್ತಿರುವುದು ಕಂಡು ಬರುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ವಿಡಿಯೋವನ್ನು ‘ಡೆವಿಲ್ ರೈಡರ್’ ಹೆಸರಿನ ಇನ್ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಪೇಜ್ ಅನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಯುವಕನ ವಿರುದ್ಧ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.