ಶುಗರ್‌ ನಿಯಂತ್ರಣಕ್ಕೆ ಈ ತರಕಾರಿ ಬೆಸ್ಟ್!‌ – ರಾತ್ರಿ ಊಟದ ಜೊತೆ ತೊಂಡೆಕಾಯಿ ತಿಂದ್ರೆ ಏನೆಲ್ಲಾ ಪ್ರಯೋಜನ?

ಶುಗರ್‌ ನಿಯಂತ್ರಣಕ್ಕೆ ಈ ತರಕಾರಿ ಬೆಸ್ಟ್!‌ – ರಾತ್ರಿ ಊಟದ ಜೊತೆ ತೊಂಡೆಕಾಯಿ ತಿಂದ್ರೆ ಏನೆಲ್ಲಾ ಪ್ರಯೋಜನ?

ಈಗ ಶುಗರ್‌ ಸಮಸ್ಯೆ ಅನೇಕರನ್ನ ಕಾಡ್ತಿದೆ. ಶುಗರ್‌ ನಿಯಂತ್ರಣದಲ್ಲಿಟ್ಟುಕೊಳ್ಳಲು ಅನೇಕರು ಔಷಧಿಗಳ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ತಿನ್ನುವ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಶುಗರ್‌ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಶುಗರ್‌ ಇರುವವರು ಈ ತರಕಾರಿಯನ್ನ ರಾತ್ರಿ ತಿಂದ್ರೆ ತುಂಬಾ ಒಳ್ಳೆಯದು. ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಇದನ್ನೂ ಓದಿ: ಘರ್ಜನೆ ನಿಲ್ಲಿಸಿದ ಮಿಗ್ 21 – ದೇಶ ರಕ್ಷಕನಿಗೆ ನಮ್ಮ ಕೊನೆಯ ಸೆಲ್ಯೂಟ್‌

ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಲ್ಲದಿದ್ದರೆ, ಔಷಧವನ್ನು ಬದಲಾಯಿಸುವುದು ಒಂದೇ ಪರಿಹಾರವಲ್ಲ. ತಮ್ಮ ದೈನಂದಿನ ಜೀವನಶೈಲಿ, ಆಹಾರ ಪದ್ಧತಿ, ಒತ್ತಡದ ಮಟ್ಟ ಮತ್ತು ಚಟುವಟಿಕೆಯ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ರಾತ್ರಿ ವೇಳೆ ತೊಂಡೆಕಾಯಿ ಸೇವನೆ ಮಾಡಿದ್ರೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ವಿಶೇಷವಾಗಿ ಮಧುಮೇಹಿಗಳು ತೊಂಡೆಕಾಯಿ ತಿಂದ್ರೆ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

ಬೇಸಿಗೆಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ತರಕಾರಿಗಳು ಲಭ್ಯವಿದೆ. ಇವುಗಳಲ್ಲಿ ಒಂದು ತೊಂಡೆಕಾಯಿ. ಇದು ಪೋಷಕಾಂಶಗಳ ಉಗ್ರಾಣವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳು ತೊಂಡೆಕಾಯಿ ತಿನ್ನಬೇಕು. ತೊಂಡೆಕಾಯಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳು ಕಂಡುಬರುತ್ತವೆ. ಕ್ಯಾಲ್ಸಿಯಂ, ಫೈಬರ್, ಉತ್ಕರ್ಷಣ ನಿರೋಧಕಗಳು, ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದೆ.

ತೊಂಡೆಕಾಯಿಯಲ್ಲಿ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳಿದ್ದರೂ ಕೆಲವರು ಇದನ್ನು ತಿನ್ನಲು ಇಷ್ಟಪಡುವುದಿಲ್ಲ. ಜೀರ್ಣಕ್ರಿಯೆ ಸಮಸ್ಯೆ ಇರುವವರು ಮತ್ತು ಮೆದುಳಿನ ಸಮಸ್ಯೆ ಇರುವವರು ಇವುಗಳನ್ನು ತಿನ್ನಬಾರದು. ಮಧುಮೇಹ ರೋಗಿಯು ಆಹಾರದ ಬಗ್ಗೆ ತೀರಾ ಜಾಗೃತೆ ವಹಿಸಬೇಕು. ಇಲ್ಲವಾದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣವೇ ಹೆಚ್ಚಾಗಲು ಪ್ರಾರಂಭಿಸುತ್ತದೆ. ತೊಂಡೆಕಾಯಿ ಹೈಪರ್ಗ್ಲೈಸೆಮಿಕ್ ವಿರೋಧಿ ಪರಿಣಾಮ ಹೊಂದಿದೆ. ಇದು ಬ್ಲಡ್‌ ಶುಗರ್ ನಿಯಂತ್ರಿಸಲು ಸಹಾಯ ಮಾಡುತ್ತದೆ.

ತೊಂಡೆಕಾಯಿ ಫೈಬರ್ ನಿಂದ ಸಮೃದ್ಧವಾಗಿರುವ ತರಕಾರಿ. ಇದನ್ನು ತಿನ್ನುವುದರಿಂದ ತೂಕವನ್ನು ಸುಲಭವಾಗಿ ನಿಯಂತ್ರಿಸಬಹುದು.ಇದರಲ್ಲಿ ಫೈಬರ್ ಇದ್ದು, ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ತೊಂಡೆಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತೊಂಡೆಕಾಯಿ ಸೇವಿಸುವುದರಿಂದ ದೇಹಕ್ಕೆ ವಿಟಮಿನ್ ಸಿ ದೊರೆಯುತ್ತದೆ. ದೇಹವನ್ನು ಸೋಂಕುಗಳಿಂದ ರಕ್ಷಿಸಲು ಸಹಾಯಕವಾಗಿದೆ.

ಹೃದಯ ಸಂಬಂಧಿತ ಸಮಸ್ಯೆಗಳನ್ನು ತೊಂಡೆಕಾಯಿ ಗುಣಪಡಿಸುತ್ತದೆ. ಇದರಲ್ಲಿ ಫ್ಲೇವನಾಯ್ಡ್‌ಗಳು ಕಂಡುಬರುತ್ತವೆ, ಇದು ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿಂದ ತುಂಬಿರುತ್ತದೆ.  ತೊಂಡೆಕಾಯಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿದ್ದು ಅದು ನಿಮ್ಮನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತವೆ.

Shwetha M