ಕಾಂತಾರ ಚಾಪ್ಟರ್ 1 ಬೀಟ್ ಮಾಡಿದ ಧುರಂಧರ್! – ನಂ.1 ಪಟ್ಟಕ್ಕೇರಿದ ರಣವೀರ್ ಸಿಂಗ್ ಸಿನಿಮಾ!

ಆದಿತ್ಯಾಧರ್ ನಿರ್ದೇಶನದ ಧುರಂಧರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾವನ್ನ ಬೀಟ್ ಮಾಡಿದೆ ಈ ಸಿನಿಮಾ. ಈ ಮೂಲಕ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಸ್ಪೈ ಥ್ರಿಲ್ಲರ್ ಚಿತ್ರ.
ಇದನ್ನೂ ಓದಿ: ಕೊಹ್ಲಿ ಫ್ಯಾನ್ಸ್ಗೆ ಬಿಗ್ಶಾಕ್! – ಚಿನ್ನಸ್ವಾಮಿಯಲ್ಲಿ ಪಂದ್ಯ ಆಯೋಜನೆಗೆ ಅನುಮತಿ ಇಲ್ಲ!
ಇತ್ತೀಚೆಗೆ ತೆರೆಕಂಡ ಧುರಂಧರ್ ಸಿನಿಮಾ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಕೇವಲ 18 ದಿನಗಳಲ್ಲಿ ಧುರಂಧರ್ ಸಿನಿಮಾ ವಿಶ್ವಾದ್ಯಂತ 872 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ . ಇದರಲ್ಲಿ ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ 571.75 ಕೋಟಿ ರೂ. ಮತ್ತು ಗ್ರಾಸ್ ಕಲೆಕ್ಷನ್ 641.55 ಕೋಟಿ ರೂಪಾಯಿಗೂ ಅಧಿಕ ಆಗಿದೆ. ಈ ಮೂಲಕ ಕಾಂತಾರ ಚಾಪ್ಟರ್ 1 ಸಿನಿಮಾ ಹಿಂದಿಕ್ಕಿ ದಾಖಲೆ ಬರೆದಿದೆ.
ಅಂದ್ಹಾಗೆ ಇತ್ತೀಚೆಗೆ ರಿಲೀಸ್ ಆದ ಕಾಂತಾರ ಚಾಪ್ಟರ್ 1 ಸಿನಿಮಾ ವಿಶ್ವಾದ್ಯಂತ ಸುಮಾರು 852.3 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದೀಗ ರಣವೀರ್ ಸಿಂಗ್ ಸಿನಿಮಾ 872 ರೂಪಾಯಿ ಗಳಿಕೆ ಮಾಡಿ ನಂಬರ್ 1 ಪಟ್ಟಕ್ಕೇರಿದೆ. ಇನ್ನು ಕಾಂತಾರ 2 ನೇ ಸ್ಥಾನಕ್ಕೆ ಜಾರಿದೆ. ಛಾವಾ ಸಿನಿಮಾ ಮೂರನೇ ಸ್ಥಾನಕ್ಕೆ ಇಳಿದಿದೆ. ಲಕ್ಷ್ಮಣ್ ಉತೇಕರ್ ನಿರ್ದೇಶನದ ಛಾವಾ ವಿಶ್ವಾದ್ಯಂತ 797.34 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಭಾರತದಲ್ಲಿ ಚಿತ್ರವು 600.10 ಕೋಟಿ ರೂ. ನೆಟ್ ಮತ್ತು 708.5 ಕೋಟಿ ರೂ. ಗ್ರಾಸ್ ಗಳಿಸಿತ್ತು. ವಿದೇಶದಿಂದ ಈ ಚಿತ್ರ 81.28 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.

ನೋಡಿರಿ

