ಪ್ರೇಕ್ಷಕರ ತಾಳ್ಮೆ ಪರೀಕ್ಷಿಸಿದ ಧುರಂಧರ್ – ರಣವೀರ್ ಸಿಂಗ್ ಹೈ ಬಜೆಟ್ ಸಿನಿಮಾಗೆ ಸಿಕ್ಕ ಪ್ರತಿಕ್ರಿಯೆ ಏನು?

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಶುಕ್ರವಾರ ರಿಲೀಸ್ ಆಗಿದೆ. ಮೊದಲ ದಿನ ಮೊದಲ ಪ್ರದರ್ಶನ ನೋಡಿದ ಅಭಿಮಾನಿಗಳು ಮಾತ್ರ ಗರಂ ಆಗಿದ್ದಾರೆ. ಸಿನಿಮಾದಲ್ಲಿ ಪ್ರೇಕ್ಷಕರ ತಾಳ್ಮೆಯ ಪರೀಕ್ಷೆ ನಡೆದಿದೆ. ಯಾಕೆಂದರೆ, ಧುರಂಧರ್ ಸಿನಿಮಾಗೆ ಸಮಯವೇ ವಿಲನ್ ಆಗಿದೆ.
ಬಾಲಿವುಡ್ ಹೀರೋ ರಣವೀರ್ ಸಿಂಗ್ ಯಶಸ್ಸಿಗಾಗಿ ತಪಸ್ಸು ಮಾಡುತ್ತಿದ್ದಾರೆ. ಜೊತೆಗೆ ಧುರಂಧರ್ ಸಿನಿಮಾದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಧರುಂಧರ್ ಸಿನಿಮಾ ಸಮಯವೇ ರಣವೀರ್ ಸಿಂಗ್ ಚಿತ್ರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಇದು ಸಿನಿಮಾ ಕಂಡ ಅಭಿಮಾನಿಗಳ ತಾಳ್ಮೆಗೆಡುವಂತೆ ಮಾಡಿದೆ. ಸಿನಿಮಾದ ಮೊದಲಾರ್ಧದಲ್ಲಿ ಲವ್ ಸ್ಟೋರಿ ಸೇರಿದಂತೆ ಅನೇಕ ವಿಷಯಗಳನ್ನು ಡ್ರ್ಯಾಗ್ ಮಾಡಲಾಗಿದೆಯಂತೆ. ಹೀಗಾಗಿ, ಸಿನಿಮಾದ ಮೊದಲಾರ್ಧದ ಅವಧಿ 2 ಗಂಟೆ ಮಿರೀದೆ. ಒಟ್ಟು ಈ ಸಿನಿಮಾದ ಅವಧಿ 3 ಗಂಟೆ 36 ನಿಮಿಷಗಳು. ಈ ಸಿನಿಮಾ ಹೊಗಳುವ ಮೊದಲು ಈ ಸಿನಿಮಾ ಸಮಯವೇ ನಮ್ಮ ತಾಳ್ಮೆ ಪರೀಕ್ಷೆ ಮಾಡಿದೆ ಎಂದು ವೀಕ್ಷಕರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಧುರಂಧರ್ ಸಿನಿಮಾದಲ್ಲಿ ರಣವೀರ್ ಸಿಂಗ್ ಸ್ಪೈ ಪಾತ್ರದಲ್ಲಿ ನಟಿಸಿದ್ದಾರೆ. 300 ಕೋಟಿ ರೂಪಾಯಿ ಬಜೆಟ್ ನ ಸಿನಿಮಾ ಇದಾಗಿದೆ. ರಣವೀರ್ ಸಿಂಗ್ ಪಾತ್ರಕ್ಕಿಂತಲೂ ಅಕ್ಷಯ್ ಖನ್ನಾ ಪಾತ್ರ ಸಾಕಷ್ಟು ಗಮನ ಸೆಳೆದಿದೆಯಂತೆ. ಆದರೆ, ರಣವೀರ್ ಸಿಂಗ್ ಅಭಿಮಾನಿಗಳು ಚಿತ್ರದ ಕ್ಲೈಮ್ಯಾಕ್ಸ್ ಇಷ್ಟಪಟ್ಟಿದ್ದಾರೆ. ಜೊತೆಗೆ ಮೊದಲ ದಿನ ಬುಕ್ಕಿಂಗ್ ಕೂಡಾ ಚೆನ್ನಾಗಿದೆ. ವೀಕ್ಷಕರು ಎಷ್ಟೇ ಬೇಸರ ಹೊರಹಾಕಿದರೂ ಕೂಡಾ ಸಿನಿಮಾ ಚೆನ್ನಾಗಿದೆ ಅಂತಾರೆ ಸಿನಿಮಾ ವಿಮರ್ಶಕರು.

ನೋಡಿರಿ

