ನಾಳೆ ಧುರಂಧರ್‌-2 ರಿಲೀಸ್ – ಇವತ್ತು ಸೀನ್‌ಗೆ ಕತ್ತರಿ, ಪ್ರೀಮಿಯರ್ ಶೋ ಕೂಡ ಕ್ಯಾನ್ಸಲ್?

 ನಾಳೆ ಧುರಂಧರ್‌-2 ರಿಲೀಸ್ – ಇವತ್ತು ಸೀನ್‌ಗೆ ಕತ್ತರಿ, ಪ್ರೀಮಿಯರ್ ಶೋ ಕೂಡ ಕ್ಯಾನ್ಸಲ್?

ಬಾಲಿವುಡ್‌ ಸಿನಿಮಾ ಧುರಂಧರ್ 2ಗೆ ಎಲ್ಲೆಡೆ ಕ್ರೇಜ್ ಅದ್ಭುತವಾಗಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಾಣುವುದಕ್ಕೆ ಸಜ್ಜಾಗಿದೆ. ಆದರೆ, ಅದಕ್ಕೂ ಮುನ್ನ, ಅಂದರೆ ಇಂದು  ವಿಶ್ವದ ಹಲವೆಡೆ ಸಾವಿರಾರು ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿದೆ. ಈ ಶೋಗಳಿಗೂ ಕ್ರೇಜಿ ರೆಸ್ಪಾನ್ಸ್ ಸಿಕ್ಕಿದೆ.  ಆದ್ರೆ ಕನ್ನಡ ಮತ್ತು ತೆಲುಗು ಪ್ರೀಮಿಯರ್ ಶೋ ಕ್ಯಾನ್ಸಲ್ ಆಗುತ್ತೆ ಎನ್ನಲಾಗ್ತಿದೆ.

ಮಾರ್ಚ್ 17ರಂದು ಧುರಂಧರ್- 2  ಚಿತ್ರಕ್ಕೆ ಪ್ರಮಾಣ ಪತ್ರ ಸಿಕ್ಕಿದೆ. 21 ಬದಲಾವಣೆಗಳನ್ನು ಮಾಡಲು ಸೂಚಿಸಲಾಗಿದೆ. ಅತ್ಯಂತ ಹಿಂಸಾತ್ಮಕ ವಿಷಯಗಳನ್ನು ತೆಗೆಯಲು ಸೂಚಿಸಲಾಗಿದೆ. ಸದ್ಯ ಹಿಂದಿ ವರ್ಷನ್ ಬಗ್ಗೆ ತಂಡದವರು ಹೆಚ್ಚು ಗಮನ ಹರಿಸುತ್ತಿದ್ದಾರೆ. ಅದರ ಎಡಿಟ್ ಮಾಡಿ ಯುಎಫ್​​ಓಗೆ ಅಪ್​​ಲೋಡ್ ಮಾಡುವ ಭರದಲ್ಲಿ ತಂಡದವರಿದ್ದಾರೆ. ಹೀಗಾಗಿ, ಇನ್ನು, ಕನ್ನಡ ಹಾಗೂ ತೆಲುಗು ವರ್ಷನ್ ಇಂದು ಪ್ರದರ್ಶನ ಕಾಣೋದು ಅನುಮಾನ ಎನ್ನಲಾಗುತ್ತಿದೆ. ಸದ್ಯ ವೈಜಿಆರ್​ ಮಾಲ್​ ಅಲ್ಲಿ ಕನ್ನಡದ ಒಂದು ಶೋ ಇದೆ. ಅದು ಕೂಡ ಶೀಘ್ರವೇ ಕ್ಯಾನ್ಸಲ್ ಆಗಬಹುದು.

ಇದನ್ನೂ ಓದಿ: ದೆಹಲಿಯಲ್ಲಿ ಭೀಕರ ಅಗ್ನಿ ದುರಂತ – 3 ಮಕ್ಕಳು ಸೇರಿ 7ಕ್ಕೂ ಹೆಚ್ಚು ಸಾ*ವು!

ಬೆಂಗಳೂರಲ್ಲಿ ಕನ್ನಡ ವರ್ಷನ್​​ ಪ್ರೀಮಿಯರ್​​ಗಳನ್ನು ಇಂದು ಆಯೋಜಿಸಲಾಗಿತ್ತು. ಪಿವಿಆರ್, ಗೋಪಾಲನ್ ಅಲ್ಲಿ ಶೋ ನೀಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಇದನ್ನು ಕ್ಯಾನ್ಸಲ್ ಮಾಡಿರೋದು ಚರ್ಚೆ ಹುಟ್ಟುಹಾಕಿದೆ. ಹೀಗಾಗಿ, ಇಂದು ಶೋ ಕನ್ನಡ, ತೆಲುಗು ವರ್ಷನ್​ಗಳಲ್ಲಿ ಪ್ರದರ್ಶನ ಕಾಣೋದು ಅನುಮಾನವೇ.  ಧುರಂಧರ್ 2’ ಸಿನಿಮಾದ ರನ್​ ಟೈಮ್ ಈ ಮೊದಲು 3 ಗಂಟೆ 55 ನಿಮಿಷ ಇತ್ತು. ಹೊಸ ವರ್ಷನ್ ಮೂರು ಗಂಟೆ 49 ನಿಮಿಷ ಇದೆ.

Kishor KV