ಪಾಕ್‌ನಲ್ಲಿ ಧುರಂಧರ್ 2 ಹವಾ! – ಒಟಿಟಿಯಲ್ಲಿ ರಿಲೀಸ್ ಆದ ಕೆಲವೇ ಹೊತ್ತಲ್ಲಿ ನೆಟ್‌ಫ್ಲಿಕ್ಸ್ ಸರ್ವರ್ ಕ್ರ್ಯಾಶ್!

ರಣ್‌ವೀರ್ ಸಿಂಗ್ ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ‘ಧುರಂಧರ್ 2’ ಸಿನಿಮಾವನ್ನು ಪ್ರೇಕ್ಷಕರು ಥಿಯೇಟರ್‌ನಲ್ಲಿ ಮುಗಿಬಿದ್ದು ನೋಡಿದ್ದರು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸಾವಿರಾರು ಕೋಟಿ ಲೂಟಿ ಮಾಡಿ, ಈಗ ಓಟಿಟಿಗೆ ಲಗ್ಗೆ ಇಟ್ಟಿದೆ. ಇದೀಗ ಪಾಕ್‌ನಲ್ಲಿ ಧುರಂಧರ್ 2 ಹವಾ ಜೋರಾಗಿದೆ. ಈ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತಿದ್ದಂತೆ ಪಾಕಿಸ್ತಾನದಲ್ಲಿ ದಾಖಲೆ ಮಟ್ಟದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ: ಮಾಜಿ ಪತ್ನಿ ಮರೆತು ಹೊಸ ಗೆಳತಿ ಜೊತೆ ಬಾಳಲು ಹಾರ್ದಿಕ್ ರೆಡಿ! – ಮಹಿಕಾ – ಪಾಂಡ್ಯ ಮದುವೆಗೆ ಮುಹೂರ್ತ ಫಿಕ್ಸ್?
ಧುರಂಧರ್ 2 ಸಿನಿಮಾ ಸೌದಿ ರಾಷ್ಟ್ರಗಳು, ಪಾಕಿಸ್ತಾನ ಇನ್ನೂ ಕೆಲವೆಡೆ ನಿಷೇಧಕ್ಕೆ ಒಳಗಾಗಿತ್ತು. ಅದರಲ್ಲೂ ಸಿನಿಮಾ ಕತೆಯೇ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಇರುವಂಥಹದ್ದು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗ್ತಿದ್ದಂತೆ ಪಾಕಿಸ್ತಾನದ ಜನ ಮುಗಿಬಿದ್ದು ಧುರಂಧರ್ 2 ಸಿನಿಮಾ ನೋಡಿದ್ದಾರೆ. ಈಗ ಮಾತ್ರವಲ್ಲ ಈ ಹಿಂದೆ ಧುರಂಧರ್ ಮೊದಲ ಭಾಗ ಬಿಡುಗಡೆ ಆದಾಗಲೂ ಸಹ ಪಾಕ್ನ ಜನ ಹುಚ್ಚೆದ್ದು ಆ ಸಿನಿಮಾ ವೀಕ್ಷಿಸಿದ್ದರು. ಈಗ ಮತ್ತೆ ಅದೇ ಕ್ರೇಜ್ ಪುನರಾವರ್ತನೆಗೊಂಡಿದೆ.
ಹೌದು, ಧುರಂಧರ್ 2 ಸಿನಿಮಾ ಮೇ 14 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಪಾಕಿಸ್ತಾನದಲ್ಲಿ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ವೀಕ್ಷಿಸಬಹುದಾಗಿದೆ. ಸಿನಿಮಾದ ಬಿಡುಗಡೆಗಾಗಿ ನಿರೀಕ್ಷೆಯಿಂದ ಕಾಯುತ್ತಿದ್ದ ಪಾಕಿಸ್ತಾನದ ಸಿನಿಮಾ ಪ್ರೇಮಿಗಳು ಮೇ 13 ರ ಮಧ್ಯರಾತ್ರಿಯವರೆಗೆ ಎದ್ದಿದ್ದು, ಸಿನಿಮಾ ಸ್ಟ್ರೀಮಿಂಗ್ ಆರಂಭಿಸುತ್ತಿದ್ದಂತೆ ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ‘ಧುರಂಧರ್ 2’ ಸಿನಿಮಾ ಪಾಕಿಸ್ತಾನದ ನೆಟ್‌ಫ್ಲಿಕ್ಸ್‌ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ. ಅಷ್ಟೇ ಅಲ್ಲದೆ, ಮಾವಿಯಾ ಉಮರ್ ಫಾರೂಕಿ ಎಂಬ ಹೆಸರಿನ ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಹೇಳಿರುವ ಪ್ರಕಾರ, ‘ಧುರಂಧರ್ 2’ ಕ್ರೇಜ್ ಎಷ್ಟಿತ್ತೆಂದರೆ, ಒಟ್ಟಿಗೆ ಜನ ‘ಧುರಂಧರ್ 2’ ನೋಡಿದ್ದರಿಂದ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಸರ್ವರ್‌ಗಳು ಸ್ವಲ್ಪ ಸಮಯದವರೆಗೆ ಕ್ರ್ಯಾಶ್ ಆಗಿದ್ದವಂತೆ!
ಕಂಟೆಂಟ್ ಕ್ರಿಯೇಟರ್ ಹೇಳಿರುವಂತೆ ‘ಪಾಕಿಸ್ತಾನದಲ್ಲಿ ‘ಧುರಂಧರ್ 2’ ಬಿಡುಗಡೆಯಾದ್ದರಿಂದ ಸರ್ವರ್ ಕ್ರ್ಯಾಶ್ ಆಗಿದೆ. ‘ಧುರಂಧರ್ 2’ ಯಾವಾಗ ಅಪ್ಲೋಡ್ ಆಗುತ್ತದೆ ಎಂದು ಜನ ಮೊಬೈಲ್ ಹಿಡಿದು ಕಾಯುತ್ತಿದ್ದರು. ರಾತ್ರಿ 12ಕ್ಕೆ ಸಿನಿಮಾ ಅಪ್ಲೋಡ್ ಆಗುತ್ತಿದ್ದಂತೆ ಒಟ್ಟಿಗೆ ಕ್ಲಿಕ್ ಮಾಡಿ ಸಿನಿಮಾ ನೋಡಲು ಆರಂಭಿಸಿದರು. ಇದರಿಂದ ಪಾಕ್‌ನಲ್ಲಿ ನೆಟ್‌ಫ್ಲಿಕ್ಸ್ ಸರ್ವರ್ ಕೆಲ ಹೊತ್ತು ಕ್ರ್ಯಾಶ್ ಆಯ್ತು’ ಎಂದಿದ್ದಾರೆ.

ನೋಡಿರಿ

