ವಿಶ್ವದಾದ್ಯಂತ ಧುರಂಧರ್ 2 ಅಬ್ಬರ! – ಅಬ್ಬಬ್ಬಾ.. ಪ್ರೀಮಿಯರ್ ಶೋನಿಂದ ಗಳಿಸಿದ್ದು ಇಷ್ಟೊಂದಾ?

ಈ ವರ್ಷದ ಭಾರತದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಧುರಂಧರ್ 2 ರಿಲೀಸ್ ಆಗಿದೆ. ನಟ ರಣವೀರ್ ಸಿಂಗ್ ಅಭಿನಯದ ಸಿನಿಮಾಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಇದನ್ನೂ ಓದಿ: ಬೇವು ಬೆಲ್ಲ.. ಎಣ್ಣೆ ಸ್ನಾನ.. ಹೋಳಿಗೆ ಘಮ – ಹೊಸ ಚಿಗುರಿನ ಜೊತೆ ಜೊತೆಗೆ ಯುಗಾದಿ ಸಂಭ್ರಮ!
ಪಾರ್ಟ್ 2ನಲ್ಲಿ ರಣವೀರ್ ಸಿಂಗ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಸೀನ್‌ಗಳಿಂದ ತುಂಬಿರುವ ಸಿನಿಮಾ ಪ್ರೇಕ್ಷಕರ ಮನಸ್ಸಲ್ಲಿ ಎರಡು ಪಟ್ಟು ಕೋಪ, ಹಿಂಸಾತ್ಮಕ ಭಾವವನ್ನು ಉದ್ರೇಕಿಸುತ್ತದೆ. ಪಾಕಿಸ್ತಾನ ಭಯೋತ್ಪಾದಕರ ಜಾಲವನ್ನು ನಾಶ ಮಾಡುವ ಜಸ್ಕಿರತ್ ಸಿಂಗ್ ರಂಗಿಯ ಕಥೆಯೇ ಮುಖ್ಯ ಕಥೆಯಾಗಿದೆ.
ಧುರಂಧರ್ 2: ದಿ ರಿವೆಂಜ್ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಅತ್ಯಂತ ದೀರ್ಘವಾದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾ ಪರದೆಯ ಮೇಲೆ 235 ನಿಮಿಷಗಳು ಅಂದರೆ ಸುಮಾರು 3 ಗಂಟೆ 55 ನಿಮಿಷಗಳ ಪ್ರದರ್ಶನವಿದೆ.
‘ಧುರಂಧರ್ 2’ ಸಿನಿಮಾ ಪೇಯ್ಡ್ ಪ್ರೀಮಿಯರ್ಗಿಂದಲೇ 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೊದಲು ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾ ಪ್ರೀಮಿಯರ್ ಶೋಗಳಿಂದ 25 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಮಾಡಿತ್ತು. ಆ ದಾಖಲೆಗಳನ್ನು ‘ಧುರಂಧರ್ 2’ ಮುರಿದು ಹಾಕಿದೆ. ಪ್ರೀಮಿಯರ್ ಶೋಗಳಿಂದ ‘ಓಜಿ’ ಚಿತ್ರ ಮಾಡಿದ ಗಳಿಕೆಗಿಂತ ದುಪ್ಪಟ್ಟು ಗಳಿಕೆಯನ್ನು ‘ಧುರಂಧರ್ 2’ ಸಿನಿಮಾ ಮಾಡಿದೆ.
ಇಂದು ಯುಗಾದಿ ಪ್ರಯುಕ್ತ ರಜಾ ಇದೆ. ಇದು ‘ಧುರಂಧರ್ 2’ ಸಿನಿಮಾಗೆ ಸಹಕಾರಿ ಆಗಲಿದೆ. ಈ ಚಿತ್ರದ ಬುಕಿಂಗ್ ಜೋರಾಗಿಯೇ ನಡೆಯುತ್ತಿದೆ. ಹೀಗಾಗಿ, ಮೊದಲ ದಿನ ಸಿನಿಮಾದ ಕಲೆಕ್ಷನ್ 200-300 ಕೋಟಿ ರೂಪಾಯಿ ಆಗಬಹುದು ಎಂದು ಊಹಿಸಲಾಗಿದೆ. ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಈ ಕಾರಣದಿಂದಲೂ ಚಿತ್ರ ಹೆಚ್ಚು ಗಳಿಕೆ ಮಾಡಬಹುದು.
ಸಿನಿಮಾದಲ್ಲಿ ಸಂಜಯ್ ಧತ್, ಅರ್ಜುನ್ ರಾಂಪಾಲ್, ಆರ್.ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ ಸೇರಿದಂತೆ ಅನೇಕ ದಿಗ್ಗಜ ತಾರಾಗಣ ನಟಿಸಿದ್ದು, ತಮ್ಮ ಪಾತ್ರಗಳ ಮೂಲಕ ಕಮಾಲ್ ಮಾಡಿದ್ದಾರೆ.
ಹಿಂದಿ, ತೆಲುಗು, ತಮಿಳು, ಕನ್ನಡ, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದೆ. ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಪ್ರೀಮಿಯರ್ ಶೋಗಳಿಂದ ಸಿನಿಮಾ 52 ಕೋಟಿ ರೂ. ಗಳಿಸಿದೆ.

ನೋಡಿರಿ

