ಗಿಲ್ಲಿಗೆ ಧ್ರುವಂತ್‌ ಚಾಲೆಂಜ್‌! – ಫಿನಾಲೆ ಟಾಸ್ಕ್‌ನಿಂದ ಮಾತಿನ ಮಲ್ಲ ಔಟ್?‌  

ಗಿಲ್ಲಿಗೆ ಧ್ರುವಂತ್‌ ಚಾಲೆಂಜ್‌! – ಫಿನಾಲೆ ಟಾಸ್ಕ್‌ನಿಂದ ಮಾತಿನ ಮಲ್ಲ ಔಟ್?‌  

ಬಿಗ್‌ಬಾಸ್‌ ಮನೆಮಂದಿ ಫಿನಾಲೆಗೆ ಸಜ್ಜಾಗುತ್ತಿದ್ದಾರೆ. ಇದೀಗ ಫಿನಾಲೆ ಟಾಸ್ಕ್‌ಗೆ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಇದೀಗ ಸ್ಪರ್ಧಿಗಳ ಮಧ್ಯೆ ಟಫ್‌ ಫೈಟ್‌ ಏರ್ಪಟ್ಟಿದೆ. ಇದೀಗ ಧ್ರುವಂತ್ ತಮ್ಮ ಎದುರಾಳಿಯಾಗಿ ಗಿಲ್ಲಿ ನಟರನ್ನು ಆಯ್ಕೆ ಮಾಡಿಕೊಂದ್ದಾರೆ. ಆದ್ರೆ ಗಿಲ್ಲಿ ಟಾಸ್ಕ್‌ನಲ್ಲಿ ಸೋತಿದ್ದಾರೆ.

ಇದನ್ನೂ ಓದಿ: ಕೋರ್ಟ್‌ ಆದೇಶವಿದ್ರೂ ಪವಿತ್ರಾ ಗೌಡಗೆ ಮನೆ ಊಟ ಇಲ್ಲ! – ಇನ್ಮುಂದೆ ಜೈಲೂಟವೇ ಗತಿ!

ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್‌ಗಳ ಅಬ್ಬರ ಶುರುವಾಗಿದೆ. ಈ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಸೂಚಿಸುವ ಸ್ಪರ್ಧಿ ತನ್ನ ಎದುರಾಳಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಈ ಅವಕಾಶ ಪಡೆದುಕೊಂಡ ಧ್ರುವಂತ್ ತಮ್ಮ ಎದುರಾಳಿಯಾಗಿ ಗಿಲ್ಲಿ ನಟ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದ್ರ ಪ್ರೋಮೋ ರಿಲೀಸ್‌ ಆಗಿದೆ.

ಪ್ರೋಮೋದಲ್ಲಿ, ಧ್ರುವಂತ್‌ ಗಿಲ್ಲಿಯನ್ನ ಟಾಸ್ಕ್‌ಗೆ ಆಯ್ಕೆ ಮಾಡಿ, ತಮ್ಮ ವಿರುದ್ಧ ಗಿಲ್ಲಿ ಯಾಕೆ ಎಂಬುದನ್ನು ಸಹ ಧ್ರುವಂತ್ ವಿವರಿಸಿದ್ದಾರೆ. ಗಿಲ್ಲಿ ನಟ ಕಾಮಿಡಿ ಮಾಡೋದನ್ನು ಬಿಟ್ಟು ಇನ್ನುಳಿದ ಎಲ್ಲಾ ವಿಷಯಗಳಲ್ಲಿ ಶೂನ್ಯ. ಟಾಸ್ಕ್ ಮತ್ತು ಬೇರಾವ ನಿರ್ಧಾರ ತೆಗೆದುಕೊಳ್ಳುವಲ್ಲಿ ಗಿಲ್ಲಿ ಅವರ ಹೊಣೆಗಾರಿಕೆಯನ್ನು ನಾನು ನೋಡಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ. ಇದೀಗ ಇಬ್ಬರ ಮಧ್ಯೆ ಟಾಸ್ಕ್‌ ನಡೆದಿದ್ದು, ಇದ್ರಲ್ಲಿ ಧ್ರುವಂತ್‌ ವಿನ್‌ ಆಗಿದ್ದಾರೆ ಎನ್ನಲಾಗ್ತಿದೆ. ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಈ ಆಟದಲ್ಲಿ ಧ್ರುವಂತ್ ಗೆಲುವು ಕಂಡಿದ್ದು, ಫಿನಾಲೆ ಟಿಕೆಟ್‌ಗೆ ನಡೆಯುವ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ ಎನ್ನಲಾಗ್ತಿದೆ. ಇದೀಗ ಗಿಲ್ಲಿ ಟಾಸ್ಕ್‌ ಸೋಲುತ್ತಿದ್ದಂತೆ, ಮತ್ತೆ ಎಂದಿನಂತೆ ಟಾಸ್ಕ್‌ ಆಡಲು ಬರಲ್ಲ ಎಂಬ ಅಪವಾದಕ್ಕೆ ಗಿಲ್ಲಿ ನಟ ತುತ್ತಾಗಿದ್ದಾರೆ.

Shwetha M