ಆ ಪದ ಬಳಸಿ ಗಿಲ್ಲಿ, ಕಾವ್ಯ ಪಿತ್ತ ನೆತ್ತಿಗೇರಿಸಿದ ಧ್ರುವಂತ್! – ಗಿಲ್ಲಿನಟನ ಟಾರ್ಗೆಟ್ ಮಾಡಿ ಇರೋ ಮರ್ಯಾದೆ ಕಳ್ಕೊಳ್ತಿದ್ದಾರಾ?

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಆರು ವಾರಗಳು ಕಳೆದಿವೆ. ಈಗಾಗಲೇ ಈ ಮನೆಯಲ್ಲಿ ಎರಡು ಗುಂಪು ರೆಡಿಯಾಗಿದೆ. ಒಂದು ಗ್ರೂಪ್ ತಮ್ಮ ಆಟನಾ ತಾವು ಆಡ್ತಿದ್ರೆ ಇನ್ನೊಂದು ಗ್ರೂಪ್ ಇನ್ನೊಬ್ಬರ ಚಾರಿತ್ರ್ಯಾ ಹಾಳು ಮಾಡೋದ್ರಲ್ಲೇ ಬ್ಯೂಸಿಯಾಗಿದೆ. ಇದೀಗ ಮತ್ತೆ ಧ್ರುವಂತ್ ಗಿಲ್ಲಿ ಕೆದಕಿದ್ದಾರೆ. ಕಾವ್ಯ, ಗಿಲ್ಲಿ ಸ್ನೇಹದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಧ್ರುವಂತ್!
ಇದನ್ನೂ ಓದಿ:ಶಾಂಭವಿ ನದಿಯಲ್ಲಿ ಕಂಬಳ ಸಂಘಟಕ, ಯುವ ಉದ್ಯಮಿ ಅಭಿಷೇಕ್ ಆಳ್ವ ಶವವಾಗಿ ಪತ್ತೆ!
ಈ ವಾರ ಕಳಪೆ ಯಾರು? ಉತ್ತಮ ಯಾರು? ಎಂದು ಕಾರಣ ಕೊಟ್ಟು ಸೂಚಿಸುವಂತೆ ಹೇಳಿದ್ದಾರೆ. ಆ ವೇಳೆ ಧ್ರುವಂತ್, ಗಿಲ್ಲಿ ನಟ, ಅವರು ಹಾಗೂ ಅವರ ಕಾವ್ಯ ಬಗ್ಗೆ ಬಿಟ್ಟು ಬೇರೆ ಎಲ್ಲರನ್ನು ತಮಾಷೆ ಮಾಡುತ್ತಾರೆ ಎಂದು ಹೇಳಿದ್ರು. ಇದ್ರಿಂದಾಗಿ ಗಿಲ್ಲಿನಟ, ಕಾವ್ಯ ಶೈವಗೆ ಸಿಟ್ಟು ತರಿಸಿದೆ. ಅವರ ಕಾವ್ಯ ಅನ್ನೋದು ಬೇಡ ಎಂದು ಹೇಳಿದ್ದಾರೆ. ಆಗ ಧ್ರುವಂತ್, ನನ್ನ ಅಭಿಪ್ರಾಯ ಎಂದಿದ್ದಾರೆ. ಆಗ ಕಾವ್ಯ, ಬೇರೆಯವರ ಕ್ಯಾರೆಕ್ಟರ್ ಬಗ್ಗೆ ಮಾತನಾಡಬೇಡಿ, ನಾನು ಬೇರೆ ಥರ ಮಾತಾಡ್ತೀನಿ ಎಂದು ಹೇಳಿದ್ದಾರೆ. ಆಗ ಧ್ರುವಂತ್, ನನ್ನ ವಿಷಯ ಬಂದಾಗ ನನ್ನ ಬಗ್ಗೆ ಮಾತನಾಡು, ಕಾವ್ಯ ಬಗ್ಗೆ ಬೇಡ ಎಂದು ಹೇಳಿದ್ದಾರೆ. ಇನ್ನು ರಿಷಾ ಗೌಡ ಕೂಡ, ಕಾವ್ಯ ಬಿಟ್ಟು ನಿನಗೆ ಬೇರೆ ಏನಾದರೂ ಗೊತ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಧ್ರುವಂತ್ ವಿರುದ್ಧ ಕಾವ್ಯ ಶೈವ, ಗಿಲ್ಲಿ ನಟ ಜಗಳ ಆಡಿದ್ದಾರೆ.
ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಗೌಡ, ಧ್ರುವಂತ್, ಕಾಕ್ರೋಚ್ ಸುಧಿ ಒಂದು ಗುಂಪಾಗಿದ್ದಾರೆ. ಇಲ್ಲಿ ರಾಶಿಕಾ ವಿಷಯ ಬಂದರೆ ಅಲ್ಲಿ ಸೂರಜ್ ಎಂಟ್ರಿ ಆಗುವುದು. ಜಾಹ್ನವಿ ಕೂಡ ಅಶ್ವಿನಿ ಪರವಾಗಿಯೇ ಇದ್ದಾರೆ. ಧ್ರುವಂತ್‌ನನ್ನು ಅರ್ಥ ಮಾಡಿಕೊಳ್ಳೋಕೆ ಆಗೋದಿಲ್ಲ, ಮಲ್ಲಮ್ಮ ಇದ್ದಾಗ ಇಡೀ ದಿನ ಅವರ ಜೊತೆ ಇದ್ದು ಯೂಸ್ ಮಾಡಿಕೊಂಡರು, ಅವರು ಹೋದ್ಮೇಲೆ ಮಲ್ಲಮ್ಮನ ಹೆಸರು ಹೇಳಲೇ ಇಲ್ಲ. ಯಾವ ವಿಚಾರದಲ್ಲಿಯೂ ವಾದ ಮಾಡೋದಿಲ್ಲ, ಸ್ಟ್ಯಾಂಡ್ ತಗೊಳೋದಿಲ್ಲ ಎಂದು ಗಿಲ್ಲಿ ನಟ ನೇರವಾಗಿ ಹೇಳಿದ್ದರು. ಆಗಲೂ ಕೂಡ ಧ್ರುವಂತ್, “ಗಿಲ್ಲಿ ಬರೀ ಕಾವ್ಯ ಅಂತ ಹೇಳ್ತಾರೆ, ಬೇರೆಯವರನ್ನು ಅಣುಕಿಸಿ ಮಾತಾಡ್ತಾರೆ” ಎಂದು ಹೇಳಿದ್ದರು. ಒಟ್ಟಿನಲ್ಲಿ ಈ ವಾರ ಕಳಪೆ ಯಾರು? ಉತ್ತಮ ಯಾರು ಎಂದು ಕಾದು ನೋಡಬೇಕಿದೆ. ಈ ವಿಚಾರಕ್ಕೆ ಕಿಚ್ಚ ಸುದೀಪ್ ಅವರು ಕ್ಲಾಸ್ ತಗೋತಾರಾ ಎಂದು ಕಾದು ನೋಡಬೇಕಿದೆ. ಇದೀಗ ಈ ಪ್ರೋಮೋ ನೋಡಿದ ವೀಕ್ಷಕರು ಧ್ರುವಂತ್ ಗಿಲ್ಲಿಯನ್ನ ಕೆಣಕಲು ಹೋಗಿ ಇರೋ ಮರ್ಯಾದೆ ಕಳ್ಕೊಳ್ತಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

