ಅಣ್ಣ ಎಂದು ಕರೆಯುತ್ತಿದ್ದ ತಂಗಿ ಬೆನ್ನಿಗೆ ಚೂರಿ ಹಾಕಿದ ಧ್ರುವಂತ್ – ರಕ್ಷಿತಾ ಮಾತಿನ ಶೈಲಿಯನ್ನೇ ಗೇಲಿ ಮಾಡಿದ್ದು ಸರಿನಾ?

ಮಂಗಳೂರು ಕನ್ನಡ ನೀವೆಲ್ಲಾ ಕೇಳಿರುತ್ತೀರಾ. ಏನು ಗೊತ್ತುಂಟಾ ಅಂತಾ ಮಂಗಳೂರಲ್ಲಿ ಕೆಲವರು ಮಾತನಾಡುವುದು ಕೂಡಾ ಕಾಮನ್. ಆದರೆ, ಮಂಗಳೂರಲ್ಲಿ ಈ ರೀತಿ ಮಾತೇ ಆಡಲ್ಲ ಅಂತಾ ಬಿಗ್‌ಬಾಸ್ ಸ್ಪರ್ಧಿ ಧ್ರುವಂತ್ ಹೇಳಿಕೊಂಡಿದ್ದಾರೆ. ಸಹ ಸ್ಪರ್ಧಿ ರಕ್ಷಿತಾ ಮೇಲಿನ ಸಿಟ್ಟಿಗೆ ರಕ್ಷಿತಾ ಮಾತಿನ ರೀತಿಯನ್ನ ಗೇಲಿ ಮಾಡಿದ್ದಾರೆ ಧ್ರುವಂತ್.
ಇದನ್ನೂ ಓದಿ:ದರ್ಶನ್ ಡೆವಿಲ್ ಚಿತ್ರದಲ್ಲಿ ಗಿಲ್ಲಿನಟ! ಡೆವಿಲ್ನಲ್ಲಿ ಕಾಮಿಡಿ ಕಿಂಗ್‌ಗೆ ಖಡಕ್ ರೋಲ್!
ಬಿಗ್ ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳ ಬಗ್ಗೆ ಹಿಂದಿನಿಂದ ಮಾತನಾಡೋದು ಹೊಸತಲ್ಲ. ಆದರೆ ತಂಗಿ ಅಂತಾ ರಕ್ಷಿತಾರನ್ನ ಕರೆಯುತ್ತಿದ್ದ ಧ್ರುವಂತ್ ಇದೀಗ, ರಕ್ಷಿತಾ ಬಗ್ಗೆಯೇ ಹಿಂದಿನಿಂದ ಮಾತನಾಡಿದ್ದಾರೆ. ಈ ಮೂಲಕ ಅಣ್ಣ ಅಣ್ಣ ಎಂದು ಕರೆಯುತ್ತಿದ್ದ ಧ್ರುವಂತ್ ರಕ್ಷಿತಾ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ನನ್ನು ಅಣ್ಣ ಅಂತಾನೆ ಕರೆಯುತ್ತಿದ್ದರು. ರಿಷಾ ಧ್ರುವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಸ್ಟಾಂಡ್ ತೆಗೆದುಕೊಂಡು ಮಾತನಾಡಿದ್ದು ಕೂಡ ಇದೇ ರಕ್ಷಿತಾ. ಆದರೆ ಈಗ ಮಲ್ಲಮ್ಮ ಇಲ್ಲ, ಧ್ರುವಂತ್ ಈಗ ಅಶ್ವಿನಿ ಗೌಡ ಪರ ಇದ್ದು, ಅವರನ್ನು ಮೆಚ್ಚಿಸುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದೀಗ ರಕ್ಷಿತಾ ಬಗ್ಗೆ ಮಾತನಾಡಿ ವೀಕ್ಷಕರಿಂದಲೂ ಛೀಮಾರಿ ಹಾಕಿಸಿಕೊಂಡಿದ್ದಾರೆ.
ರಾತ್ರಿ ಮಲಗುವ ಸಮಯದಲ್ಲಿ ಅಶ್ವಿನಿ, ಜಾಹ್ನವಿ, ಕೋಕ್ರೋಚ್ ಸುಧಿ, ಸೂರಜ್ ಬಳಿ ರಕ್ಷಿತಾ ಕುರಿತು ಮಾತನಾಡಿದ ಧ್ರುವಂತ್, ‘ರಕ್ಷಿತಾ ಮನೆಯಲ್ಲಿ ನಾನೇ ಅಡುಗೆ ಮಾಡ್ತಿನಿ, ನಾನೇ ಪಾತ್ರೆ ತೊಳೆಯುತ್ತೇನೆ ಎಂದು ಮುಂದೆ ಬಂದು ಮಾಡ್ತಾಳೆ. ಆದರೆ ಅದು ಸರಿ ಆಗಿರಲ್ಲ. ಇಡೀ ಮನೆಯನ್ನು ನಾನೇ ನೋಡಿಕೊಳ್ಳೋದು, ರಕ್ಷಿತಾ ಬಿಟ್ಟರೆ ಇಲ್ಲಿ ಯಾರೂ ಇಲ್ಲ ಅನ್ನೋ ಥರ ಆಡ್ತಾಳೆ. ಅವರು ತುಳುವನ್ನು ಸರಿಯಾಗಿ ಮಾತನಾಡಲ್ಲ, ಕನ್ನಡವನ್ನು ಮಾತನಾಡಲ್ಲ. ಅಷ್ಟೇ ಅಲ್ಲ ರಕ್ಷಿತಾ ಕುರಿತು ಮತ್ತಷ್ಟು ದೂರುಗಳನ್ನು ನೀಡಿದ ಧ್ರುವಂತ್ ಮಂಗಳೂರು ಕಡೆ ಯಾರೂ ಈ ತರ ಮಾತನಾಡಲ್ಲ. ನಾನು ಮೊದಲಿನಿಂದ ಇವಳ ವಿಡೀಯೋ ನೋಡಿದ್ದೇನೆ. ಅವಳಿಕೆ ಕ್ಲೀನ್ ಆಗಿ ಮಾತನಾಡೋಕೆ ಬರುತ್ತೆ. ಅವಳು ಮಾತನಾಡುವ ಸ್ಟೈಲೇ ಅವಳಿಗೆ ಪ್ಲಸ್ ಪಾಯಿಂಟ್. ಅದನ್ನೇ ಬಂಡವಾಳ ಮಾಡಿಕೊಂಡು ಇಲ್ಲಿದ್ದಾಳೆ ಎಂದಿದ್ದಾರೆ ಧ್ರುವಂತ್. ಇನ್ನು ರಕ್ಷಿತಾ ಮಾಡೋದೆಲ್ಲಾ ಬರಿ ಡವ್, ಯಾರು ಈ ಥರ ನಾಟಕ ಮಾಡ್ಕೊಂಡು, ವಯ್ಯಾರ ಮಾಡ್ಕೊಂಡು ಇರ್ತಾರೆ ಹೇಳಿ. ನಮ್ಮ ಮಂಗಳೂರಿನಲ್ಲಿ ಈ ತರಹ ಯಾರೂ ಇರಲ್ಲ. ಚಿತ್ರವಿಚಿತ್ರವಾಗಿ ವರ್ತಿಸುತ್ತಾಳೆ. ಕ್ಯಾಮೆರಾ ಮುಂದೆ ಸುಮ್ ಸುಮ್ನೆ ಮಾತನಾಡುತ್ತಾಳೆ, ಅಳ್ತಾಳೆ. ಅವಳಿಗೆ ಉಪಯೋಗ ಬಂದ್ರೆ ಯಾರನ್ನಾದ್ರೂ ಯೂಸ್ ಮಾಡಿಕೊಳ್ಳುತ್ತಾಳೆ ಅನ್ನೋದಾಗಿ ಹೇಳಿದ್ದಾನೆ ಧ್ರುವಂತ್. ಧ್ರುವಂತ್ ಮಾತು ಕೇಳಿ ಬಿಗ್ ಬಾಸ್ ವೀಕ್ಷಕರು ಧ್ರುವಂತ್ ವಿರುದ್ಧ ಕಿಡಿ ಕಾರಿದ್ದು, ರಕ್ಷಿತಾ ಯಾರನ್ನು ಹಚ್ಚಿಕೊಂಡಿದ್ದಳೋ ಅವರ ಬಗ್ಗೆ ಅವರ ಹಿಂದೆ ಮುಂದೆ ಯಾವುದೇ ರೀತಿಯಲ್ಲಿ ನೆಗೆಟಿವ್ ಆಗಿ, ಕೆಟ್ಟದಾಗಿ ಮಾತಾಡಿಲ್ಲ. ಅವಳಿಗೆ ಇಷ್ಟ ಆಗದ ಅವರಿಗೆ ಅವರ ಮುಖಕ್ಕೆ ಹೊಡೆದ ಹಾಗೆ ಮಾತಾಡ್ತಾಳೆ ಅಷ್ಟೇ. ಆದ್ರೆ ಧ್ರುವಂತ್ ಮುಂದೆಯಿಂದ ತಂಗಿ ಎಂದು, ಹೀಗೆ ಹಿಂದೆಯಿಂದ ನರಿಗಳ ಜೊತೆ ಅವಳ ಬಗ್ಗೆ ಮಾತಾಡುವುದು ತಪ್ಪು.. ಅಂತಾ ಬೈಯ್ಯುತ್ತಿದ್ದಾರೆ.

ನೋಡಿರಿ

