ಸುದೀಪ್ ಅವರು ಸ್ಪೇಸ್ ಕೊಡಲ್ಲ – ಕಿಚ್ಚ ಸುದೀಪ್ ಮೇಲೆ ಧ್ರುವಂತ್ ಸಿಟ್ಟು
ಕಿಚ್ಚನ ಕೆಣಕಿದ ಧ್ರುವಂತ್‌ಗೆ ಸುದೀಪ್ ಕ್ಲಾಸ್ ಪಕ್ಕಾ..!

ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್ ಮಾತಿನ ಭರಾಟೆ ಉಳಿದ ಸ್ಪರ್ಧಿಗಳಿಗೆ ತೀರಾ ಕಿರಿಕಿರಿ ಅನಿಸುತ್ತಿದೆ. ಅದಕ್ಕೆ ಸರಿಯಾಗಿ ಧ್ರುವಂತ್ ಈಗ ತನ್ನ ಸಿಟ್ಟನ್ನು ಕಿಚ್ಚ ಸುದೀಪ್ ಮೇಲೂ ತೋರಿಸಿದ್ದಾರೆ. ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ನನಗೆ ಮಾತಾಡಲು ಬಿಡಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ ಧ್ರುವಂತ್.
ಇದನ್ನೂ ಓದಿ:ಕೆಟ್ಟ ಕಮೆಂಟ್ ಮಾಡಿದ ಧ್ರುವಂತ್‌ಗೆ ಗ್ರಹಚಾರ ಬಿಡಿಸಿದ ಕಾವ್ಯ, ರಾಶಿಕಾ!
ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿ ಧ್ರುವಂತ್ ಸಿಕ್ಕಾಪಟ್ಟೆ ಮಾತಾಡುತ್ತಿದ್ದಾರೆ. ಕಾಲುಕೆರೆದು ಜಗಳಕ್ಕೆ ನಿಲ್ಲುತ್ತಿದ್ದಾರೆ. ಆರಂಭದಲ್ಲಿ ಶಾಂತ ಸ್ವಭಾವದವರಾಗಿದ್ದ ಧ್ರುವಂತ್ ಈಗ ಎಲ್ಲರ ಮೇಲೆ ಕೋಪಗೊಂಡಿದ್ದಾರೆ. ಅದರಲ್ಲೂ ರಕ್ಷಿತಾ ಶೆಟ್ಟಿ ಕಂಡರೆ ಸಾಕು ಉರಿದು ಬೀಳುತ್ತಿದ್ದಾರೆ. ರಕ್ಷಿತಾ ಶೆಟ್ಟಿಯ ಮಾತುಗಳ ಬಗ್ಗೆ ಧ್ರುವಂತ್ ಮಾಡುವ ಆರೋಪ ಈಗಾಗಲೇ ಸದ್ದು ಮಾಡಿತ್ತು. ಇದೀಗ ಮತ್ತೆ ಮತ್ತೆ ರಕ್ಷಿತಾ ಶೆಟ್ಟಿ ಮಾತನಾಡುವ ರೀತಿಯನ್ನ ಗೇಲಿ ಮಾಡುತ್ತಿದ್ದಾರೆ ಧ್ರುವಂತ್. ಇಷ್ಟೇ ಅಲ್ಲದೇ, ಧ್ರುವಂತ್ ಕೋಪ ಇದೀಗ ಕಿಚ್ಚ ಸುದೀಪ್ ಮೇಲೆ ತಿರುಗಿದೆ.
‘ಎಂತಾ ಗೊತ್ತುಂಟ ಗಯ್ಸ್’ ಎಂದು ರಕ್ಷಿತಾ ಶೆಟ್ಟಿ ಹೇಳೋ ಡೈಲಾಗ್ ಧ್ರುವಂತ್‌ಗೆ ಇಷ್ಟ ಆಗೋದಿಲ್ಲ. ಇದನ್ನು ಅವರು ನಿರಂತರವಾಗಿ ಹೇಳುತ್ತಿದ್ದಾರೆ. ಈ ಮೊದಲು ಮಾತನಾಡಿದ್ದ ಧ್ರುವಂತ್ ಅವರು, ‘ಮಂಗಳೂರಿನಲ್ಲಿ ಯಾರೂ ರಕ್ಷಿತಾ ರೀತಿ ಮಾತನಾಡುವುದಿಲ್ಲ’ ಎಂಬ ಆರೋಪ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್ ಅವರು, ‘ನಮಗೆ ಈ ಭಾಷೆ ಬಗ್ಗೆ ಯಾವುದೇ ತೊಂದರೆ ಇಲ್ಲ’ ಎಂದಿದ್ದರು. ಇದಕ್ಕೆ ಸಿಟ್ಟಾದ ಧ್ರುವಂತ್, ‘ರಕ್ಷಿತಾ ಅವರ ವಿಷಯ ಬಂದಾಗ ಏನು ಅನಿಸುತ್ತೆ ಅದನ್ನು ಹೇಳೋಕೆ ಅವಕಾಶ ಕೊಡಲ್ವೋ ಅಲ್ಲಿವರೆಗೆ ಮಾತನಾಡಲ್ಲ. ನನಗೆ ಸುದೀಪ್ ಅವರು ಸ್ಪೇಸ್ ಕೊಡಲ್ಲ. ನಾನು ಮಾತನಾಡ್ತೀನಿ ಅಂತ ಕೊಡಲ್ಲ’ ಎಂದು ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆ. ಇದನ್ನು ಸುದೀಪ್ ಫ್ಯಾನ್ಸ್ ಕಂಡಿಸಿದ್ದಾರೆ.

ನೋಡಿರಿ

