ದೊಡ್ಮನೆಗೆ ಬರ್ತಿದ್ದಂತೆ ರಕ್ಷಿತಾ ಶೆಟ್ಟಿಗೆ ಅಮ್ಮನಿಂದ ಕ್ಲಾಸ್! – ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ ಧ್ರುವಂತ್

ದೊಡ್ಮನೆಗೆ ಬರ್ತಿದ್ದಂತೆ ರಕ್ಷಿತಾ ಶೆಟ್ಟಿಗೆ ಅಮ್ಮನಿಂದ ಕ್ಲಾಸ್! –  ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ ಧ್ರುವಂತ್

ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಫ್ಯಾಮಿಲಿ ರೌಂಡ್‌ ನಡಿತಾ ಇದೆ. ದೊಡ್ಮನೆಗೆ ಸ್ಪರ್ಧಿಗಳ ಮನೆಯವರು ಬರುತ್ತಿದ್ದಾರೆ. ಇದೀಗ ರಕ್ಷಿತಾ ತಾಯಿ ದೊಡ್ಮನೆಗೆ ಬಂದಿದ್ದಾರೆ. ಮನೆಗೆ ಬರ್ತಿದ್ದಂತೆ ಮಗಳಿಗೆ ಸರಿಯಾಗೇ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ನಭಕ್ಕೆ ಹಾರಿದ ಬಾಹುಬಲಿ ರಾಕೆಟ್ – ಅಮೆರಿಕದ ಭಾರೀ ಭಾರದ ಉಪಗ್ರಹ ನಭಕ್ಕೆ ಹಾರಿಸಿದ ಇಸ್ರೋ

ಬಿಗ್‌ಬಾಸ್ ಸೀಸನ್ 12ರಲ್ಲಿ ಫ್ಯಾಮಿಲಿ ವೀಕ್ ಆರಂಭಗೊಂಡಿದೆ. ಮಂಗಳವಾರದ ಸಂಚಿಕೆಯಲ್ಲಿ ರಾಶಿಕಾ, ಸೂರಜ್, ಧನುಷ್ ಕುಟುಂಬದ ಸದಸ್ಯರು ಎಂಟ್ರಿ ಕೊಟ್ಟಿದ್ದರು. ಇದೀಗ ದೊಡ್ಮನೆಗೆ ರಕ್ಷಿತಾ ಶೆಟ್ಟಿ  ತಾಯಿಯ ಆಗಮನವಾಗಿದೆ. ಮನೆಗೆ ಬರ್ತಿದ್ದಂತೆ ರಕ್ಷಿತಾಗೆ ಅಮ್ಮ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀಟ್‌ ಆಗಿ ಕೂದಲು ಬಾಚಿಕೊಳ್ಳಬೇಕು. ಚೆಂದ ಕಾಣ್ಬೇಕು ಅಂತ ಬುದ್ದಿವಾದ ಹೇಳಿದ್ದಾರೆ.

ರಕ್ಷಿತಾ ಶೆಟ್ಟಿಯನ್ನು ಹೊರತುಪಡಿಸಿ ಬಿಗ್‌ಬಾಸ್ ಮನೆಯಲ್ಲಿರುವ ಎಲ್ಲಾ ಮಹಿಳಾ ಸ್ಪರ್ಧಿಗಳು ಕಿರುತೆರೆ ಹಿನ್ನೆಲೆಯಿಂದ ಬಂದ ಕಲಾವಿದರು. ಹಾಗಾಗಿ ಮಹಿಳಾ ಸ್ಪರ್ಧಿಗಳು ತಮ್ಮ ಲುಕ್‌ಗೆ ಆದ್ಯತೆ ನೀಡುತ್ತಾರೆ. ಆದ್ದರಿಂದ ಚೆಂದ ಚೆಂದದ ಉಡುಗೆ ಧರಿಸಿಕೊಂಡು ಚೆನ್ನಾಗಿ ಕಾಣಿಸಿಕೊಳ್ಳುತ್ತಾರೆ. ಆದ್ರೆ ರಕ್ಷಿತಾ ಶೆಟ್ಟಿ ಸಂಪೂರ್ಣ ತದ್ವಿರುದ್ದವಾಗಿದ್ದಾರೆ. ರಕ್ಷಿತಾ ಶೆಟ್ಟಿ ಸರಿಯಾಗಿ ತಲೆ ಬಾಚಿಕೊಳ್ಳಲ್ಲ, ಮೇಕಪ್ ಮಾಡಿಕೊಳ್ಳಲ್ಲ ಮತ್ತು ಬ್ರ್ಯಾಂಡೆಡ್ ಡ್ರೆಸ್ ಧರಿಸಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಮತ್ತೊಂದು ಕಡೆ ಇರೋ ಬಟ್ಟೆಗಳನ್ನು ಧರಿಸಿಕೊಂಡು ತಲೆ ಬಾಚಿಕೊಂಡು ಶಿಸ್ತಿನಿಂದ ಇರಬಹುದು. ಆದ್ರೆ ರಕ್ಷಿತಾ ಶೆಟ್ಟಿ ಅವರಿಗೆ ತಮ್ಮ ಲುಕ್ ಬಗ್ಗೆ ಕಾಳಜಿ ಇಲ್ಲ. ಆದ್ದರಿಂದ ಮನೆಯಲ್ಲಿರುವಂತೆಯೇ ಬಿಗ್‌ಬಾಸ್‌ ನಲ್ಲಿಯೂ ಇದ್ದಾರೆ ಎಂಬುವುದು ಸ್ಪರ್ಧಿಗಳ ಮಾತಾಗಿದೆ.

ಬಿಗ್‌ಬಾಸ್ ಮನೆಗೆ ಬರುತ್ತಿದ್ದಂತೆ ರಕ್ಷಿತಾ ಶೆಟ್ಟಿಗೆ ತಾಯಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂದಲು ಸಹ ಸರಿ ಮಾಡಿಕೊಳ್ಳಲ್ಲ ಎಂದು ಹೇಳಿ ಕೂದಲು ಬಾಚಿದ್ದಾರೆ. ಮಕ್ಕಳು ಕೂದಲು ಹರಡಿಕೊಂಡು ಹೇಗೆ ಬೇಕೋ ಹಾಗಿದ್ರೆ ತಾಯಂದಿರಿಗೆ ಖಂಡಿತ ಇಷ್ಟವಾಗಲ್ಲ. ಮನೆಗೆ ಬರುತ್ತಿದ್ದಂತೆ ಮಗಳ ಕೂದಲನ್ನು ತಾಯಿ ಸರಿ ಮಾಡಿದ್ದಾರೆ.

ಇನ್ನು ಫ್ಯಾಮಿಲಿ ವೀಕ್ ಆಗಿರೋದರಿಂದ ರಕ್ಷಿತಾ ಶೆಟ್ಟಿ ಅವರಿಗೆ ತಾಯಿ ಜೊತೆ ವ್ಲಾಗ್‌ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಬಿಗ್‌ಬಾಸ್ ಮೊಬೈಲ್ ಕಳುಹಿಸಿದ್ದಾರೆ. ತಾಯಿ ತಂದಿರುವ ಮೀನಿನ ಅಡುಗೆ ಸವಿಯುತ್ತಾ ರಕ್ಷಿತಾ ಶೆಟ್ಟಿ ವ್ಲಾಗ್ ಮಾಡಿದ್ದಾರೆ. ಇತ್ತ ಧ್ರುವಂತ್ ಸಾಷ್ಟಂಗ ನಮಸ್ಕಾರ ಹಾಕಿ ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ.

Shwetha M