ತನ್ನ ಹೊಗಳಿದ್ರೆ ಮಾತ್ರ ಗಿಲ್ಲಿ ಫೇವರಿಟ್?‌ – ಗಿಲ್ಲಿ ಸಾಂಗ್‌ನಿಂದಲೇ ಬದಲಾದ್ರಾ ಧ್ರುವಂತ್?

ತನ್ನ ಹೊಗಳಿದ್ರೆ ಮಾತ್ರ ಗಿಲ್ಲಿ ಫೇವರಿಟ್?‌ – ಗಿಲ್ಲಿ ಸಾಂಗ್‌ನಿಂದಲೇ ಬದಲಾದ್ರಾ ಧ್ರುವಂತ್?

ಬಿಗ್‌ಬಾಸ್‌ ಮನೆಯಲ್ಲಿ ಧ್ರುವಂತ್‌ ಯಾವಾಗ ಹೇಗೆ ಇರ್ತಾರೆ ಎಂದು ಹೇಳೋಕೆ ಸಾಧ್ಯ ಇಲ್ಲ. ಒಂದು ವಾರ ಒಬ್ಬ ಸ್ಪರ್ಧಿಯ ಜೊತೆ ಕ್ಲೋಸ್‌ ಆದ್ರೆ, ಮತ್ತೊಂದು ವಾರ ಅದೇ ಸ್ಪರ್ಧಿ ವಿರುದ್ಧ ಧ್ರುವಂತ್‌ ತಿರುಗಿ ಬೀಳ್ತಾರೆ. ನೆನ್ನೆ ಗಿಲ್ಲಿ ಜೊತೆ ಜಗಳವಾಡಿದ್ದ ಧ್ರುವಂತ್‌ ಈಗ ಫುಲ್‌ ಚೇಂಜ್‌ ಆಗಿದ್ದಾರೆ. ಇದೀಗ ಗಿಲ್ಲಿಗೆ ಸಾರಿ ಕೇಳಿ ಫ್ಲೈಯಿಂಗ್‌ ಕಿಸ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ದರ್ಶನ್‌ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್‌ ಕೇಸ್‌ – ಇಬ್ಬರು ಆರೋಪಿಗಳು ಅರೆಸ್ಟ್!‌

ಬಿಗ್‌ಬಾಸ್‌ ಶೋ ಅಂದ್ರೆ ವ್ಯಕ್ತಿತ್ವದ ಆಟ. ಕ್ಷಣ ಕ್ಷಣಕ್ಕೂ ಸ್ಪರ್ಧಿಗಳ ಮನಸ್ಥಿತಿ ಬದಲಾಗುತ್ತಿರುತ್ತೆ. ಇಲ್ಲಿ ಡ್ರಾಮಾ ಮಾಡೋಕೆ ಸಾಧ್ಯ ಇಲ್ಲ. ಆದ್ರೆ ಧ್ರುವಂತ್‌ ಹೇಗೆ ಅಂತ ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಅರ್ಥ ಮಾಡಿಕೊಳ್ಳೋಕೆ ಆಗ್ತಿಲ್ಲ. ಧ್ರುವಂತ್‌ ಮನಸ್ಥಿತಿ ಕ್ಷಣ ಕ್ಷಣಕ್ಕೂಬದಲಾಗುತ್ತಲೇ ಇರುತ್ತೆ. ನಿನ್ನೆ ಗಿಲ್ಲಿ ಜೊತೆ ಸದಾ ಕಿತ್ತಾಡುತ್ತಿದ್ದ ಧ್ರುವಂತ್ ಏಕಾಏಕಿ ಬದಲಾಗಿದ್ದಾರೆ. ಅಷ್ಟೇ ಅಲ್ಲ ಗಿಲ್ಲಿ ಬಳಿ ಧ್ರುವಂತ್ ಕ್ಷಮೆ ಕೇಳಿದ್ದಾರೆ. ;

ಹೌದು,  ಗಿಲ್ಲಿ ಏನೇ ಹೇಳಿದ್ರೂ ಧ್ರುವಂತ್‌ ಅದನ್ನು ವಿರೋಧಿಸುತ್ತಾರೆ. ತನ್ನ ಕೆಲಸ ಆಗ್ಬೇಕು ಅಂದಾಗ ಮಾತ್ರ ಗಿಲ್ಲಿ ಜೊತೆ ಚೆನ್ನಾಗಿ ಮಾತಾಡ್ತಾರೆ ಅನ್ನೋ ಅಭಿಪ್ರಾಯವಿದೆ. ಜನವರಿ 1ರ ಎಪಿಸೋಡ್​​ನಲ್ಲೂ ಹಾಗೆಯೇ ಆಗಿದೆ. ಗಿಲ್ಲಿಗೆ ರ್ಯಾಪ್ ಸಾಂಗ್ ಬರೆಯುವಂತೆ ಬಿಗ್ ಬಾಸ್ ಸೂಚಿಸಿದರು. ಮನೆಯ ಸದಸ್ಯರು ಹಾಗೂ ಇಷ್ಟು ದಿನಗಳ ಜರ್ನಿ ಬಗ್ಗೆ ಇದರಲ್ಲಿ ವಿವರಣೆ ಇರಬೇಕು ಎಂಬ ಸೂಚನೆ ಇತ್ತು. ಈ ಹಾಡು ಬರೆಯುವಾಗ ಗಿಲ್ಲಿ ಬಳಿ ಬಂದ ಧ್ರುವಂತ್ ಕಿರಿಕ್ ಮಾಡಿಕೊಂಡರು. ನನ್ನ ಹೆಸರನ್ನು ಹಾಡಿನಿಂದ ತೆಗಿ  ಎಂದು ಪದೇ ಪದೇ ಹೇಳಿದರು. ಅಲ್ಲೇ ಇದ್ದ ರಘು ಅವರು ಇದನ್ನು ಅಲ್ಲಗಳೆದಿದ್ದಾರೆ. ಪಾಸಿಟಿವ್ ಆಗಿ ಮಾತ್ರ ಹಾಡನ್ನು ಬರೆಯಲು ಹೇಳಿದ್ದೇನೆ. ಹೀಗಾಗಿ, ನಿನ್ನ ಬಗ್ಗೆ ಕೆಟ್ಟದಾಗಿ ಇರೋದಿಲ್ಲ ಎಂದು ರಘು ಗಿಣಿಗೆ ಹೇಳಿದಂತೆ ಹೇಳಿದರೂ ಕಿವಿಗೆ ಹಾಕಿಕೊಂಡಿಲ್ಲ ಧ್ರುವಂತ್. ನಂತರ ಹಾಡಿನಲ್ಲಿ ಧ್ರುವಂತ್ ಬಗ್ಗೆ ಇದ್ದ ಸಾಲುಗಳು ಕೇಳಿ ಅವರೇ ಖುಷಿಪಟ್ಟಿದ್ದಾರೆ. ಅಲ್ಲಿಂದ ಧ್ರುವಂತ್‌ ವರ್ತನೆ ಬದಲಾಗಿದೆ.

ಗಿಲ್ಲಿ ಹಾಡಿನಲ್ಲಿ ಧ್ರುವಂತ್​​ ಅಂದ್ರೆ ಭಕ್ತಿ, ಅದೇ ಅವರಿಗೆ ಶಕ್ತಿ  ಎಂದು ಬರೆದಿದ್ದರು. ಈ ಸಾಲು ಧ್ರುವಂತ್​​ಗೆ ಖುಷಿ ಕೊಟ್ಟಿದೆ. ಇದಾದ ಬಳಿಕ ಅವರು ಕ್ಷಮೆ ಕೇಳಿದರೇ ಎಂಬ ಪ್ರಶ್ನೆ ಮೂಡಿದೆ. ಹ್ಯಾಪಿ ನ್ಯೂ ಇಯರ್ ಎಂದು ಇಬ್ಬರೂ ವಿಶ್ ಮಾಡಿಕೊಂಡರು. ಆ ಬಳಿಕ ಗಿಲ್ಲಿಗೆ ಫ್ಲೈಯಿಂಗ್ ಕಿಸ್ ಕೊಟ್ಟರು. ಕ್ಷಮೆ ಕೇಳಿದರು. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.

Shwetha M