ಆ್ಯಕ್ಷನ್ ಪ್ರಿನ್ಸ್ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್ – ಧ್ರುವ ಸರ್ಜಾ ಮುಂದಿನ ಸಿನಿಮಾ ಯಾವ್ದು?

ಆ್ಯಕ್ಷನ್ ಪ್ರಿನ್ಸ್ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್ – ಧ್ರುವ ಸರ್ಜಾ ಮುಂದಿನ ಸಿನಿಮಾ ಯಾವ್ದು?

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದ ಸಾಂಗ್ ಶೂಟಿಂಗ್ ಶುರು ಆಗಿದೆ. ದೂರದ ಸ್ವಿಜರ್‌ಲ್ಯಾಂಡ್ ಅಲ್ಲಿಯೇ ಚಿತ್ರದ ಲವ್ ಸಾಂಗ್ ಅನ್ನ ಚಿತ್ರೀಕರಿಸೋ ಪ್ಲಾನ್ ಮಾಡಲಾಗಿದೆ. ಇದ್ರ ನಡುವೆ ಧ್ರುವ ಸರ್ಜಾ ಮುಂಬರುವ ಚಿತ್ರದ ಬಗ್ಗೆ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ಭೈರತಿ ರಣಗಲ್’ನಿರ್ದೇಶಕ ನರ್ತನ್ ಜೊತೆ ಧ್ರುವ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ.

ಇದನ್ನೂ ಓದಿ : ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ 5ವರ್ಷ ಇರ್ತಾರೆ – ಸಚಿವ ಜಮೀರ್ ಅಹಮ್ಮದ್

ಕೆವಿಎನ್ ಪ್ರೊಡಕ್ಷನ್ ಸಾರಥ್ಯದಲ್ಲಿ ಧ್ರುವ ಮತ್ತು ನರ್ತನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ ಎಂಬುದು ಸದ್ಯದ ಟಾಕ್. ಮಫ್ತಿ, ಭೈರತಿ ರಣಗಲ್ ಚಿತ್ರ ನಿರ್ದೇಶನ ಮಾಡಿ ಗೆದ್ದಿರುವ ನರ್ತನ್ ಈಗ ಧ್ರುವಗೆ ನಿರ್ದೇಶನ ಮಾಡಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ನರ್ತನ್ ಚಿತ್ರದ ಕಥೆ ಬರೆಯುತ್ತಿದ್ದು, ಪ್ರಾರಂಭಿಕ ಹಂತದಲ್ಲಿದೆ. ವಿದೇಶದಲ್ಲಿರುವ ಧ್ರುವ ವಾಪಸ್ ಬಂದ್ಮೇಲೆ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯಲಿದೆ. ಆ ನಂತರ ಚಿತ್ರದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ ಎಂಬುದು ಸದ್ಯದ ಅಪ್‌ಡೇಟ್.

ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿರುವ ನಿರ್ದೇಶಕ ಮತ್ತು ಧ್ರುವ ಜೊತೆಯಾದ್ರೆ ಸಿನಿಮಾ ಸಖತ್ ಆಗಿರುತ್ತದೆ ಎಂಬುದು ಅಭಿಮಾನಿಗಳ ಲೆಕ್ಕಚಾರ. ಹೀಗಾಗಿ ಇಬ್ಬರೂ ಒಟ್ಟಿಗೆ ಚಿತ್ರ ಮಾಡಲಿ, ಬೇಗ ಚಿತ್ರದ ಬಗ್ಗೆ ಗುಡ್ ನ್ಯೂಸ್ ಕೊಡಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

Shwetha M