ಮಾರ್ಟಿನ್ ವಿರುದ್ಧ ಕನ್ನಡಿಗರು ಕೆರಳಿದ್ದೇಕೆ? – ಟ್ರೈಲರ್ ನೋಡಲು ದುಡ್ಡು ಕೊಡ್ಬೇಕಾ?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ಅಂದರೆ ತಪ್ಪಾಗಲು.. ಬಹುಕೋಟಿ ವೆಚ್ಚದ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.. ದ್ರುವ ಸರ್ಜಾ ಲುಕ್, ಸ್ಟೈಲ್‌ಗೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.. ಮೊದಲು ಟ್ರೈಲರ್ ಅನ್ನ ಚಿತ್ರ ಮಂದಿಗಳಲ್ಲಿ ತೋರಿಸಿದ ಚಿತ್ರತಂಡ ಬಳಿಕ ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿತ್ತು.. ಇದೀಗ ಮಾರ್ಟಿನ್ ಚಿತ್ರ ತಂಡದ ವಿರುದ್ಧ ಕನ್ನಡಿಗರು ಸಿಡಿಮಿಡಿಗೊಂಡಿದ್ದಾರೆ.. ಸ್ಯಾಂಡಲ್‌ವುಡ್ ಮೂವಿ ಆದ್ರೂ ಚಿತ್ರ ತಂಡಕ್ಕೆ ಕನ್ನಡಿಗರು ಬೇಡವಾದ್ರಾ ಅಂತಾ ಪ್ರಶ್ನೆ ಮಾಡ್ತಾ ಇದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಧಾನ ಹೊರ ಹಾಕಿದ್ದಾರೆ.. ಅಷ್ಟಕ್ಕೂ ಮಾರ್ಟಿನ್ ಚಿತ್ರ ತಂಡದ ವಿರುದ್ದ ಕನ್ನಡಿಗರು ಸಿಟ್ಟಾಗಿದ್ದೇಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಭಾರತ ಕರೆಸಿಕೊಳ್ಳಲು ಪಾಕ್ ಹೊಸ ಟ್ರಿಕ್ಸ್! – ಟೂರ್ನಿ ಪೋಸ್ಟ್ ಪೋನ್.. IPLಗೆ ಶಾಕ್
ಮಾರ್ಟಿನ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸದ್ಯ ಭಾರಿ ಸೌಂಡ್ ಮಾಡ್ತಾ ಇದೆ.. ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.. ಸಿನಿಮಾದ ಟೀಸರ್‌ನ ಮುಂದುವರೆದ ಭಾಗ ಎನ್ನುವಂತೆ ಮಾರ್ಟಿನ್ ಸಿನಿಮಾದ ಟ್ರೇಲರ್ ಕಾಣಿಸುತ್ತದೆ. ಈ ಟ್ರೇಲರ್‌ನಲ್ಲಿ ಯಾವುದೇ ಡೈಲಾಗ್ ಇಲ್ಲ. ಬರೀ ಆಕ್ಷನ್ ದೃಶ್ಯಗಳ ತುಣುಕುಗಳೇ ಹೆಚ್ಚಿದೆ. ಪಾಕಿಸ್ತಾನ್ ಹಾಗೂ ಭಾರತದ ಸೋಲ್ಜರ್ ವಿಚಾರವೂ ಇಲ್ಲಿ ಬರೋದ್ರಿಂದ ಹಿಂದಿ ಭಾಷೆಯನ್ನ ಇಲ್ಲಿ ಹೆಚ್ಚಾಗಿ ಬಳಸಲಾಗಿದೆ. ಹಲವು ಹೆಲಿಕಾಪ್ಟರ್‌ಗಳು, ಹೊಡೆದಾಟಗಳ ದೃಶ್ಯಗಳು ಕಾಣಿಸಿವೆ. ಜತೆಗೆ, ಧ್ರುವ ಸರ್ಜಾ ಅವರ ರಗಡ್ ಬಾಡಿ ಕಾಣಿಸಿದೆ. ಸಿನಿಮಾದ ಟ್ರೇಲರ್ ಅದ್ಬುತವಾಗಿ ಮೂಡಿಬಂದಿದೆ.. ಅದ್ರಲ್ಲಿ ಎರಡು ಮಾತಿಲ್ಲ.. ಆದ್ರೀಗ ಕನ್ನಡಿಗರು ಮಾತ್ರ ಸಿನಿ ತಂಡದ ವಿರುದ್ದ ಸಿಟ್ಟಾಗಿದ್ದಾರೆ..
ಹೌದು, ಇದೇ ಅಕ್ಟೋಬರ್ 11ರಂದು ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ದೇಶ-ವಿದೇಶಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಒಟ್ಟು ಹದಿಮೂರು ಭಾಷೆಗಳಲ್ಲಿ ಮಾರ್ಟಿನ್ ಸಿನಿಮಾ ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಜತೆಗೆ ಬಂಗಾಳಿ, ಕೊರಿಯಾ, ಅರೇಬಿಕ್, ರಷ್ಯನ್, ಚೈನೀಸ್, ಇಂಗ್ಲೀಷ್ ಸೇರಿ ಹಲವು ಭಾಷೆಗಳಲ್ಲಿ ಟ್ರೇಲರ್ ರಿಲೀಸ್ ಮಾಡಲಾಗುತ್ತಿದೆ. ಮೊನ್ನೆಯಷ್ಟೇ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೂಟ್ಯೂಬ್, ಸೋಶಿಯಲ್ ಮೀಡಿಯಾಗಳಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಆದ್ರೀಗ ಮಾರ್ಟಿನ್ ಚಿತ್ರದ ಕನ್ನಡ ಟ್ರೈಲರ್ ಎಲ್ಲಿ ಅನ್ನೋ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಕನ್ನಡಿಗರು ಕೂಡ ಆಕ್ರೋಶ ಹೊರಹಾಕಿದ್ದಾರೆ. ಕನ್ನಡದ ಮಾರ್ಟಿನ್ ಟ್ರೈಲರ್ ಅನ್ನ ಆಗಸ್ಟ್-4 ರಂದು ವೀರೇಶ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗಿತ್ತು. ಆದರೆ, ಇದು ಉಚಿತ ಪ್ರದರ್ಶನ ಆಗಿರಲಿಲ್ಲ. ಬದಲಾಗಿ ಟಿಕೆಟ್ ಕೊಂಡು ಈ ಒಂದು ಟ್ರೈಲರ್ ನೋಡ್ಬೇಕಿತ್ತು. ಇದಕ್ಕೂ ಕೂಡ ಕೆಲವರು ಅಸಮಧಾನ ಹೊರ ಹಾಕಿದ್ರು.. ಟ್ರೈಲರ್ ನೋಡಲು ದುಡ್ಡು ಕೊಡ್ಬೇಕಾ ಅಂತಾ.. ಆದ್ರೇ ಈ ಹಣವನ್ನ ಚಿತ್ರ ತಂಡ ಒಳ್ಳೆ ಉದ್ದೇಶಕ್ಕೆ ಕಲೆಕ್ಟ್ ಮಾಡಿದೆ.. ಈ ದುಡ್ಡನ್ನ ಸಿನಿಮಾ ತಂಡ ಗೋಶಾಲೆಗೆ ಕೊಡ್ತಿದೆ.
ಇನ್ನು ಕನ್ನಡದ ಸಿನಿಮಾ ಆಗಿ ಯೂಟ್ಯೂಬ್‌ನಲ್ಲಿ ಕನ್ನಡ ಟ್ರೇಲರ್ ಯಾಕೆ ರಿಲೀಸ್ ಮಾಡಿಲ್ಲ ಅಂತಾ ಅಭಿಮಾನಿಗಳು ಕೇಳ್ತಾ ಇದ್ದಾರೆ. ಇದೀಗ ಇದಕ್ಕೆ ಡೈರೆಕ್ಟರ್ ಎ.ಪಿ.ಅರ್ಜುನ್ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಾರ್ಟಿನ್ ಚಿತ್ರದ ಟ್ರೈಲರ್ ಎಲ್ಲ ಭಾಷೆಯಲ್ಲೂ ರಿಲೀಸ್ ಆಗಿದೆ. ಆದರೆ, ಇಂಡಿಯನ್ ಭಾಷೆ ಅಂತ ಬಂದ್ರೆ, ಹಿಂದಿ ಒಂದೇ ಟ್ರೈಲರ್ ಇದೆ. ಇದಕ್ಕೆ ಕಾರಣವೂ ಇದೆ. ಸಿನಿಮಾದಲ್ಲಿ ಪಾಕಿಸ್ತಾನ್ ವಿಚಾರ ಬರುತ್ತದೆ. ಹಾಗಾಗಿಯೇ ಹಿಂದಿ ಭಾಷೆಯನ್ನ ಬಿಟ್ಟಿದ್ದೇವೆ. ಚಿತ್ರದ ನಾಯಕ ನಟ ಧ್ರುವ ಸರ್ಜಾ ಇಂಗ್ಲೀಷ್ ಭಾಷೆಯಲ್ಲಿ ಡೈಲಾಗ್ ಹೊಡೆದಿರೋದ್ರಿಂದಲೇ ಆ ಇಂಗ್ಲೀಷ್ ಭಾಷೆ ಹಾಗೆ ಬಿಟ್ಟಿದ್ದೇವೆ.
ಹಾಗೆ ಮಾರ್ಟಿನ್ ಚಿತ್ರದಲ್ಲಿ ಹಿಂದಿ ಮತ್ತು ಇಂಗ್ಲೀಷ ಭಾಷೆ ಇದೆ. ಅದನ್ನ ನಾವು ಕನ್ನಡಕ್ಕೆ ಡಬ್ ಮಾಡೋಕೆ ಹೋಗಿಲ್ಲ. ಯಾಕಂದ್ರೆ ಆ ಫೀಲ್ ಹೋಗಿ ಬಿಡುತ್ತದೆ ಅಂತಲೇ ಅದನ್ನ ಹಾಗೆ ಬಿಟ್ಟಿದ್ದೇವೆ. ಆದರೆ, ಇದು ಕನ್ನಡ ಸಿನಿಮಾನೇ ಆಗಿದೆ. ಸಿನಿಮಾದಲ್ಲೂ ಈ ರೀತಿನೇ ಇರುತ್ತದೆ. ಹಿಂದಿ ಭಾಷೆಯನ್ನ ಕನ್ನಡಕ್ಕೆ ಡಬ್ ಮಾಡೋ ಕೆಲಸ ಮಾಡಿಲ್ಲ ಅಂತಾ ಹೇಳಿದ್ದಾರೆ.
ಇಂಡಿಯನ್ ಭಾಷೆ ಲೆಕ್ಕದಲ್ಲಿ ಹಿಂದಿ ಒಂದೇ ಕೊಟ್ಟಿದ್ದೇವೆ. ಇತರ ಭಾಷೆಯ ಟ್ರೈಲರ್ ಅಂತ ಬಂದ್ರೆ, ರಷ್ಯಾ, ಅರೆಬಿಕ್, ಕೋರಿಯಾ, ಚೈನೀಸ್, ಬಾಂಗ್ಲಾ ಹೀಗೆ ಆಯಾ ಭಾಷೆಯಲ್ಲಿಯೇ ಮಾರ್ಟಿನ್ ಟ್ರೈಲರ್ ನೋಡಬಹುದಾಗಿದೆ ಅಂತಾ ಹೇಳಿದ್ದಾರೆ.. ಮಾರ್ಟಿನ್ ಟ್ರೈಲರ್ ವೀಕ್ಷಕರ ಮನಗೆದ್ದರೂ ಈಗ ಕನ್ನಡಿಗರ ಅಸಮಧಾನಕ್ಕೆ ಕಾರಣವಾಗಿದೆ.. ಇನ್ನಾದ್ರೂ ಚಿತ್ರ ತಂಡ ಕನ್ನಡದಲ್ಲಿ ಟ್ರೈಲರ್ ರಿಲೀಸ್ ಮಾಡುತ್ತಾ ಅಂತಾ ಕಾಡು ನೋಡ್ಬೇಕಿದೆ.