‘ಧೂಮಂ’ ಸಿನಿಮಾ ರಿಲೀಸ್ – ಸಿಗರೇಟ್ ಸೇದುವ ಪ್ರತಿ ವ್ಯಕ್ತಿಗೂ ಕನೆಕ್ಟ್ ಆಗುತ್ತಿದೆ ಈ ಸಿನಿಮಾ..!

‘ಧೂಮಂ’ ಸಿನಿಮಾ ರಿಲೀಸ್ – ಸಿಗರೇಟ್ ಸೇದುವ ಪ್ರತಿ ವ್ಯಕ್ತಿಗೂ ಕನೆಕ್ಟ್ ಆಗುತ್ತಿದೆ ಈ ಸಿನಿಮಾ..!

ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿರುವ ಧೂಮಂ ಸಿನಿಮಾ ರಿಲೀಸ್ ಆಗಿದೆ. ಸಿಗರೇಟ್ ಸೇದುವುದರಿಂದ ಆಗುವ ಪರಿಣಾಮ ತೋರಿಸಲು ನಿರ್ದೇಶಕರು ಪ್ರಯತ್ನ ಪಟ್ಟಿರುವುದು ಈ ಚಿತ್ರದಲ್ಲಿ ಸ್ಪಷ್ಟವಾಗಿದೆ. ಹಾಗಂತ ಎಲ್ಲಿಯೂ ನಿರ್ದೇಶಕರು ಬೋಧನೆ ಮಾಡಿಲ್ಲ. ಅದರ ಬದಲು ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಎಲ್ಲವನ್ನೂ ವಿವರಿಸಿದ್ದಾರೆ. ಈ ವಿವರಣೆ ಕೊಂಚ ಮಟ್ಟಿಗೆ ಎಳೆದಿರುವುದು ಸಿನಿಮಾ ಸ್ವಲ್ಪ ಬೋರ್ ಆಗುತ್ತದೆ.

ಇದನ್ನೂ ಓದಿ: ʼನಟ ಶಾರುಖ್​ ​ ರೀಲ್​ ದೇವದಾಸ್​, ರಾಹುಲ್​ ಗಾಂಧಿ ನಿಜ ಜೀವನದಲ್ಲಿ ದೇವದಾಸ್ʼ! – ಬಿಜೆಪಿ ಲೇವಡಿ

ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಚಾಲಾಕಿತನ ಇರುವಂತಹ ಅವಿನಾಶ್ ಒಂದು ಸಿಗರೇಟ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಜನರು ಹೆಚ್ಚು ಸಿಗರೇಟು ಸೇದುವಂತೆ ಮಾಡುವುದು ಆತನ ಕೆಲಸ. ಆ ಕ್ಷೇತ್ರದಲ್ಲಿ ಅವನಿಗೆ ಯಶಸ್ಸು ಕೂಡ ಸಿಗುತ್ತದೆ. ಆದರೆ ಅದೇ ಯಶಸ್ಸು ಅವನಿಗೆ ಅಪಾಯವನ್ನೂ ತಂದೊಡ್ಡುತ್ತದೆ. ಅದು ಹೇಗೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಸಿಗರೇಟ್ ಸೇದುವುದು ಅಪಾಯಕಾರಿ ಎಂದು ಗೊತ್ತಿದ್ದರೂ ಕೂಡ ಅದಕ್ಕೆ ದಾಸರಾಗಿರುವವರ ಬಗ್ಗೆ ‘ಧೂಮಂ’ ಸಿನಿಮಾ ಯಾವುದೇ ರೀತಿಯಲ್ಲೂ ಕನಿಕರ ತೋರಿಸುವುದಿಲ್ಲ. ಆದರೆ ಎನೂ ತಪ್ಪು ಮಾಡದೇ, ಸಿಗರೇಟ್ನಿಂದ ತೊಂದರೆಗೆ ಒಳಗಾದವರ ಬಗ್ಗೆ ಕಾಳಜಿ ವಹಿಸುವ ಗುಣ ಈ ಕಥೆಗೆ ಇದೆ. ಪವನ್ ಕುಮಾರ್ ಅವರು ಆಯ್ದುಕೊಂಡಿರುವ ವಿಷಯ ತುಂಬ ಪ್ರಸ್ತುತವಾಗಿದೆ. ಎಲ್ಲಿಯವರೆಗೆ ಸಿಗರೇಟ್ ಹಾವಳಿ ಇರುತ್ತದೋ ಅಲ್ಲಿಯವರೆಗೂ ಈ ಸಿನಿಮಾ ಕಥೆ ಫ್ರೆಶ್ ಆಗಿರುತ್ತದೆ. ಸಿಗರೇಟ್ ಸೇದುವ ಪ್ರತಿ ವ್ಯಕ್ತಿಗೂ ಈ ಸಿನಿಮಾ ಕನೆಕ್ಟ್ ಆಗುತ್ತದೆ. ಧೂಮಪಾನ, ಮದ್ಯಪಾನದ ರೀತಿಯ ಬಿಸ್ನೆಸ್ನಲ್ಲಿ ಇರಬಹುದಾದ ಒಳಿತು-ಕೆಡುಕುಗಳ ಬಗ್ಗೆ ಈ ಸಿನಿಮಾದಲ್ಲಿ ಒಂದು ಚರ್ಚೆ ಇದೆ. ಆದರೆ ಈ ಎಲ್ಲ ವಿಚಾರಗಳನ್ನು ತೆರೆಗೆ ತರುವಲ್ಲಿ ಅನಗತ್ಯವಾಗಿ ಸರ್ಕಸ್ ನಡೆದಂತಿದೆ. ಕೊಲೆ, ಟ್ರ್ಯಾಪ್, ಕಿಡ್ನಾಪ್, ಚೇಸಿಂಗ್ ಮುಂತಾದ ಸನ್ನಿವೇಶಗಳೇ ಇಡೀ ಸಿನಿಮಾದಲ್ಲಿ ತುಂಬಿ ಹೋಗಿವೆ. ಏನು ನಡೆಯುತ್ತಿದೆ ಎಂಬುದೇ ತಿಳಿಯದ ರೀತಿಯಲ್ಲಿ ಮೊದಲಾರ್ಧ ಮೂಡಿಬಂದಿದೆ. ದ್ವಿತೀಯಾರ್ಧದಲ್ಲಿ ಕಹಾನಿ ನಿಧಾನಕ್ಕೆ ತೆರೆದುಕೊಳ್ಳುತ್ತದೆ. ಅಲ್ಲಿಯೂ ಕೂಡ ಪ್ರೇಕ್ಷಕರಿಗೆ ಅನಗತ್ಯ ಗೊಂದಲ ಮೂಡಿಸುತ್ತದೆ.

suddiyaana