ಎಂ.ಎಸ್ ಧೋನಿಗೆ ಜಗತ್ತಿನಾದ್ಯಂತ ಅಭಿಮಾನಿಗಳು – ಧೋನಿ ಪತ್ನಿ ಮಾತ್ರ ‘ಅಲ್ಲು ಅರ್ಜುನ್ ‘ಅಭಿಮಾನಿಯಂತೆ..!

ಎಂ.ಎಸ್ ಧೋನಿಗೆ ಜಗತ್ತಿನಾದ್ಯಂತ ಅಭಿಮಾನಿಗಳು – ಧೋನಿ ಪತ್ನಿ ಮಾತ್ರ ‘ಅಲ್ಲು ಅರ್ಜುನ್ ‘ಅಭಿಮಾನಿಯಂತೆ..!

ಟೀಮ್ ಇಂಡಿಯಾದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಅಂತಾನೇ ಫೇಮಸ್ ಆಗಿರುವ ಎಂ.ಎಸ್ ಧೋನಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಮಹಿಗಾಗಿ ಫ್ಯಾನ್ಸ್ ಈಗಲೂ ಜೀವ ಬಿಡ್ತಾರೆ. ಹೀಗಿರುವಾಗ ಧೋನಿ ಪತ್ನಿ ಸಾಕ್ಷಿ ಮಾತ್ರ ತಾನು ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ ಎಂದು ಹೇಳುವ ಮೂಲಕ ಸರ್‌ಪ್ರೈಸ್ ನೀಡಿದ್ದಾರೆ. ಸಾಕ್ಷಿ ಮಾತು ಕೇಳಿ ಅಲ್ಲು ಅರ್ಜುನ್ ಅಭಿಮಾನಿಗಳ ಸಂತಸ ಹೇಳತೀರದಾಗಿದೆ.

ಇದನ್ನೂ ಓದಿ: ಕ್ಯಾಪ್ಟನ್ ಕೂಲ್ ಧೋನಿಗೆ ಕೃಷಿಯೆಂದರೆ ಖುಷಿ – ಹೈನುಗಾರಿಕೆಯೆಂದರೆ ಮಾಹಿಗೆ ಇಷ್ಟ..!

ಹೈದರಾಬಾದ್‌ನಲ್ಲಿ ‘ಎಲ್‌ಜಿಎಂ’ ಸಿನಿಮಾದ ಪ್ರಮೋಷನ್ ಪ್ರೊಗ್ರಾಮ್ ನಡೆದಿದೆ. ಧೋನಿ ಎಂಟರ್ಟೇನ್ಮೆಂಟ್’ ಸಂಸ್ಥೆ ಮೂಲಕ ಎಂ.ಎಸ್ ಧೋನಿ ತಮಿಳು ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಮಹಿ ಪತ್ನಿ ಸಾಕ್ಷಿ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ‘ಎಲ್‌ಜಿಎಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಪ್ರಚಾರದ ಸಲುವಾಗಿ ಹೈದರಾಬಾದ್‌ನಲ್ಲಿ ಇವೆಂಟ್ ಮಾಡಲಾಗಿದೆ. ಇದೇ ವೇಳೆ ಸಾಕ್ಷಿ ಜೊತೆ ನೀವು ಯಾವುದಾದರೂ ತೆಲುಗು ಸಿನಿಮಾಗಳನ್ನು ನೋಡಿದ್ದೀರಾ’ ಎಂದು ಪ್ರಶ್ನೆ ಕೇಳಲಾಯಿತು. ಆಗ ಅವರು ಅಲ್ಲು ಅರ್ಜುನ್ ಬಗ್ಗೆ ಖುಷಿಯಲ್ಲಿಯೇ ಮಾತನಾಡಿದರು. ‘ಅಲ್ಲು ಅರ್ಜುನ್ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ. ಆ ಸಮಯದಲ್ಲಿ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಇತ್ಯಾದಿ ಒಟಿಟಿ ಇರಲಿಲ್ಲ. ಅಲ್ಲು ಅರ್ಜುನ್ ನಟನೆಯ ತೆಲುಗು ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿತ್ತು. ನಾನು ಅಲ್ಲು ಅರ್ಜುನ್ ಅವರ ದೊಡ್ಡ ಅಭಿಮಾನಿ’ ಎಂದು ಸಾಕ್ಷಿ ಧೋನಿ ಹೇಳಿದ್ದಾರೆ.

ಈ ವಿಡಿಯೋ ಈಗ ವೈರಲ್ ಆಗಿದೆ. ಧೋನಿ ಅವರಿಗೆ ತಮಿಳುನಾಡಿನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಾಗಿ ಅವರು ತಮ್ಮ ಸಂಸ್ಥೆಯ ಮೊದಲ ಸಿನಿಮಾವನ್ನು ತಮಿಳಿನಲ್ಲಿ ನಿರ್ಮಿಸುತ್ತಿದ್ದಾರೆ. ‘ಎಲ್‌ಜಿಎಂ’ ಸಿನಿಮಾಗೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡಿದ್ದಾರೆ. ಹರೀಶ್ ಕಲ್ಯಾಣ್, ಇವಾನಾ, ಯೋಗಿ ಬಾಬು, ಮಿರ್ಚಿ ವಿಜಯ್, ನದಿಯಾ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜುಲೈ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

suddiyaana